ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮಂಜುನಾಥ, ಉಪಾಧ್ಯಕ್ಷರಾಗಿ ವಲಿ ಮಸೀದಿ ಅವಿರೋಧ ಆಯ್ಕೆ
ಕಂಪ್ಲಿ 06: ತಾಲೂಕು ಸಮೀಪದ ದರೋಜಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ.ವಿ.ಮಂಜುನಾಥ ಹಾಗೂ ಉಪಾಧ್ಯಕ್ಷರಾಗಿ ವಲಿ ಮಸೀದಿ ಅವರು ಅವಿರೋಧವಾಗಿ ಆಯ್ಕೆಗೊಂಡರು. ಇಲ್ಲಿನ ಕಛೇರಿಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ ಹಿನ್ನಲೆ ಅಧ್ಯಕ್ಷರಾಗಿ ಮಂಜುನಾಥ, ಉಪಾಧ್ಯಕ್ಷರಾಗಿ ವಲಿ ಮಸೀದಿ ಆಯ್ಕೆಗೊಂಡಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಬಿ.ಗಂಗಾಧರ ಘೋಷಿಸಿದರು.
ಈ ವೇಳೆ ನಿರ್ದೇಶಕರಾದ ಕೆ.ರಾಮಾಂಜಿನೇಯ, ಲಿಂಗಪ್ಪ ಪಿ.ಎಸ್, ಕೆ.ತಿಮ್ಮಯ್ಯ, ಹೆಚ್.ದಾನಪ್ಪ, ಮರಿಸ್ವಾಮಿ ನಾಯಕ, ಶೋಭಾದೇವಿ ಟಿ, ನಾಗಮ್ಮ, ವೆಂಕಟೇಶ ಸಾಲುಮನಿ, ಶ್ರೀನಿವಾಸ ಡಿ, ಎನ್.ವಿ.ಹನುಮಂತ ಹಾಗೂ ಮುಖ್ಯ ಕಾರ್ಯನಿರ್ವಾಹಕ ಎರಿ್ರಸ್ವಾಮಿ ಇದ್ದರು. ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮಾಲಾರೆ್ಣ ಮಾಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ವಿ.ಜನಾರ್ದನ, ತಾಪಂ ಮಾಜಿ ಉಪಾಧ್ಯಕ್ಷ ಕೆ.ಮಾರೆಪ್ಪ ಸೇರಿದಂತೆ ಅನೇಕರಿದ್ದರು.