ಯಲ್ಲಾಲಿಂಗೇಶ್ವರ ಪ್ರೌಢಶಾಲೆಯಲ್ಲಿ ಸೈಕಲ್ ವಿತರಣೆ

ಲೋಕದರ್ಶನ ವರದಿ

ಇಂಡಿ 21: ಸಕರ್ಾರ ಶೈಕ್ಷಣಿಕ ಬೆಳವಣಿಗೆಗಾಗಿ ಹತ್ತು-ಹಲವು ಮಹತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಮಕ್ಕಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ವಿಕಾಸ ಖೇಡ ಹೇಳಿದರು.

ಅವರು ತಾಲೂಕಿನ ಮಿರಗಿ ಗ್ರಾಮದ ಸದ್ಗುರು ಯಲ್ಲಾಲಿಂಗೇಶ್ವರ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಶೈಕ್ಷಣಿಕ ಏಳ್ಗೆಗೆ ಮಕ್ಕಳನ್ನು ಶಾಲೆಗೆ ಸೆಳೆಯುವ ಉದ್ದೇಶ ಹೊಂದಿ ಸಕರ್ಾರ ಯೋಜನೆಗಳನ್ನು ರೂಪಿಸಿದೆ. ಮಕ್ಕಳು ತಮಗೆ ನೀಡಿದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಶಾಲೆಯ ಹೆಸರನ್ನು ರಾಜ್ಯಮಟ್ಟಕ್ಕೇರಿಸಬೇಕೆಂದು ವಿದ್ಯಾಥರ್ಿಗಳಿಗೆ ತಿಳಿಸಿದರು.

ಗ್ರಾ ಪಂ ಅಧ್ಯಕ್ಷ ಗುರುನಾಥ ನಾಯ್ಕೋಡಿ, ಭಿಮಣ್ಣ ಅವಟಿ, ರಮೇಶ ಕನ್ಮಡಿ, ಪ್ರಾಥಮಿಕ ಶಾಲಾ ಮುಖ್ಯಗುರು ಸಿ.ಕೆ. ಬಡಿಗೇರ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಜೆ.ಎಸ. ದೇವರಮನಿ, ಶಿಕ್ಷಕರಾದ ವೈ.ಜಿ. ಬಿರಾದಾರ,  ಎನ್.ಎಸ್. ಚೌಹಾಣ, ಜೆ.ಸಿ ಗಬಸಾವಳಗಿ ಮತ್ತಿತರರು ಇದ್ದರು.