ಮೆಹೆರಬಾಬಾ ದತ್ತಿಕಾರ್ಯಕ್ರಮದಲ್ಲಿ ಮೆಹೆರ ಪುರಸ್ಕಾರ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮ

ಮೆಹೆರಬಾಬಾ ದತ್ತಿಕಾರ್ಯಕ್ರಮದಲ್ಲಿ ಮೆಹೆರ ಪುರಸ್ಕಾರ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮ Meher Award Presentation and Lecture Program at Meher Baba Charitable Trust Program

 

ಧಾರವಾಡ 02 :   ಅವತಾರ ಮೆಹರಬಾಬಾರವರು ಲೋಕಕಲ್ಯಾಣಕ್ಕಾಗಿ ಅವತರಿಸಿ ಬಂದ ಅವತಾರ ಪುರುಷರು. ಅವರು ಮಾನವೀಯತೆಯ ಪ್ರತಿರೂಪವಾಗಿದ್ದರು ಎಂದು ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರಾದ ಸಾಹಿತಿ ಲಕ್ಷ್ಮೀಕಾಂತ ಇಟ್ನಾಳ ಅಭಿಪ್ರಾಯ ಪಟ್ಟರು. 

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಅವತಾರ ಮೆಹೆರಬಾಬಾ ದತ್ತಿಕಾರ್ಯಕ್ರಮದಲ್ಲಿ ಮೆಹೆರ ಪುರಸ್ಕಾರ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಅವತಾರ ಮೆಹೆರಬಾಬಾರವರ ಆಧ್ಯಾತ್ಮಿಕ ಜೀವನ ಹಾಗೂ ಸಾಮಾಜಿಕ ಕೊಡುಗೆ’ ಕುರಿತು ಮಾತನಾಡಿದರು. 

ಅವತಾರ ಮೆರಬಾಬಾರವರು ಬಾಲ್ಯದಿಂದಲೇ ಮೌಲ್ಯಯುತ ವಾದಗುಣ ಸ್ವಭಾವವನ್ನು ಹೊಂದಿದ್ದರು. ಪ್ರತಿಯೊಂದನ್ನು ಪ್ರಶ್ನಿಸಿ ಉತ್ತರ ಪಡೆಯುವ ಗುಣ ಅವರಲ್ಲಿತ್ತು. ಮೆಹೆರಬಾಬಾ ಇದರ ಅರ್ಥದಯಾವಂತನಾದ ತಂದೆ ಎಂದು. ತಮ್ಮ ನಿಸ್ವಾರ್ಥಜನಹಿತ ಕಾರ್ಯಗಳ ಮೂಲಕ  ಅಪಾರ ಸಂಖ್ಯೆಯ ಶಿಷ್ಯವರ್ಗ ಹೊಂದಿದ್ದರು. ಮೆಹೆರಬಾಬಾರವರು ಮಾನವೀಯ ಅಂತಃಕರಣದ ಸಾಕಾರ ಮೂರ್ತಿ.ಸಕಲ ಜೀವರಾಶಿಗಳ ಬಗ್ಗೆ ಲೇಸನ್ನೇ ಬಯಸಿದ ಪುಣ್ಯಪುರುಷರು. 

ಸಂಗೀತ ಬಗ್ಗೆಯೂ ಅವರಿಗೆ ಅಪಾರ ಆಸಕ್ತಿ ಇತ್ತು. ಬಡವರ ನಿರ್ಗತಿಕರ ದುರ್ಭಲ ವರ್ಗದವರ, ಭಿಕ್ಷುಕರ ಬಗ್ಗೆ ಅಪಾರ ಕಳಕಳಿ ಹೊಂದಿದವರಾಗಿದ್ದ ಅವರು ರೋಗಿಗಳ ಸೇವೆಯನ್ನು ಪ್ರಾಮಾಣಿಕತೆಯಿಂದ ಮಾಡಿದರು. ಶಿಕ್ಷಣದ  ಬಗ್ಗೆಯೂ ಬಾಬಾರವರಿಗೆ ಅಪಾರ ಕಾಳಜಿ ಇತ್ತು. ಸಮಾಜದಲ್ಲಿ ಆಳವಾಗಿದ್ದ ಅಸ್ಪೃಶ್ಯತೆ ನಿವಾರಣೆಗೆ ಮನಸಾ ಕಾರ್ಯನಿರ್ವಹಿಸಿದರು. ಎಲ್ಲರೂ ಆ ದೇವರಲ್ಲಿ ಶ್ರದ್ಧೆ, ಭಕ್ತಿ, ನಂಬಿಕೆ ಇಟ್ಟಾಗ ಕೃತಾರ್ಥರಾಗಲು ಸಾಧ್ಯ ಎಂಬುದು ಅವರ ದಿವ್ಯವಾಣಿಯಾಗಿತ್ತು. ಜೀವನದುದ್ದಕ್ಕೂ ಅನೇಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಸಾರ್ಥಕಜೀವನ ಸಾಗಿಸಿದರು. ಅವರ ಸ್ಮರಣೆ ನಮಗೆ ಪುಣ್ಯದ ಕಾರ್ಯ ಎಂದರು. 

ಕಾರ್ಯಕ್ರಮದಲ್ಲಿ ಮೆಹೆರ ಪುರಸ್ಕಾರಕ್ಕೆ ಭಾಜನರಾದ ಡಾ.ಎಚ್‌.ಬಿ. ನೀಲಗುಂದ  ಹಾಗೂ ಎಂ.ಎನ್‌. ವೆಂಕಟೇಶಅವರನ್ನು ದತ್ತಿದಾನಿಗಳ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ವಿವಿಧಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಪ್ರೊ. ಎಂ.ಎನ್‌. ವೆಂಕಟೇಶ ಹಾಗೂ ಡಾ.ಎಚ್‌.ಬಿ. ನೀಲಗುಂದ ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು. 

ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಬ್ಬರನ್ನು ಹಾಗೂ ಕವಿವ ಸಂಘದಗೌರವ ವ್ಯವಸ್ಥಾಪಕರಾದ ಶಿ.ಮ.ರಾಚಯ್ಯನವರನ್ನು ದತ್ತಿದಾನಿಗಳು ಸನ್ಮಾನಿಸಿ, ಗೌರವಿಸಿದರು.   ದತ್ತಿ ದಾನಿಗಳಾದ ನಿವೃತ್ತ ಬ್ಯಾಂಕ್ ಅಧಿಕಾರಿಯು.ಎಸ್‌. ಕುನ್ನಿಭಾವಿ ದತ್ತಿ ಆಶಯ ಕುರಿತು ಮಾತನಾಡಿದರು. ಗೌರವ ಉಪಸ್ಥಿತರಿದ್ದ ಡಾ.ಲತೀಫ್ ಎಸ್‌.ಕೆ.ಸಾಧಕರ ಸನ್ಮಾನ ಪತ್ರಓದಿದರು. 

ಅಧ್ಯಕ್ಷತೆ ವಹಿಸಿದ್ದ ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಇಂದು ನಾವಾಡುವ ಮಾತುಗಳು ಸಾಮಾಜಿಕ ವಾತಾವರಣವನ್ನು ಕಲುಷಿತಗೊಳಿಸುತ್ತಿವೆ. ಸರ್ವಧರ್ಮ ಸಮಾನತೆಯನ್ನು ಮಾತನಾಡುವ ನಾವು ಜಾತಿ-ಜಾತಿಗಳ ನಡುವೆ. ದ್ವೇಷ ಸಾಧಿಸುವುದು ಸರಿ ಅಲ್ಲಾ. ಸರ್ವರಲ್ಲಿ ಅಸಮಾನತೆ ಹೋಗಿ ನಾವೆಲ್ಲಒಂದು ಭಾವನೆ ಮೂಡಬೇಕು. ದಾರ್ಶನಿಕರು ಮಹಾತ್ಮರು ಸರ್ವಸಮಾನತೆಯ ಚಿಂತನೆ ಬಿತ್ತಿ ಸಮಸಮಾಜ ನಿರ್ಮಿಸಲು ಪ್ರಯತ್ನಿಸಿದರು ಎಂದು ಹೇಳಿದರು. ಅವತಾರ ಮೆಹೆರ ಬಾಬಾರ ಚಿಂತನೆಗಳು ನಮಗೆ ದಾರೀದೀಪವಾಗಿವೆ ಎಂದರು. .  

ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಶಂಕರ ಕುಂಬಿ, ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿ, ವಂದಿಸಿದರು.  ಕಾರ್ಯಕ್ರಮದಲ್ಲಿ ಡಾ.ಶೈಲಜಾತ.ಅಮರಶೆಟ್ಟಿ, ಶ್ರೀನಿವಾಸ ವಾಡಪ್ಪಿ ಎ.ಎ. ದರ್ಗಾ, ದಾನಪ್ಪಕಬ್ಬೇರ, ಬಿ.ಎಸ್‌. ಶಿರೋಳ ಸೇರಿದಂತೆ ಮುಂತಾದವರಿದ್ದರು.