ಲೋಕದರ್ಶನ ವರದಿ
ಧಾರವಾಡ,13 : ಉತ್ತರ ಕನರ್ಾಟಕ ಭಾಗದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಇಲ್ಲಿಗೆ ಸಮೀಪದ ತಾಲೂಕಿನ ಮರೇವಾಡ ಬಸವಣ್ಣ (ನಂದೀಶ್ವರ) ದೇವರ ವಾಷರ್ಿಕ ಜಾತ್ರಾ ಮಹೋತ್ಸವ ಶನಿವಾರ (ಮೇ 18 ರಂದು) ಆಗಿಹುಣ್ಣಿಮೆಯ ದಿನ ಜರುಗಲಿದೆ.
ರುದ್ರಾಭಿಷೇಕ ಪೂಜೆ : ಜಾತ್ರೆಯ ದಿನ (ಶನಿವಾರ) ಪ್ರಾತ:ಕಾಲದಲ್ಲಿ ಬಸವಣ್ಣ (ನಂದೀಶ್ವರ) ದೇವರ ಶಿಲಾ ವಿಗ್ರಹಕ್ಕೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ ಮತ್ತು ಮಹಾಮಂಗಳಾರತಿಯು ಹಿರಿಯ ವೈದಿಕರಾಗಿರುವ ವೇ.ಮೂ.ತಿಪ್ಪಯ್ಯಸ್ವಾಮಿ ಯರಗಂಬಳಿಮಠ ಮತ್ತು ಶೇಖಯ್ಯಸ್ವಾಮಿ ಹಿರೇಮಠ ಸೇರಿದಂತೆ ದೇವಾಲಯದ ಅರ್ಚಕ ಬಳಗದ ವೈದಿಕತ್ವದಲ್ಲಿ ನಡೆಯಲಿವೆ. ನಂತರ ದೇವಾಲಯದ ಭಕ್ತ ಮಂಡಳಿಯು ನಡೆಸಿಕೊಡುವ ದಾಸೋಹಸೇವೆಯಲ್ಲಿ ಮಹಾಪ್ರಸಾದ ವಿತರಣೆ (ಅನ್ನಸಂತರ್ಪಣೆ) ಜರುಗುವುದು.
ಸಂಜೆ 4 ಗಂಟೆಗೆ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ಅಲಂಕೃತ ರಥೋತ್ಸವ ವೈಭವದಿಂದ ನಡೆಯುವುದು. ರಥೋತ್ಸವದ ಕೊನೆಯಲ್ಲಿ ಅಮ್ಮಿನಬಾವಿಯ ಬಸವಣ್ಣ (ನಂದೀಶ್ವರ) ದೇವರ ದೇವಾಲಯದ ಪ್ರಧಾನ ಅರ್ಚಕ ಬಸವರಾಜ ಧರ್ಮಪ್ಪ ಪೂಜಾರ ಅವರು ಆಯಾ ವರುಷದ ಧನಾತ್ಮಕ ಹಾಗೂ ಋಣಾತ್ಮಕ ನೆಲೆಯ ಪ್ರಮುಖ ಘಟನೆಗಳು, ಮಳೆ-ಬೆಳೆ ಮತ್ತು ಜನಜೀವನದ ಏರುಪೇರುಗಳನ್ನು ಉಲ್ಲೇಖಿಸಿ 'ಕಾಣರ್ಿಕ (ಹೇಳಿಕೆ)' ಹೇಳುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮರೇವಾಡ ಗ್ರಾಮದ ಬಸವಣ್ಣ (ನಂದೀಶ್ವರ) ದೇವರು ಹಾಗೂ ಅಮ್ಮಿನಬಾವಿ ಗ್ರಾಮದ ಬಸವಣ್ಣ (ನಂದೀಶ್ವರ) ದೇವರು ಪರಸ್ಪರ ಸಹೋದರರು ಎಂಬ ಪ್ರತೀತಿ ಈ ಭಾಗದ ಜನಮನದಲ್ಲಿ ಇಂದಿಗೂ ಉಳಿದುಕೊಂಡು ಬಂದಿದೆ.
ಜಾತ್ರೆಯ ಅಂಗವಾಗಿ ಮೇ 18 ರಂದು ರಾತ್ರಿ 9.30 ಗಂಟೆಗೆ ಜಾನಪದ ಸಂಗೀತ ಕಲಾವಿದರಾದ ಆನಂದ ಕರಾಡೆ ಹಾಗೂ ಮಹಾಂತೇಶ ಹಡಪದ ಜಂಟಿ ನೇತೃತ್ವದಲ್ಲಿ ಸವಾಲ್-ಜವಾಬ್ ಭಜನಾ ಸ್ಪಧರ್ೆಯನ್ನೂ ಹಮ್ಮಿಕೊಳ್ಳಲಾಗಿದೆ. ಈ ಪ್ರಸಿದ್ಧ ಜಾತ್ರಾ ಮಹೋತ್ಸವದಲ್ಲಿ ದೂರದ ಮಹಾರಾಷ್ಟ್ರವೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು, ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಸುತ್ತಲಿನ ಗ್ರಾಮಗಳ ಭಕ್ತ ಸಮೂಹ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವರೆಂದು ದೇವಸ್ಥಾನ ಸೇವಾ ಟ್ರಸ್ಟ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.