ಮಹಾವೀರ ಪತ್ತಿನ ಸಹಕಾರ ಸಂಘ ಅದ್ಯಕ್ಷರಾಗಿ ಮಂಜುನಾಥ ಜೈನ್ ಆಯ್ಕೆ
ಹೂವಿನ ಹಡಗಲಿ 21: ಮಹಾವೀರ ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮಂಜುನಾಥ ಜೈನ್ ಆಯ್ಕೆ ಆಗಿದ್ದಾರೆ.ಶುಕ್ರವಾರ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ವಕೀಲರಾದ ಮಂಜುನಾಥ ಜೈನ್ ರವರು ಅಧ್ಯಕ್ಷರಾಗಿ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಆರ್. ಪುಷ್ಪಾವತಿ, ನೂತನ ನಿರ್ದೇಶಕರಾಗಿ ಆರ್ .ಬೊಮ್ಮಣ್ಣ, ಆರ್.ಯಶೋಧರ, ಎಂ. ಶಾಂತರಾಜು,ಡಾ. ಧರ್ಮಣ್ಣ, ಜೆ .ವಿಜಯಕುಮಾರ್ ,ಹೆಚ್.ಡಿ,ಅಜಿತ್,ಆಶಾ.ಪಿ, ಗುಂಜಲ್ ಆರ್, ಪ್ರಸನ್ನ ,ವಿಪುಲ್ ಜೈನ್ ,ಸುಜಿತ್ ಜೈನ್, ಮೇಘ ಜೈನರ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಮಂಜುನಾಥ್ ಮಾತನಾಡಿ ಸಂಘ ಸ್ವಂತ ಕಟ್ಟಡ ಹೊಂದಿದ್ದು, ಎಲ್ಲಾ ಸಮುದಾಯಗಳ ಬೆಂಬಲ ಹೊಂದಿದೆ.ವ್ಯವಹಾರಿಕವಾಗಿ ಉತ್ತಮ ಸ್ಥಿತಿಯಲ್ಲಿದೆ ಎಂದರು.ವೀರಣ್ಣ, ಶಾಂತರಾಜು ಮಾತನಾಡಿದರು.ಪತ್ತಿನ ಸಹಕಾರ ಸಂಘದ ಸದಸ್ಯರುಗಳು, ಮಾಜಿ ಅಧ್ಯಕ್ಷರುಗಳು ಮಾಜಿ ನಿರ್ದೇಶಕರುಗಳು ,ಶ್ರಾವಕ -ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.