ಮನುಷ್ಯನು ಆರೋಗ್ಯದಿಂದ ಬದುಕಲು ಧ್ಯಾನ, ಯೋಗ ಅವಶ್ಯಕ

Meditation and yoga are necessary for a man to live healthily

ಮನುಷ್ಯನು ಆರೋಗ್ಯದಿಂದ ಬದುಕಲು ಧ್ಯಾನ, ಯೋಗ ಅವಶ್ಯಕ 

ಕಂಪ್ಲಿ 21: ಪಟ್ಟಣದ ಸಣಾಪುರ ರಸ್ತೆಯ ಶಾರದಾ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆ ಆವರಣದಲ್ಲಿ ಕಂಪ್ಲಿ ಪತಂಜಲಿ ಯೋಗ ಸಮಿತಿಯಿಂದ ವಿಶ್ವ ಧ್ಯಾನ ದಿನಾಚರಣೆ ಶನಿವಾರ ಆಚರಿಸಲಾಯಿತು.  ನಂತರ ಪತಂಜಲಿ ಯೋಗ ಸಮಿತಿಯ ತಾಲೂಕು ಪ್ರಭಾರಿ ಡಿ.ಮೌನೇಶ ಮಾತನಾಡಿ, ಬದುಕಿನಲ್ಲಿ ಜನರಿಗೆ ಶಾಂತಿ ಮತ್ತು ನೆಮ್ಮದಿ ಇಲ್ಲದೆ ಪರದಾಡುತ್ತಿದ್ದಾರೆ. ನಮಗೆ ಸಿಗುವ ಸ್ವಲ್ಪ ಸಮಯದಲ್ಲಾದರೂ ಧ್ಯಾನ ಮಾಡಿದಲ್ಲಿ ಮನಸ್ಸಿಗೆ ನೆಮ್ಮದಿ ಪಡೆಯಲು ಸಾಧ್ಯ. ಪ್ರತಿಯೊಬ್ಬರು ಧ್ಯಾನ, ಯೋಗದೊಂದಿಗೆ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬ ಮನುಷ್ಯನು ಆರೋಗ್ಯದಿಂದ ಬದುಕಲು ಧ್ಯಾನ, ಯೋಗ, ಪ್ರಾಣಾಯಾಮ ಮಾಡಬೇಕು ಎಂದರು.  ಇಲ್ಲಿನ ವಿವಿಧ ಬಂಗಿಯ ಧ್ಯಾನಗಳನ್ನು ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಕೊಟ್ರೇಶ, ಮುಖಂಡರಾದ ತಿಪ್ಪೇಸ್ವಾಮಿ, ಡಾ.ಜಂಬುನಾಥಗೌಡ, ಸುಭಾಶಚಂದ್ರಬೋಸ್, ಮೋಹನ್‌ರಾವ್, ರಾಘವರೆಡ್ಡಿ, ವಿರೂಪಾಕ್ಷಿ, ಭೀಮನಗೌಡ, ಈ.ಶ್ರೀನಿವಾಸ, ಸತ್ಯನಾರಾಯಣ, ಹನುಮಂತರೆಡ್ಡಿ, ಮಹಿಳಾ ಪ್ರಭಾರಿಗಳಾದ ರತ್ನಮ್ಮ, ಭವಾನಿ, ವಿಜಯಲಕ್ಷ್ಮಿ ಸೇರಿದಂತೆ ಇತರರು ಇದ್ದರು.  ಡಿ.001: ಕಂಪ್ಲಿ ಪಟ್ಟಣದ ಶಾರದಾ ಶಾಲಾ ಆವರಣದಲ್ಲಿ ವಿಶ್ವ ಧ್ಯಾನ ದಿನಾಚರಣೆ ಆಚರಿಸಲಾಯಿತು.