ಘಟಪ್ರಭಾ 18: ದೇಶದಲ್ಲಿ ಪ್ರಧಾನಿ ಮೋದಿ ಅಲೆ ಬೀಸುತ್ತಿದ್ದು ಕಳೆದ ಬಾರಿ 2014 ರ ಚುನಾವಣೆಗಿಂತ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸಂಸದರು ಆಯ್ಕೆಯಾಗುತ್ತಾರೆ ಎಂದು ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಗುರುವಾರ ಚಿಕ್ಕೋಡಿಯಲ್ಲಿ ನಡೆಯುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲು ತೆರಳುತ್ತುರುವ ಸಂದರ್ಭದಲ್ಲಿ ಅರಭಾಂವಿ ಮಠದ ಪ್ರಭುದೇವ ಪೆಟ್ರೋಲಿಯಂ ಹತ್ತಿರ ಸಮಾವೇಶಕ್ಕೆ ತೆರಳುತ್ತಿದ್ದ ಕಾರ್ಯಕರ್ತರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಅತಿ ಹೆಚ್ಚು ಸಂಸದರು ಆಯ್ಕೆಯಾಗುವ ಮೂಲಕ ಸಮ್ಮಿಶ್ರ ಸಕರ್ಾರ ಪತನಗೊಂಡು ಬಿಜೆಪಿ ಸಕರ್ಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ವಿಭಾಗ ಪ್ರಭಾರಿ ಈರಣ್ಣ ಕಡಾಡಿ ಮಾತನಾಡಿ, ಜಿಲ್ಲೆಯ ಬೆಳಗಾವಿ ಹಾಗೂ ಚಿಕ್ಕೋಡಿ ಸಂಸದರು ಅತಿ ಹೆಚ್ಚು ಮತಗಳಿಂದ ಆಯ್ಕೆಯಾಗುತ್ತಾರೆ ಎಂದರು. ನೀಲಕಂಠ ಕಪ್ಪಲಗುದ್ದಿ, ಬಸವರಾಜ ಕಡಾಡಿ, ಬಸವರಾಜ ಹುಡೇದ, ಪರಪ್ಪ ಗಿರೆಣ್ಣವರ, ಪುಂಡಲಿಕ ಅರಭಾಂವಿ, ಕುಸುಮಾ ಖನಗಲ್ಲಿ, ಕೃಷ್ಣಪ್ಪ ಮುಂಡಿಗನಾಳ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.