ಕೊಟ್ಟೂರು ನಗರದಲ್ಲಿ ಪಂಚಮಿಸಾಲಿ ಸಮಾಜದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ

Massive protest march by Panchmisali Samaj in Kottoor city

ಕೊಟ್ಟೂರು ನಗರದಲ್ಲಿ ಪಂಚಮಿಸಾಲಿ ಸಮಾಜದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ 

ಕೊಟ್ಟೂರು 12: ಕೊಟ್ಟೂರು ನಗರದಲ್ಲಿ ಗುರುವಾರ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜದ ಮುಖಂಡರು ಸಮಾಜ ಗಣ್ಯಾತೀ ಗಣ್ಯರು ಸೇರಿ ಸರ್ಕಾರದ ವಿರುದ್ಧ ಮುಖ್ಯಮಂತ್ರಿಗಳ ವಿರುದ್ಧ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದ್ದರು ನಗರದ ಪ್ರಮುಖ ಬೀದಿಗಳಲ್ಲಿ ಜನ ವಿರೋಧಿ ಸರ್ಕಾರ ಎಂದು ಘೋಷಣೆ ಕೂಗುತ್ತಾ ಸಾಗಿ ನಂತರ ಕೊನೆಯಲ್ಲಿ  ಮರಿಕೊಟ್ಟೂರೇಶ್ವರ ಹತ್ತಿರವಿರುವ ನೂತನ ಚನ್ನಮ್ಮ ಸರ್ಕಲ್ ನಲ್ಲಿ ರಸ್ತೆ ತಡೆ ಮಾಡಿ ಸರ್ಕಾರ ವಿರುದ್ಧ ಸಮಾಜಕ್ಕೇ ಅಗುತ್ತಿರುವ ಅನ್ಯಾಯದ ಬಗ್ಗೆ ಸಮಾಜದವರು ಮೊನ್ನೆ ಬೆಳಗಾವಿ ನಗರದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಸಂಧರ್ಬದಲ್ಲಿ ವಿನಾಕಾರಣ ಹಲ್ಲೆ ಮಾಡಿರುವುದನ್ನು ಖಂಡಿಸಿ  ಸಮಾಜದ ಮುಖಂಡರುಗಳಿಗೆ, ಕಾರ್ಯಕರ್ತರಿಗೆ ಪೆಟ್ಟು ಬಿದ್ದಿರುವುದನ್ನು ಖಂಡಿಸುತ್ತಾ ಸದ್ಯ ರಾಜದಲ್ಲಿ ತುಘಲಕ್ ಸರ್ಕಾರವಿದ್ದು ,  ನಿರಂತರವಾಗಿ ಯಾವುದೇ ಸರ್ಕಾರ ಬಂದರೂ ಸಹ ಸಮಾಜದ ಅನ್ಯಾಯ ಮಾಡುತ್ತಾ ಬಂದಿರುವುದನ್ನು ಖಂಡಿಸಿದರು. 

ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಶೆಟ್ಟಿ ತಿಂದಪ್ಪ, ವೀರಶೈವ ಪಂಚಮಸಾಲಿ ಬ್ಯಾಂಕ್ ಅಧ್ಯಕ್ಷರಾದ ರಾಂಪುರ ವಿವೇಕಾನಂದ, ಇಂಜಿನಿಯರ್ ಅಶೋಕ , ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷರಾದ ಚಾಪಿ ಚಂದ್ರ​‍್ಪ , ಭರಮನಗೌಡ, ಮುಖೇಶ್ ವಿ. ಶೆಟ್ಟರ್, ಪ.ಪಂ. ಸದಸ್ಯರಾದ ವೀಣಾ, ಮುಖಂಡರಾದ ನಿಲವಂಜಿ ಗೋಪಿ, ಎ.ಪಿ.ಎಂ.ಸಿ. ನಿರ್ದೇಶಕರಾದ ಶಿವಕುಮಾರ್, ಪ.ಪಂ. ಸದಸ್ಯರಾದ ಮರಬದ ಕೊಟ್ರೇಶಿ, ತುರುಕಾಣಿ, ಸೇರಿದಂತೆ ವಿವಿಧ ಹಳ್ಳಿಗಳಾದ ಚಪ್ಪರದಹಳ್ಳಿ, ಜಾಗಟಗೇರಿ, ಯಾಳ್ಯ, ಅಯ್ಯನಹಳ್ಳಿ ಸೇರಿದಂತೆ ಅನೇಕ ಭಾಗದಿಂದ ಸಮಾಜದ ಕಾರ್ಯಕರ್ತರು ಭಾಗವಹಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು, ಶಾಂತಿಯುತವಾಗಿ ನೆಡೆದ ಪ್ರತಿಭಟನೆಯಲ್ಲಿ ವೀರಶೈವ ಲಿಂಗಾಯಿತ ಪಂಚಮಸಾಲಿಗಳು ಶಾಂತಿಪ್ರಿಯರು ಅವರನ್ನು ಕೆರಳುಸುವಂತ ಕೆಲಸ ಸರ್ಕಾರ ಮಾಡುತ್ತಿದ್ದು, ಕೂಡಲೇ ಮಧ್ಯ ಪ್ರವೇಶಿಸಿ ಸಮಾಜಕ್ಕೆ ನ್ಯಾಯ ಕೊಡಬೇಕಾದ ಕರ್ತವ್ಯವಿದೆಯೆಂದು ತಾಲ್ಲೂಕು ಅಧ್ಯಕ್ಷರಾದ ಚಾಪಿ ಚಂದ್ರ​‍್ಪ ಪ್ರತಿಪಾದಿಸಿದ್ದಾರೆ. ಇದೇ ವಾತವರಣ ಮುಂದುವರೆದಲ್ಲಿ ಸರ್ಕಾರದ ಗೊಡ್ಡು ಬೆದರಿಕೆಗೆ ಜಗ್ಗದೇ ಹೋರಾಟವನ್ನು ತೀವ್ರ ಗೊಳ್ಳಿಸುವುದಲ್ಲದೇ ಜಯ ಮುತ್ಯುಂಜಯ ಸ್ವಾಮಿಜೀಗಳ ಅಜ್ಞೆ  ಪಾಲಿಸುತ್ತಿದ್ದು ನ್ಯಾಯ ಸಿಗುವವರಗೂ ಹೋರಾಟ ಕೈಬಿಡುವುದಿಲ್ಲವೆಂದು ಭರಮನಗೌಡ ಪಾಟೀಲ್ ಹೇಳಿದ್ದಾರೆ.