ಪುರುಷರು ಕಾಣೆ
ಹಾವೇರಿ 22: ಸವಣೂರ ಪಟ್ಟಣದ ಹಾವಣಗಿ ಪ್ಲಾಟ್ ನಿವಾಸಿ 35 ವರ್ಷದ ಗುಡದಯ್ಯ ಮಲ್ಲ ಗುಡಗೇರಿ 23 ಫೆಬ್ರುವರಿ 2023 ರಂದು ಹಾಗೂ ಕೃಷ್ಣಾಪೂರ ಗ್ರಾಮದ 41 ವರ್ಷದ ರಾಮಕೃಷ್ಣ ಲಕ್ಷ್ಮಣ ಮಲ್ಲಿಕೇರಿ 4 ಏಪ್ರಿಲ್ 2022ರಂದು ಮನೆಯಿಂದ ಹೋದವರು ಮರಳಿ ಬಾರದೆ ಕಾಣೆಯಾಗಿರುವುದಾಗಿ ಸವಣೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕಾಣೆಯಾದ ಗುಡದಯ್ಯ 5.6 ಅಡಿ ಎತ್ತರ, ಗೋದಿಗೆಂಪು ಮೈಬಣ್ಣ, ತೆಳ್ಳನೆ ಮೈಕಟ್ಟು, ಉದ್ದಮೂಗು ಹೊಂದಿದ್ದು, ಕೆಂಪು ಬಣ್ಣದ ಅಂಗಿ, ಕರಿ ಬಣ್ಣದ ಪ್ಯಾಂಟ್‌ಧರಿಸಿದ್ದಾನೆ. ರಾಮಕೃಷ್ಣ 5.6 ಅಡಿ ಎತ್ತರ, ಸಾದಗಪ್ಪು ಮೈಬಣ್ಣ, ಸಾಧಾರಣಮೈಕಟ್ಟು, ದುಂಡು ಮುಖ ಹೊಂದಿದ್ದಾನೆ ಎಂದು ಸವಣೂರ ಪೊಲೀಸ್ ಠಾಣೆ ಪೊಲೀಸ್ ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.