ಸಾಮೂಹಿಕ ವಿವಾಹಗಳು ಸಾಮರಸ್ಯದ ಪ್ರತೀಕ

Mass marriages are a symbol of harmony

ಸಾಮೂಹಿಕ ವಿವಾಹಗಳು ಸಾಮರಸ್ಯದ ಪ್ರತೀಕ

ಹೂವಿನಹಡಗಲಿ 05: ನಾಡಿನಲ್ಲಿ ಮಠಗಳು  ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಮೂಹಿಕ ಮದುವೆಗಳು  ಮಾಡುವ ಮೂಲಕ ಹಣ ಉಳಿತಾಯ ಜತೆಗೆ ಸಮಾಜದಲ್ಲಿ ಸಾಮರಸ್ಯ ಪ್ರತೀಕವಾಗಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು. 

ತಾಲೂಕಿನ ಪುರ ಗ್ರಾಮದ ಕಟ್ಟೆಮನೆ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಸಿದ್ಧವೀರ ಶಿವಾಚಾರ್ಯರ 48ನೇ ಸ್ಮರಣೋತ್ಸವ, ಚಂದ್ರಶೇಖರ ಶಿವಾಚಾರ್ಯರ 10ನೇ ಪುಣ್ಯಸ್ಮರಣೆ, ಸಾಮೂಹಿಕ ವಿವಾಹ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀ ಮಠದಿಂದ ಪ್ರತಿವರ್ಷ ನಡೆಯುವ ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಿವೆ. ನವ ಜೀವನ ಆರಂಭಿಸುತ್ತಿರುವ ದಂಪತಿಗಳು ಆದರ್ಶ ಜೀವನವನ್ನು ನಡೆಸಿ ಎಂದರು.ನಿವೃತ್ತ ಪ್ರಾಧ್ಯಾಪಕ ಆರ್‌.ಎಲ್‌.ಪೋಲೀಸ್ ಪಾಟೀಲ್ ಮಾತನಾಡಿ, ನಾಡಿನಲ್ಲಿ ಮಠಗಳು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಕವಾಗಿ ಅನೇಕ ಕೊಡುಗೆಗಳನ್ನು ನೀಡಿವೆ. ಮಠಮಾನ್ಯಗಳು ಅಕ್ಷರದಾಸೋಹ ಮಾಡದಿದ್ದರೆ ಅನೇಕರು ಶಿಕ್ಷಣದಿಂದ ವಂಚಿತರಾಗುತ್ತಿದ್ದರು ಎಂದರು. 

ಎನ್‌.ಪಂಚಾಕ್ಷರಿಗೌಡ ಅವರಿಗೆ ಮರಣೋತ್ತರವಾಗಿ ಪಟ್ಟದ ಚಂದ್ರಶೇಖರ ಶಿವಾಚಾರ್ಯ ಪ್ರಶಸ್ತಿಯನ್ನು ಅವರ ಪುತ್ರ ನಿವೃತ್ತ ಪ್ರಾಚಾರ್ಯ ಎನ್‌. ವರಕುಮಾರಗೌಡ ಅವರಿಗೆ ಪ್ರದಾನ ಮಾಡಲಾಯಿತು.ಗವಿಮಠದ ಹಿರಿಶಾಂತವೀರ ಸ್ವಾಮಿಜಿ. ಹರಪನಹಳ್ಳಿ ತೆಗ್ಗಿನ ಮಠದ ವರಸದ್ಯೋಜಾತ ಸ್ವಾಮೀಜಿ, ಅಂಗೂರಿನ ಶಿವಯೋಗೀಶ್ವರ ಸ್ವಾಮೀಜಿ ಸೇರಿದಂತೆ, ನಿವೃತ್ತ ಪ್ರಾಚಾರ್ಯ ಶಾಂತಮೂರ್ತಿ ಬಿ.ಕುಲಕರ್ಣಿ, ಪ್ರಮುಖರಾದ ಉಮೇಶ ಮುಂಡವಾಡ, ದೀಪದ ಕೃಷ್ಣಪ್ಪ, ಎಂ.ಸತ್ಯನಾರಾಯಣ, ಪಿ.ಕೆ.ಎಂ.ರೇವಣಸಿದ್ದ ಸ್ವಾಮಿ.ಡಿ ಗೌರೀಶ, ಎನ್‌.ಸುಧಾಕರ, ವೈ.ಶಿವರಾಯನಗೌಡ, ಗಡ್ಡಿ ಗುಡ್ಡಪ್ಪ, ಬಿ.ಪರಮೇಶ್ವರಗೌಡ ಇತರರು ಇದ್ದರು