ಕೇರಳದ ಕನ್ನಡ ಶಾಲೆಗಳಿಗೆ ಮಲೆಯಾಳಿ ಶಿಕ್ಷಕರ ನೇಮಕಕ್ಕೆ ಕನರ್ಾಟಕ ಜನಸೈನ್ಯ ವಿರೋದ

ಲೋಕದರ್ಶನ ವರದಿ
ಬಳ್ಳಾರಿ.ಅ.10: ಕೇರಳದ ಕಾಸರಗೂಡಿನ ಕನ್ನಡ ಶಾಲೆಗಳಿಗೆ ಅಲ್ಲಿನ ಸರಕಾರ ಕನ್ನಡ ಶಿಕ್ಷರನ್ನು ನೇಮಿಸದೆ ಮಲೆಯಾಳಿ ಶಿಕ್ಷಕರನ್ನು ನೇಮಕಾತಿ ಮಾಡಿರುವುದನ್ನು ಕನರ್ಾಟಕ ಜನಸೈನ್ಯ ವಿರೋದಿಸಿದೆ. ಈ ಕುರಿತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ರಾಜ್ಯಾಧ್ಯಕ್ಷ ಕೆ.ಯರಿಸ್ವಾಮಿ ಜಿಲ್ಲಾ ಮತ್ತು ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರಾದ ಕೆ.ಎಸ್.ಅಶೋಕಕುಮಾರ, ರಾಜ್ಯ ಉಪಾಧ್ಯಕ್ಷ ಬಿ.ಹೊನ್ನುರಪ್ಪ ಸೇರಿದಂತೆ ಹಲವಾರು ಪಾದಾಧಿಕಾರಿಗಳ ಸಮ್ಮೂಖದಲ್ಲಿ ಮಾತನಾಡಿ ಕೇರಳದ ಲೋಕಸೇವಾ ಅಯೋಗ ಅಲ್ಲಿನ ಕನ್ನಡ ಮಾದ್ಯಮ ಸರಕಾರಿ ಶಾಲೆಗಳಲ್ಲಿ ಕಾಲಿ ಇರುವ 180ಕ್ಕೂ ಹೆಚ್ಚೂ ಉದ್ಯೆಗಳ ಪೈಕಿ 12 ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಆದರೆ ಅಲ್ಲಿನ ಲೋಕಸೇವಾ ಅಯೋಗ ಪ್ರಕಟಿಸಿರುವ ಪಟ್ಟಿಯಲ್ಲಿ 7 ಜನ ಶಿಕ್ಷಕರನ್ನು ಕನ್ನಡ ಸರಕಾರಿ ವಿವಿದ ಶಾಲೆಗಳಿಗೆ ನೇಮಕ ಮಾಡಿದ್ದು. ಅದರಲ್ಲಿ ಮಲೆಯಾಳಿ ಬಾಷೆಯ ಶಿಕ್ಷಕರನ್ನು ಆಯ್ಕೆ ಮಾಡಿದ್ದಾರೆ. ಅಲ್ಲದೇ ಮತ್ತೇ 13 ಜನ ಶಿಕ್ಷಕರನ್ನು ನೇಮಕ ಮಾಡಿದ್ದು ಅವರೂ ಸಹ ಮಲೆಯಾಳಿ ಬಾಷೆಯವರಾಗಿದ್ದಾರೆ. ಅದಕ್ಕಾಗಿ ಅಲ್ಲಿನ ಕನ್ನಡಿಗರಿಂದ ತಿವ್ರಪ್ರತಿಭಟನೆ ನಡೆದ ಹಿನ್ನಲೆಯಲ್ಲಿ ನೇಮಕಾತಿ ಮಾಡಿದ ಶಿಕ್ಷಕರನ್ನು ಈ ಹಿಂದೆ ವಾಪಾಸು ಪಡೆದಿತ್ತು. ಈಗ ಮತ್ತೆ 20 ಶಿಕ್ಷಕರನ್ನು ನೇಮಕ ಮಾಡಿದ್ದು. ಅವರೂ ಸಹ ಮಲೆಯಾಳಿ ಬಾಷಿಕರಾಗಿದ್ದಾರೆ. ಇದರಿಂದ ಕಾರಸಗೂಡಿನಲ್ಲಿ ಕನ್ನಡದ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಅದಕ್ಕಾಗಿ ಕೂಡಲೇ ರಾಜ್ಯ ಸಕರ್ಾರ ಮದ್ಯ ಪ್ರವೇಶ ಮಾಡಿ ಕೇರಳ ಸರಕಾರಕ್ಕೆ ಕನ್ನಡ ಬಾಷೆಯ ಶಿಕ್ಷಕರನ್ನು ನೇಮಕ ಮಾಡಲು ತಕ್ಷಣ ಮಾತುಕತೆ ನಡೆಸಬೇಕು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ರಾಜ್ಯಾಧ್ಯಂತ ಹೋರಾಟ ಮಾಡಲಿದ್ದೇವೆ. ಜೊತೆಗೆ ಬರುವ ನವೆಂಬರ್ ತಿಂಗಳಲ್ಲಿ ಕಾಸರಗೂಡು ಚೆಲೋ ಹೋರಾಟವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ವಿವರಿಸಿದರು. ನೆರೆಯ ಆಂಧ್ರಪ್ರದೇಶದ ಕನ್ನಡ ಶಾಲೆಗಳಲ್ಲಿ ಹಲವಾರು ಸಮಸ್ಯಗಳ ಬಗ್ಗೆ ಏಕೆ ಹೋರಾಟ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಈ ವಿಷಯ ನಮ್ಮ ಘಮನಕ್ಕೆ ಇಲ್ಲದ ಕಾರಣ ಮುಂದಿನ ದಿನದಲ್ಲಿ ಎಲ್ಲವನ್ನು ತಿಳಿದುಕೊಂಡು ಹೋರಾಟ ನಡೆಸುವುದಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಈ ಸುದ್ದಿಗೋಷ್ಟಿಯಲ್ಲಿ ಕನರ್ಾಟಕ ಜನಸೈನ್ಯದ ಸದಸ್ಯರುಗಳಾದ ಚೆಂಚಯ್ಯ, ಫಯಾಜ್ಬಾಷಾ, ಎಸ್.ಖಾಜಾ, ಗುಗ್ಗರಟ್ಟಿ ಹೊನ್ನುರಸ್ವಾಮಿ, ರಾಜೇಶ್ ಹುಂಡೆಕರ್, ಗೋಪಿ, ರಾಕೇಶ್ ಹುಂಡೆಕರ್, ಫವನ್, ರಾಕೇಶ್, ಫವನ್ರೆಡ್ಡಿ, ದಾದಾ ಕಲಂದರ್, ಸಿ.ಕೃಷ್ಣಾ, ಅಮರನಾಥ್, ರವಿತೇಜ, ಸಿಂದುಗೌಡ, ಅಪ್ಪು ಸೇರಿದಂತೆ ನೂರಾರು ಕಾರ್ಯಕರ್ತರು ಈ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.