ಕಾಲುವೆಗೆ ನೀರು ಹರಿಸಲು ರೈತರ ಬೃಹತ್ ಪ್ರತಿಭಟನೆ: ಅಧಿಕಾರಿಗಳಿಗೆ ಮನವಿ ಸಲ್ಲಿಕೆ
ರಾಣೇಬೆನ್ನೂರು 27: ಲೂಕಿನ ಅಂಕಸಾಪುರ, ಹೀಲದಹಳ್ಳಿ ಉದಗಟ್ಟಿ, ಬೇಲೂರು ಮತ್ತು ಮೇಡ್ಲೆರಿ ಕಡೆಗೆ ಬರುವ ಡಿ ವೈ-3 ಕಾಲುವೆಗೆ ನೀರು ಬಿಡುವಂತೆ ಕರ್ನಾಟಕ ರಾಜ್ಯ ರೈತ ಸಂಘವು ನಗರದ ಹೊರವಲಯದಲ್ಲಿರುವ ಸಹಾಯಕ ಕಾರ್ಯಪಾಲಕ ಇಂಜೀನಿಯರ್ ಕ. ನೀ. ನಿ. ನಿ. ತುಂಗಾ ಮೇಲ್ದಂಡೆ ಯೋಜನೆ ಕಚೇರಿ ಮುಂದೆ ರೈತರು ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ರೈತ ಮುಖಂಡರು ತಾಲೂಕಿನ 5 ಗ್ರಾಮಗಳಿಗೆ ತುಂಗಾ ಮೇಲ್ದಂಡೆ ಯೋಜನೆ ಕಾಲುವೆಯಿಂದ ನೀರಾವರಿ ಸೌಲಭ್ಯವನ್ನು ಈ ವರ್ಷ ಮುಂಗಾರಿನಲ್ಲಿ ಕಾಲುವೆಗೆ ಸರಿಯಾಗಿ ನೀರು ಬಿಟ್ಟಿಲ್ಲ. ಹಿಂಗಾರಿನಲ್ಲಿ ಆದರು ಸರಿಯಾದ ಸಮಯಕ್ಕೆ ಕಾಲುವೆಗೆ ನೀರು ಹರಿಸಿ ಈಗಾಗಲೇ ಗ್ರಾಮಗಳಲ್ಲಿ ರೈತರು ಹಿಂಗಾರು ಬೆಳೆಯನ್ನು ಬಿತ್ತನೇ ಮಾಡಿದ್ದಾರೆ.
ಇದರಿಂದ ರೈತರಿಗೆ ತುಂಬಾ ತೊಂದರೆಯಾಗಿದ್ದು, ಐದು ಗ್ರಾಮದ ಜನ-ಜಾನುವಾರುಗಳಿಗೆ ಕುಡಿಯಲು ನೀರು ಇರುವುದಿಲ್ಲ. ಜನವರಿ 2025 ರ ವರೆಗೆ ತುಂಗಾ ಮೇಲ್ದಂಡೆ ಕಾಲುವೆಗೆ ನೀರು ಹರಿಸಬೇಕು. ಒಂದು ವೇಳೆ ಕಾಲುವೆಗೆ ನೀರು ಹರಿಸದೇ ಹೋದಲ್ಲಿ ಕಛೇರಿಗೆ ಬೀಗ ಹಾಕಿ ಅವೋರಾತ್ರಿ ಧರಣಿ ಮಾಡುತ್ತೇವೆ ಎಂದು ರೈತರು ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ತಾಲೂಕ ಕರವೇ ಸ್ವಾಭಿಮಾನಿ ಬಣ ಅಧ್ಯಕ್ಷರಾದ ಚಂದ್ರ್ಪ ಬಣಕಾರ, ರೈತ ಸಂಘದ ಮುಖಂಡರಾದ ಹನುಮಂತಪ್ಪ ಕಬ್ಬಾರ್, ನಿಂಗಪ್ಪ ಸತ್ಯಪ್ಪನವರ್, ಯಲ್ಲಪ್ಪ ಯಲ್ಲಾಪುರ್, ಚನ್ನಬಸಪ್ಪ ಅಡಿವೇರ್, ಮಾದೇವಪ್ಪ ನಡುವಿನಮನಿ, ಮಲ್ಲಪ್ಪ ಬಣಕಾರ, ಮಾಲತೇಶ್ ಕುರುವತ್ತಿ, ರಾಜು ಲಮಾಣಿ, ಶಿವಪ್ಪ ಸತ್ಯಪ್ಪನವರ್, ಹನುಮಂತಪ್ಪ ನಡುವಿನಮನಿ, ಮಾಲತೇಶ ನಿಂಬಣ್ಣನವರ್, ಕರಿಯಪ್ಪ, ನಾಗಪ್ಪ ಕಾಮಜ್ಜಿ, ನಿಂಗಪ್ಪ ಹರಿಜನ್, ರಮೇಶ ಬಂಡಿವಡ್ಡರ್, ನವಿನ ನಡುವಿನಮನಿ ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.