ಹೊಸಪೇಟೆ ನಗರಕ್ಕೆ ದಿಶಾ ಸಭೆಗೆ ಆಗಮಿಸಿದ್ದ ಮಾನ್ಯ ಸಂಸದರಾದ ತುಕಾರಮ್ ರವರನ್ನು ಭೇಟಿ
ಹೊಸಪೇಟೆ 30 : ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸ್ಥಳೀಯ ಅಂಜುಮನ್ ಕಮಿಟಿಯ ಅಧ್ಯಕ್ಷರಾದ ಹೆಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ರವರು ಮತ್ತು ಕಮಿಟಿಯ ಪದಾಧಿಕಾರಿಗಳು ಇಂದು ಹೊಸಪೇಟೆ ನಗರಕ್ಕೆ ದಿಶಾ ಸಭೆಗೆ ಆಗಮಿಸಿದ್ದ ಮಾನ್ಯ ಸಂಸದರಾದ ಈ. ತುಕಾರಮ್ ರವರನ್ನು ಭೇಟಿ ಮಾಡುವ ಮೂಲಕ ಹೊಸಪೇಟೆ ನಗರದ ಸ್ಥಳೀಯ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ವತಿಯಿಂದ ಪ್ರಾರಂಭಿಸಿರುವ ಕೌಶಲ್ಯಾಭಿವೃದ್ದಿ ತರಬೇತಿ ಕೇಂದ್ರಕ್ಕೆ ಸಲಕರಣೆ, ಕಟ್ಟಡ ಹಾಗೂ ಮೂಲಭೂತ ಸೌಕರ‌್ಯಗಳಿಗೆ ಅನುದಾನವನ್ನು ಒದಗಿಸಿಕೊಡಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು.
ಕಮಿಟಿಯು ಸಮಸ್ತ ಸಮುದಾಯದ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಅನೇಕ ಸಾಮಾಜಿಕ, ಶೈಕ್ಷಣಿಕ, ಅರ್ಥಿಕ ಅಭಿವೃಧ್ದಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಈ ನಿಟ್ಟಿನಲ್ಲಿ ಅಂಜುಮನ್ ಕಮಿಟಿಯ ವತಿಯಿಂದ ನಗರದ ಅಜಾದ್ ನಗರದಲ್ಲಿ ಯುವಕ ಯುವತಿಯರಿಗೆ ಜೀವನಾಧಾರಿತ ಕೌಶಲ್ಯ ತರಬೇತಿ ನೀಡುವ ಸಲುವಾಗಿ ಕೇಂದ್ರವನ್ನು ಪ್ರಾರಂಭಿಸುತ್ತಿದ್ದು, ಸದರಿ ತರಬೇತಿ ಕೇಂದ್ರಕ್ಕೆ ಅಗತ್ಯವಾದ ಕಟ್ಟಡ, ಸಲಕರಣೆ ಮತ್ತು ಮೂಲ ಸೌಕರ್ಯಗಳಿಗೆ ಸುಮಾರು ರೂ. 2.00 ಕೋಟಿ ರೂಪಾಯಿಗಳ ಅನುದಾನವು ಅಗತ್ಯವಾಗಿರುವುದರಿಂದ ಮಾನ್ಯ ಸಂಸದರ ಯಾವುದಾದರೂ ಯೋಜನೆ ಅಡಿಯಲ್ಲಿ ಅಂಜುಮನ್ ಕಮಿಟಿಯ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಅನುದಾನವನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
ಈ ವೇಳೆ ಕಮಿಟಿಯ ಪದಾಧಿಕಾರಿಗಳಾದ ಬಿ.ಅನ್ಸರ್ ಬಾಷಾ, ಪೀರೋಜ್ ಖಾನ್, ಡಾ. ದರ್ವೇಶ್ ಮೊಹಿದ್ದೀನ್ ರವರು ಉಪಸ್ಥಿತರಿದ್ದರು.