ಮೂಕಿಹಾಳ ಹಜರತ್ ಲಾಡ್ಲೆ ಮಶ್ಯಾಕ್ ಜಾತ್ರಾ ಮಹೋತ್ಸವ ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿ

Mookihala Hazrat Ladle Mashyak Jatra Mahotsava Free Eye Checkup Camp Successful

ಮೂಕಿಹಾಳ ಹಜರತ್ ಲಾಡ್ಲೆ ಮಶ್ಯಾಕ್ ಜಾತ್ರಾ ಮಹೋತ್ಸವ ಉಚಿತ ನೇತ್ರ ತಪಾಸಣಾ ಶಿಬಿರ ಯಶಸ್ವಿ 

 ತಾಳಿಕೋಟಿ 05: ತಾಲೂಕಿನ ಮೂಕಿಹಾಳ ಗ್ರಾಮದಲ್ಲಿ ಹಜರತ್ ಲಾಡ್ಲೆ ಮಶ್ಯಾಕ್ ದರ್ಗಾ ಜಾತ್ರಾ ಮಹೋತ್ಸವ ಅಂಗವಾಗಿ ಅನುಗ್ರಹ ಕಣ್ಣಿನ ಆಸ್ಪತ್ರೆ, ಅನುಗ್ರಹ ವಿಷನ್ ಫೌಂಡೇಶನ್ ಟ್ರಸ್ಟ್‌ ಮತ್ತು ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ವಿಜಯಪುರ ಇವರ ಸಹಯೋಗದಲ್ಲಿ ರವಿವಾರ ಹಮ್ಮಿಕೊಂಡ ಉಚಿತ ನೇತೃ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಯಶಸ್ವಿಯಾಯಿತು. ತಾಳಿಕೋಟಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಶಿಬಿರದ ಸದುಪಯೋಗವನ್ನು ಪಡೆದುಕೊಂಡರು. ಶಿಬಿರವನ್ನು ಉದ್ಘಾಟಿಸಿ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಖ್ಯಾತ ನೇತ್ರ ತಜ್ಞ ಡಾಟ ಪ್ರಭುಗೌಡ ಲಿಂಗದಳ್ಳಿ ಅವರು ಮಾತನಾಡಿ ಕಣ್ಣಿನ ಆರೋಗ್ಯದ ಕುರಿತು ನಿರ್ಲಕ್ಷೆ ತೋರಬಾರದು ಕಣ್ಣು ನಮ್ಮ ದೇಹದ ಅಮೂಲ್ಯ ಅಂಗವಾಗಿದೆ, ಆರ್ಥಿಕ ತೊಂದರೆ ಇರುವವರು ಯಾವ ಕಾರಣಕ್ಕೂ ತಮ್ಮ ಅಂದತ್ವ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಕಳೆದ 25 ವರ್ಷಗಳಿಂದ ಅನುಗ್ರಹ ಆಸ್ಪತ್ರೆ ವಿಜಯಪುರ ಹಾಗೂ ಗುಲ್ಬರ್ಗ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದೆ ಸುಮಾರು 10 ಲಕ್ಷ ಕ್ಕೂ ಹೆಚ್ಚು ಹೊರ ರೋಗಿಗಳ ತಪಾಸಣೆಯನ್ನು ನಾವು ನಡೆಸಿದ್ದೇವೆ, 3 ಲಕ್ಷಕ್ಕೂ ಹೆಚ್ಚು ಜನರ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ ಎಂದ ಅವರು ವಿಜಯಪುರ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಇಂದು ಕಣ್ಣಿನ ಪ್ರಾಥಮಿಕ ತಪಾಸಣಾ ಆಸ್ಪತ್ರೆಗಳನ್ನು ತೆರೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ.ಕಳೆದ15 ವರ್ಷಗಳಿಂದ ಈ ಜಾತ್ರೆಯಲ್ಲಿ ಉಚಿತ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಇದಕ್ಕೆ ಜಾತ್ರಾ ಕಮಿಟಿಯವರ ಸಹಕಾರ ನಮ್ಮೊಂದಿಗೆ ಇದೆ. ಇಂದಿನ ಶಿಬಿರದ ಸದುಪಯೋಗವನ್ನು ತಾವೆಲ್ಲರೂ ಮಾಡಿಕೊಳ್ಳಬೇಕು ಎಂದರು. ಶಿಬಿರದಲ್ಲಿ ಒಟ್ಟು 350 ಜನರು ತಪಾಸಣೆ ಮಾಡಿಕೊಂಡರು,ಅದರಲ್ಲಿ 125 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಕಾಸೀಮ ಪಟೇಲ ಪಾಟೀಲ, ಡಾಟಪ್ರಿಯಂಕಾ,ಡಾಟಅಕ್ಬರ್ ಪಟೇಲ ಬಿರಾದಾರ,ಅಬ್ದುಲ್ ರಜಾಕ ಕೂಚಬಾಳ,ಮಲ್ಲನಗೌಡ ಬಿರಾದಾರ, ಪ್ರವೀಣ ರೆಡ್ಡಿ,ಮಹಾಂತೇಶ್, ಜುನೇದ ನದಾಫ್,ಸಮೀರ ಪಟೇಲ ಬಿರಾದಾರ,ನಬಿ ಕೊಂಡಗೂಳಿ, ಅನುಗ್ರಹ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಜಾತ್ರಾ ಸಮಿತಿ ಸದಸ್ಯರು ಇದ್ದರು.