ವಿದ್ಯಾರ್ಥಿಗಳು ಚೆನ್ನಾಗಿ ಓದಿ ತಂದೆ ತಾಯಿ ಹೆಸರನ್ನು ಉಳಿಸುವಂಥಾಗಿ ಮಾಡಿ :ಪಾರಿ ಬಸವರಾಜ
ಮುಂಡಗೋಡ 19: ಮುಂಡಗೋಡ ತಾಲೂಕಿನ ಎಸ್. ಎಸ್. ಎಲ್. ಸಿ. ಓದುತ್ತಿರುವ ವಿದ್ಯಾರ್ಥಿಗಳಿಗೆ ಮುಂಬರುವ ವಾರ್ಷಿಕ ಪರೀಕ್ಷೆಯ ಸಿದ್ಧತೆ ಹಾಗೂ ವಿಷಯ ಪರಿನಿತರು ಕಾರ್ಯಾಗಾರ ಕ್ಷೇತ್ರ ಶಿಕ್ಷಣಧಿಕಾರಿಗಳ ಕಾರ್ಯಲಯ ಮುಂಡಗೋಡ ಹಾಗೂ ವಿಜೇತ ಶಿಕ್ಷಣ ಸಮಿತಿ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಟೌನ್ ಸಭಾಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀ. ಪಾರಿ ಬಸವರಾಜ, ಉಪನಿರ್ದೇಶಕರು ಶಿರಸಿ ಯವರ ಉದ್ಘಾಟನೆ ಮಾಡಿ ಮಾತನಾಡುತ್ತ ಧಾರವಾಡದಿಂದ ಆಗಮಿಸಿ ಈ ಕಾರ್ಯಾಗಾರ ಮಾಡಿ ತಾಲೂಕಿನ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟ ಸಂಸ್ಥೆ ಅಭಿನಂದನೆಗಳ ಹೇಳುತ್ತೇನೆ ಅಲ್ಲದೆ ಹಿಂದಿನ ವರ್ಷ ಶಿರ್ಸಿ ಜಿಲ್ಲೆಗೆ ಮುಂಡಗೋಡ ತಾಲೂಕು ಫಲಿತಾಂಶದಲ್ಲಿ 4 ನೇ ಸ್ಥಾನದಲ್ಲಿದೆ. ಬರುವ ವಾರ್ಷಿಕ ಪರೀಕ್ಷೆಯಲ್ಲಿ 100 ಕ್ಕೆ 100 ರಷ್ಟು ಫಲಿತಾಂಶವನ್ನು ನೀಡಲೇಬೇಕು ಏಕೆಂದರೆ ಮುಂಡಗೋಡ ತಾಲೂಕು ಆನ್ಸ್ಪಿರೇಷನ್ ಬ್ಲಾಕ್ ನಲ್ಲಿ ಇರುವುದರಿಂದ ಎಲ್ಲಾ ಮುಖ್ಯ ಶಿಕ್ಷಕರ ಉಳಿದ 92 ದಿನಗಳಲ್ಲಿ ಹೆಚ್ಚು ಪರಿಶ್ರಮದಿಂದ ಕಾರ್ಯ ನಿರ್ವಹಿಸಿ ಫಲಿತಾಂಶ ನೀಡಬೇಕು . ನನಗೆ ಪ್ರತಿ ವಾರ ಮೇಲಧಿಕಾರಿಗಳು ಸಭೆ ಮಾಡಿ ಎಸ್. ಎಸ್. ಎಲ್. ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆ ಕುರಿತು ಮಾಹಿತಿ ಕೇಳುತ್ತಿದ್ದಾರೆ ಹಾಗಾಗಿ ಎಲ್ಲಾ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ಅದರ ತಿವೃತೆ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು ಮತ್ತು ವಿದ್ಯಾರ್ಥಿಗಳು ಶಿಕ್ಷಕರ ಪಾಠ ಮಾಡಿದ್ದನ್ನು ಪ್ರತಿ ದಿನ ಓದಿ ಉತ್ತಮವಾದ ಫಲಿತಾಂಶ ನೀಡಬೇಕು ಈ ಕಾರ್ಯಗಾರವನ್ನು ಶ್ರೀ. ಸುರೇಶ್ ಕುಲಕರ್ಣಿ ಸರ್ ಧಾರವಾಡದಿಂದ ಆಗಮಿಸಿ ನಿಮಗಾಗಿ ಪರೀಕ್ಷಾ ಸಿದ್ಧತೆ ಯಾವ ರೀತಿ ಮಾಡಬೇಕೆಂದು ತಿಳಿಸುತ್ತಾರೆ.ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಮುಂಡಗೋಡ ತಾಲೂಕಿನ ಫಲಿತಾಂಶ ಹೆಚ್ಚಿಸಲು ತಾವು ಸಹಕರಿಸಬೇಕು. ಚೆನ್ನಾಗಿ ಓದಿ ನಿಮ್ಮ ತಂದೆ ತಾಯಿ ಹೆಸರನ್ನು ಉಳಿಸುವಂಥಾಗಿ ಎಂದರು. ವಿಜೇತ ಶಿಕ್ಷಣ ಸಂಸ್ಥೆ, ಧಾರವಾಡ ರಮೇಶ್ ಪರಿಟ್ ನಿರ್ದೇಶಕರವರು ಮಾತನಾಡುತ್ತಾ ವಿದ್ಯಾರ್ಥಿಗಳು ಶಿಕ್ಷಕರು ಮಾಡಿದ ಪಾಠಗಳನ್ನು ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ನಾವು ಮಾಡಿದ ಕಾರ್ಯಗಾರ ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲ ವಿದ್ಯಾರ್ಥಿಗಳು ಅದರ ಉಪಯೋಗ ಪಡೆಯಿರಿ.ಹೆಚ್ಚು ಅಂಕ ಪಡೆದ ಆಯುಧ ವಿದ್ಯಾರ್ಥಿಗಳಿಗೆ ನಮ್ಮ ವಿಜೇತ ಶಿಕ್ಷಣ ಸಂಸ್ಥೆ, ಧಾರವಾಡದಲ್ಲಿ ಉಚಿತವಾಗಿ ಪ್ರವೇಶ ನೀಡುತ್ತೇನೆ. ಎಂದು ವಿಜೇತ ಶಿಕ್ಷಣ ಸಂಸ್ಥೆ, ಧಾರವಾಡ ರಮೇಶ್ ಪರಿಟ್ ನಿರ್ದೇಶಕರವರು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಂಡಗೋಡ್ ಕ್ಷೇತ್ರಕ್ಕೆ ಅಧಿಕಾರಿಗಳಾದ ಶ್ರೀ ಶ್ರೀರಾಮ್ ಹೆಗಡೆ ಅವರು ಮಾತನಾಡುತ್ತಾ ಧಾರವಾಡದಿಂದ ಆಗಮಿಸಿದಂತಹ ವಿಜೇತ ಶಿಕ್ಷಣ ಸಂಸ್ಥೆಯವರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಈ ಕಾರ್ಯದ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದು ಮುಂದಿನ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುವಲ್ಲಿ ಎಲ್ಲಾ ವಿದ್ಯಾರ್ಥಿಗಳು ಚೆನ್ನಾಗಿ ಓದಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಬೇಕು. ಶ್ರೀ ಸುರೇಶ್ ಕುಲಕರ್ಣಿ ಅವರು ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ಯಾವ ರೀತಿ ಎದುರಿಸಬೇಕು ಎಂಬುದನ್ನು ವಿವರವಾಗಿ ತಿಳಿಸಿದರು. ಈ ವೇಳೆಯಲ್ಲಿ ಸಿರ್ಸಿ ಶೈಕ್ಷಣಿಕ ಜಿಲ್ಲಾ ಪ್ರೌಢಶಾಲಾ ಮುಖ್ಯನ್ಯಾಪಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ. ಎಸ್. ಡಿ. ಮುಡೆಣ್ಣವರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಡಾ. ರಮೇಶ. ಅಂಬಿಗೇರ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ. ಮಂಜುನಾಥ. ಮರಿತಮ್ಮಣ್ಣವರ ಡಾ. ಪ್ರಕಾಶ್ ಕಲಹಾಳ ಹಾಗೂ ಶ್ರೀ.ರಾಕೇಶ್. ಹಿರೇಮಠ ಮುಂಡಗೋಡ ತಾಲೂಕಿನ ವಿವಿಧ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಹಾಜರಿದ್ದರು. ಶ್ರೀ. ನಾಗರಾಜ ನಾಯ್ಕ ಸ್ವಾಗತ ಮಾಡಿದರು ಶ್ರೀ. ಎಸ್. ಡಿ ಮುಡೆಣ್ಣವರ ಪ್ರಸ್ತಾವಿಕ ಮಾತನಾಡಿದರು