ಮಹಾರಾಣಾ ಶಿಕ್ಷಣ ಸಂಸ್ಥೆಯಲ್ಲಿ ಸಹಕಾರಿ ಭೀಷ್ಮ ದಿ. ಕೆ.ಎಚ್.ಪಾಟೀಲರ ಜಯಂತಿ
ಬೆಟಗೇರಿ 16 : ನಗರದ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯ ಸ್ಪೂರ್ತಿಗಳು ನೇರ ನುಡಿಯ ದಿಟ್ಟ ರಾಜಕಾರಣಿ ಹುಲಕೋಟಿ ಹುಲಿ ಎಂದೇ ಪ್ರಸಿದ್ಧಿಯಾದ ದಿ: ಕೆ.ಎಚ್.ಪಾಟೀಲರ ಜಯಂತಿಯನ್ನು ಆಯೋಜಿಸಲಾಗಿತ್ತು. ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಗಣೇಶಸಿಂಗ ಬ್ಯಾಳಿಯವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಾರೆ್ಪಣ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕರಾದ ಎಸ್.ಎಸ್.ಬಡಿಗೇರ ಪ್ರಾಚಾರ್ಯರಾದ ಎ.ಎ.ಹದ್ಲಿ ಶಿಕ್ಷಣ ಸಂಸ್ಥೆಯ ಸಮಸ್ತ ಸಿಬ್ಬಂದಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.