ಒಳಮಿಸಲಾತಿ ಜಾರಿಗಾಗಿ ಬೃಹತ್ ತಮಟೆ ಚಳುವಳಿ ಪ್ರತಿಭಟನೆ
ಹೂವಿನಹಡಗಲಿ 13: ಐತಿಹಾಸಿಕ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಒಳಮಿಸಲಾತಿ ಜಾರಿಗಾಗಿ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಬೃಹತ್ ತಮಟೆ ಚಳುವಳಿ ಧರಣಿ ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ಎಲ್ಲಾ ಮಾದಿಗ ಸಮುದಾಯದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಂದ ಜನ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಾಲೂಕು ಅಧ್ಯಕ್ಷರಾದ ಕೆ.ಉಚ್ಚೆಂಗೆಪ್ಪ, ಹೆಚ್.ಪೂಜಾಪ್ಪ, ಹಲಗಿ ಸುರೇಶ್, ಪಿ.ನಿಂಗಪ್ಪ, ಜೆ.ಶಿವರಾಜ್, ಕೆ.ಪುತ್ರೇಶ್, ನಿವೃತ್ತ ಶಿಕ್ಷಕ ನಾಗರಾಜಪ್ಪ, ದುರುಗೇಶ, ಲಿಂಗರಾಜ್, ಮಲ್ಲೇಶ, ರಮೇಶ ರವರು ತಿಳಿಸಿದ್ದಾರೆ.