ಡಿ.29ರ ಭಾನುವಾರ ಬೆಳಿಗ್ಗೆ 8-45ರ ಸುಮಾರಿಗೆ 50ಕ್ಕೂ ಅಧಿಕ ಪಟ್ಟೆ ತಲೆ ಹೆಬ್ಬಾತು ಪತ್ತೆ
ಹಾವೇರಿ 29: ಇಲ್ಲಿನ ಐತಿಹಾಸಿಕ ಹೆಗ್ಗೇರೆಕೆರೆಯ ಪರಿಸರದಲ್ಲಿ ಡಿ.29ರ ಭಾನುವಾರ ಬೆಳಿಗ್ಗೆ 8-45ರ ಸುಮಾರಿಗೆ 50ಕ್ಕೂ ಅಧಿಕ ಪಟ್ಟೆ ತಲೆ ಹೆಬ್ಬಾತು (ಬಾರ್ ಹೆಡೆಡ್ ಗೂಸ್) ಪತ್ತೆಯಾಗಿವೆ. ಸಂತಾನೋತ್ಪತ್ತಿಗಾಗಿ ಸಾವಿರಾರು ಕಿ.ಮೀ.ದೂರದ ಮಂಗೋಲಿಯಾದಿಂದ ನೆರೆಯ ಗದಗ ಜಿಲ್ಲೆಯ ಮಾಗಡಿ ಕೆರೆಗೆ ಬಂದಿರುವ ಪಟ್ಟೆ ತಲೆ ಹೆಬ್ಬಾತುಗಳು ಹಾವೇರಿಯ ಪರಿಸರದಲ್ಲಿ ಆಹಾರ ಅರಸಿಯೋ, ವಲಸೆಯ ಪ್ರವೃತ್ತಿಯಿಂದಲೋ ಏನು ? ಹಾವೇರಿ ಪರಿಸರಕ್ಕೆ ಆಗಮಿಸಿವೆ.ಇವುಗಳು ಹಾರಾಟ ನಡೆಸಿದ ವೇಳೆ ಅವುಗಳ ಕೆಲವು ಚಿತ್ರಗಳನ್ನು ಹಿರಿಯ ಪರ್ತಕರ್ತರು ಹಾಗೂ ಖ್ಯಾತ ಛಾಯಾಗ್ರಾಹಕರಾದ ಮಾಲತೇಶ ಅಂಗೂರ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಸಿದ್ದಾರೆ.