ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಭೆಟ್ಟಿ: ಸನ್ಮಾನ
ಕಾಗವಾಡ 17 : ಮಹಾರಾಷ್ಟ್ರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ದೇವೇಂದ್ರ ಫಡ್ನವಿಸ್ ಅವರನ್ನು ನಾಗಪೂರದ ಅವರ ನಿವಾಸದಲ್ಲಿ ಇತ್ತಿಚಿಗೆ ಮಾಜಿ ಸಚಿವ ಹಾಗೂ ಗೋಕಾಕ ಮತಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ, ಮಾಜಿ ಸಚಿವ ಹಾಗೂ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಅಧ್ಯಕ್ಷ ಶ್ರೀಮಂತ ಪಾಟೀಲ ಭೇಟಿಯಾಗಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕಾಗಿ ಸನ್ಮಾನಿಸಿ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಧುರೀಣರಾದ ಎನ್.ಆರ್. ಸಂತೋಷ, ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಸುಶಾಂತ ಪಾಟೀಲ, ಮಾಜಿ ಜಿ.ಪಂ. ಸದಸ್ಯರು ಹಾಗೂ ಮಾಜಿ ಕೆಎಂಎಫ್ ನಿರ್ದೇಶಕ ಅಪ್ಪಾಸಾಹೇಬ ಅವತಾಡೆ ಮತ್ತು ಭರತ ಮಗದೂರ ಉಪಸ್ಥಿತರಿದ್ದರು.