ಹೊಸ ಜಿಲ್ಲಾಡಳಿತ ಭವನದಲ್ಲಿ ಹಲವು ಸಮಸ್ಯೆ
Many problems in the new district administration building
ಬಳ್ಳಾರಿ 12: ನಗರದ ರಾಜಕುಮಾರ್ ರಸ್ತೆಯಲ್ಲಿನ ನೂತನ ಜಿಲ್ಲಾಡಳಿತ ಭವನದಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ.ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾಗಿ ಈ ಜಿಲ್ಲಾಡಳಿತ ಭವನ ನಿರ್ಮಾಣವಾಗಿದೆ. ಇಲ್ಲಿರುವ ಶೌಚಾಲಯಗಳಲ್ಲಿ ನಲ್ಲಿಗಳು ಅನೇಕ ದಿನಗಳಿಂದ ಕೆಟ್ಟು ಹೋಗಿವೆ. ಕೆಲ ಶೌಚಾಲಯಗಳ ಬೀಗ ಸಹ ತೆರಿದಿಲ್ಲ. ಅವ್ಯವಸ್ಥೆ ಇರುವುದರಿಂದ ಕಚೇರಿಗೆ ಬಂದ ಜನತೆ ಶೌಚಾಲಯ ಬಳಸುವುದು ಸಮಸ್ಯೆಯಾಗಿದೆ.ಇಷ್ಟೇ ಅಲ್ಲದೆ ಕುಡಿಯುವ ನೀರಿನ ಫಿಲ್ಟರ್ ಗಳು ಕೂಡ ಕೆಟ್ಟುಹೋಗಿವೆ. ಇದರಿಂದಾಗಿ ಕುಡಿಯುವ ನೀರು ವ್ಯವಸ್ಥೆ ಇಲ್ಲದ ಪರಿಸ್ಥಿತಿ ಬಂದಿದೆ.
ಅಲ್ಲದೆ ಲಿಫ್ಟ್ ಕೂಡಾ ಅನೇಕ ದಿನಗಳಿಂದ ಕೆಟ್ಟು ಹೋಗಿದೆ.ಇನ್ನು ಇಲ್ಲಿ ಕ್ಯಾಂಟೀನ್ ಸೌಲಭ್ಯ ಇಲ್ಲದ ಕಾರಣ ಪ್ರತಿ ಕಚೇರಿಯಲ್ಲಿ ಹೋದಾಗ ಸಿಬ್ಬಂದಿ ಅಲ್ಲಿ ಇರಲ್ಲ. ಕೇಳಿದರೆ ಚಾಹಾ ಗೆ ಹೋಗಿದ್ದಾರೆ ಎಂದು ಹೇಳುತ್ತಾರೆ. ಅರ್ಧತಾಸು ಆದರೂ ಬರಲ್ಲ. ಕೇಳಿದರೆ ಇಲ್ಲಿ ಕ್ಯಾಂಟೀನ್ ಇಲ್ಲ. ದೂರ ಹೋಗಬೇಕು ಎನ್ನುತ್ತಾರೆ. ಜನರಿಗೂ ಇಲ್ಲಿ ಕ್ಯಾಂಟೀನ್ ನ ಅಗತ್ಯತೆ ಇದೆ.ಕೋಟ್:ಕೂಡಲೇ ಶೌಚಾಲಯದ ನಲ್ಲಿ ಮತ್ತು ಫಿಲ್ಟರ್ ರಿಪೇರಿ ಮಾಡಿಸಬೇಕು ಇಲ್ಲದಿದ್ದರೆ ಸಾರ್ವಜನಿಕರಿಗೂ ಸಿಬ್ಬಂದಿಗೂ ಸಮಸ್ಯೆ ಆಗುತ್ತದೆ ಆರ್.ವೆಂಕಟರೆಡ್ಡಿ. ಸಾಮಾಜಿಕ ಹೋರಾಟಗಾರ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 