ಗದಗ 26: ಗದುಗಿನ ಮಲ್ಲಸಮುದ್ರದಲ್ಲಿರುವ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸೋಮವಾರ ದಿ. 25ರಂದು ವಿದ್ಯುನ್ಮಾನ ಮತಯಂತ್ರ ಪ್ರಾತ್ಯಕ್ಷಿಕೆ ಜರುಗಿತು. ಗದಗ ಜಿಲ್ಲಾ ಸ್ವೀಪ್ ಸಮಿತಿಯು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿದರ್ೇಶನದಂತೆ ಆಯೋಜಿಸಿದ ಮತದಾರರಿಗೆ ಮತ ಯಂತ್ರ ಪ್ರಾತ್ಯಕ್ಷಿಕೆ ಜಿಮ್ಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ 300 ಕ್ಕೂ ಹೆಚ್ಚು ವಿದ್ಯಾಥರ್ಿಗಳು ಅತ್ಯಾಸಕ್ತಿಯಿಂದ ಭಾಗವಹಿಸಿದ್ದರು. ಸ್ವೀಪ್ ಸಮಿತಿ ನೇಮಿಸಿದ ಸಿಬ್ಬಂದಿಯು ವಿದ್ಯುನ್ಮಾನ ಮತಯಂತ್ರದ ಕಾರ್ಯ, ಮತ ಖಾತರಿ, ಮತದಾನ ಮಾಡುವ ಬಗೆಗೆ ವಿದ್ಯಾಥರ್ಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು ಎಂದು ಜಿಮ್ಸ್ ಪ್ರಾಚಾರ್ಯ ದೇಶಪಾಂಡೆ ಅವರು ತಿಳಿಸಿದ್ದಾರೆ.