ಮೆಟ್ರಿ ಶಂಕರ್‌ಗೆ ಕಲಾ ಸೇವಾ ರತ್ನ ಪ್ರಶಸ್ತಿ ಪುರಸ್ಕಾರ

Metri Shankar conferred with Kala Seva Ratna Award

ಮೆಟ್ರಿ ಶಂಕರ್‌ಗೆ ಕಲಾ ಸೇವಾ ರತ್ನ ಪ್ರಶಸ್ತಿ ಪುರಸ್ಕಾರ 

ಕಂಪ್ಲಿ 23: ಬೆಂಗಳೂರು ಕನ್ನಡ ಫಿಲಂ ಚೇಂಬರ್ ವತಿಯಿಂದ ನೀಡುವ ಪ್ರತಿಷ್ಟಿತ 2025ರ ವರನಟ ಡಾಕ್ಟರ್ ರಾಜಕುಮಾರ್ ಅವರ ಸ್ಫೂರ್ತಿದಾಯಕವಾದ ಕಲಾ ಸೇವಾ ರತ್ನ ಪ್ರಶಸ್ತಿಯನ್ನು ಕಂಪ್ಲಿ ತಾಲೂಕಿನ ಮೆಟ್ರಿ ಕೆ.ಶಂಕರ್ ಇವರು ಭಾನುವಾರ ಸ್ವೀಕರಿಸಿದರು. ಬೆಂಗಳೂರು ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಫಿಲಿಂ ಚೇಂಬರ್ ಅಧ್ಯಕ್ಷ ಎಂ.ಎಸ್‌.ರವೀಂದ್ರ, ಉಪಾಧ್ಯಕ್ಷ ಡಾ.ಎನ್‌.ಪ್ರಹ್ಲಾದ್, ಖಜಾಂಚಿ ಡಾ.ರಾಘವ ದಾನಿ, ಕಾರ್ಯಕಾರಿ ಸಮಿತಿಯ ವಿಜಯ, ನಾಗಲಕ್ಷ್ಮಿ ಇವರು ಮೆಟ್ರಿ ಕೆ.ಶಂಕರ್ ಇವರಿಗೆ ಕಲಾ ಸೇವಾ ರತ್ನ ಪ್ರಶಸ್ತಿ ಪುರಸ್ಕಾರದೊಂದಿಗೆ ಗೌರವಿಸಿದರು.  
ಕಲಾ ಸೇವೆಯಾದ ರಂಗಭೂಮಿಯಲ್ಲಿ ನಟ, ನಿರ್ದೇಶಕ, ತಂತ್ರಜ್ಞಾನ, ನಾಟಕಕಾರನಾಗಿ, 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ 800ಕ್ಕೂ ಹೆಚ್ಚು ಪ್ರದರ್ಶನಗಳನ್ನ ನೀಡಿದ್ದಾರೆ. 4 ದಾರವಾಹಿಗಳಲ್ಲಿ, 3 ಸಿನಿಮಾಗಳಲ್ಲಿ, 8 ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸುಮಾರು 18 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ಕಲಾಸೇವೆ ಸಲ್ಲಿಸುತ್ತಾ ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯ ಪ್ರದರ್ಶನ ಕಲಾ ನಾಟಕ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ, ಜೊತೆಗೆ ನಾಟಕದಲ್ಲಿ ಸಂಶೋಧನೆಯನ್ನ ಮಾಡುತ್ತಿದ್ದಾರೆ. ಇವರ ಅಮೂಲ್ಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಸಲಾಯಿತು.ಈ ಸಮಾರಂಭದಲ್ಲಿ ಮೆಟ್ರಿ ಕೆ.ಶಂಕರ್ ಇವರ ಸಹೋದರ ಕೆ.ನಾಗರಾಜ ಇದ್ದರು.  
ಮಾ001ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಮೆಟ್ರಿ ಕೆ.ಶಂಕರ್ ಇವರಿಗೆ ಕಲಾ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.