ಅಂಗವಿಕಲತೆ ಶಾಪವಲ್ಲ ವರವನ್ನಾಗಿಸಿಕೊಳಿ: ಅಡಿವೇಶ ಛಬ್ಬಿ
ರನ್ನ ಬೆಳಗಲಿ 02: ಮುಧೋಳ ಸರಕಾರಿ ಪ್ರೌಢಶಾಲೆ ಮಹಾಲಿಂಗಪುರ ಶಾಲೆಯಲ್ಲಿ ದಿ. 31ರಂದು ಮಹಾಲಿಂಗಪುರ ವಲಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿಶೇಷ ಚೇತನ ಮಕ್ಕಳ ಫಿಜಿಯೋಥೆರಪಿ ಕಾರ್ಯಕ್ರಮ ಜರುಗಿತು.
ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಸಂಜಯ ರಾಥೋಡ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಅಡಿವೆಪ್ಪ ಛಬ್ಬಿ ಉದ್ಘಾಟಕರಾಗಿ ಮಾತನಾಡಿ ಅಂಗವಿಕಲತೆ ಶಾಪವಲ್ಲ ವರ ಎಂದು ಹೇಳಿದರು.
ನಮ್ಮ ನ್ಯೂನ್ಯತೆಯೇ ನಮ್ಮ ಶಕ್ತಿಯಾಗಬೇಕೆಂದು ಪ್ರೌಢಶಾಲಾ ಮುಖ್ಯ ಶಿಕ್ಷಕ ಧನಂಜಯ್ ಕುಲಕರ್ಣಿ ತಿಳಿಸಿದರು.
ಪುರಸಭಾ ಸದಸ್ಯ ಚನ್ನಬಸು ಯರಗಟ್ಟಿ, ಫಿಜಿಯೋಥೆರಪಿ ನೀಡಿದ ಡಾಕ್ಟರ್ ಪಾಟೀಲ್ ಮೇಡಂ, ಕಾರ್ಯಕ್ರಮದ ಅನುಷ್ಠಾನಾಧಿಕಾರಿ ಡಿ.ಆರ್. ಕ್ಯಾಡೀ, ಅಪ್ಸರ ಕೆಂಭಾವಿ, ಎ.ಎಮ್. ಮಂಚದ, ಅಭಿಯಂತರ ಎಚ್.ಪಿ. ರಾವಳ ಉಪಸ್ಥಿತರಿದ್ದರು. ಅನುಷ್ಠಾನಾಧಿಕಾರಿ ಬಿಎಮ್ ಮಂತ್ರಿ ನಿರೂಪಿಸಿದರು. ಸುಮಾರು 70ಕ್ಕೂ ಹೆಚ್ಚು ಅಂಗವಿಕಲ ಮಕ್ಕಳು ಫಿಜಿಯೋಥೆರಪಿ ಲಾಭ ಪಡೆದರು.