ವ್ಯಕ್ತಿ ಕಾಣೆ: ಪ್ರಕರಣ ದಾಖಲು
ಕೊಪ್ಪಳ 02: ಕೊಪ್ಪಳ ತಾಲೂಕಿನ ನೇಲೋಗಿಪೂರದ ನಿವಾಸಿ 40 ವರ್ಷದ ಗೋಣಿ ಬಸಪ್ಪ ತಂದೆ ಹನುಮಪ್ಪ ಅಂಕಲಿ ಎಂಬ ವ್ಯಕ್ತಿ 2024ರ ನವೆಂಬರ್ 08 ರಂದು ಕಾಣೆಯಾಗಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಅಳವಂಡಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:99/2024 ಕಲಂ ಮನುಷ್ಯ ಕಾಣೆ ಅಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯು 5.3 ಅಡಿ ಎತ್ತರ, ಸಾದಾರಣ ಮೈಕಟ್ಟು, ಸಾದಗಪ್ಪು ಮೈ ಬಣ್ಣ ಕಾಣೆಯಾದಾಗ ಕೆಂಪು ಬಣ್ಣದ ಚಕ್ಸ್ ಶರ್ಟ್, ನೀಲಿ ಬಣ್ಣದ ಲಂಗಿ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಈ ಚಹರೆಯ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಅಳವಂಡಿ ಪೋಲಿಸ್ ಠಾಣೆ ಪಿಎಸ್‌ಐ ದೂ.ಸಂ: 08533-285233, 9480803747 ಎಸ್ಪಿ ಕಚೇರಿ: 08539-230111, ಸಿಪಿಐ ಕೊಪ್ಪಳ: 08539-285233 ಹಾಗೂ ಜಿಲ್ಲಾ ಕಂಟ್ರೋಲ್ ರೂಂ:08539-230222 ಅಥವಾ 100 ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಅಳವಂಡಿ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.