ನವೀಕೃತಗೊಂಡ ಶಾಲಾ ಕಟ್ಟಡ ಉದ್ಘಾಟಿಸಿದ ಸಚಿವ ಎಚ್. ಕೆ. ಪಾಟೀಲ
ಗದಗ 16 : ಸಹಕಾರಿ ರಂಗದ ಭೀಷ್ಮ ದಿವಂಗತ ಕೆ.ಎಚ್. ಪಾಟೀಲರ ಜನ್ಮಶತಮಾನೋತ್ಸವ ದಿನವಾದ ರವಿವಾರದಂದು ಹುಲಕೋಟಿಯ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಕೇಂದ್ರ ಶಾಲೆಗೆ ಭೇಟಿ ನೀಡಿ ನವೀಕೃತಗೊಂಡ ಶಾಲಾ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ.ಆರ್ ಪಾಟೀಲ, ಜಿಲ್ಲಾಪಂಚಾಯತ ಸಿಇಓ ಭರತ್, ಶಾಲಾ ಸಿಬ್ಬಂದಿ, ಪೋಷಕರು, ಸ್ಥಳೀಯ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.