ಲೋಕದರ್ಶನ ವರದಿ
ದಾಂಡೇಲಿ 08: ಆದಿ ಜಾಂಬವಂತ ಸಂಘ ಹಾಗೂ ಕನರ್ಾಟಕ ರಾಹುಲ ಗಾಂಧಿ ಟೀಮ್ ಜಂಟಿ ಆಶ್ರಯದಲ್ಲಿ ಬಾಬ ಸಾಹೇಬ್ ಅಂಬೇಡ್ಕರರ 62 ನೇ ಮಹಾಪರಿನಿವರ್ಾಣ ದಿನಾಚರಣೆಯನ್ನು ಅಂಬೇಡ್ಕರ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನರ್ಾಟಕ ರಾಹುಲ ಗಾಂಧಿ ಟೀಮ್ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ ಮೇಲ್ವರ್ಗದವರು ಸರಕಾರಿ ಹಾಗೂ ಖಾಸಗಿ ರಂಗದಲ್ಲಿ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಆದರೆ ಬಡ ದಲಿತರು ಸಣ್ಣ ಪುಟ್ಟ ಉದ್ಯೋಗ ಮಾಡಿಕೊಂಡು ಜೀವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲವರು ಮೀಸಲಾತಿಯನ್ನು ರದ್ದು ಪಡಿಸುವ ಹುನ್ನಾರು ನಡೆಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಶೂದ್ರ ಜನಾಂಗದವರು ಜಾಗೃತರಾಗದಿದ್ದರೆ ಮೀಸಲಾತಿ ದಲಿತ ಹಿಂದುಳಿದ ವರ್ಗದವರಿಂದ ದೂರವಾಗುವ ಸಾಧ್ಯತೆಯಿದೆ. ಅಂಬೇಡ್ಕರ ಆಶಯದಂತೆ ದಲಿತರು ಆಳುವ ವರ್ಗದವರಾಗಿರಬೇಕು ಹೀಗಾದಾಗ ಮಾತ್ರ ನಾವು ಬಾಬ ಸಾಹೇಬ್ ಅಂಬೇಡ್ಕರವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು. ಅನಂತರ ದಲಿತ ಚಿಂತಕ ಕೃಷ್ಣಾ ಬಳೆಗಾರ, ಜಿಲ್ಲಾ ಕಾರ್ಯದಶರ್ಿ ದೇವರಾಜ ನಾಯ್ಕ ಮಾತನಾಡಿದರು.
ಈ ಸಂದರ್ಭದಲ್ಲಿ ಆದಿ ಜಾಂಬವಂತ ಸಂಘದ ಅಧ್ಯಕ್ಷ ಚಂದ್ರಕಾಂತ ನಡಿಗೇರ, ನಗರಸಭಾ ಸದಸ್ಯರಾದ ರುಕ್ಮೀಣಿ ಬಾಗಡೆ, ವೆಂಕಟಮ್ಮಾ ಮೈಲಕುರಿ ಹಾಗೂ ಇಲಿಯಾಸ್ ಕಾಟಿ, ವೈಶಾಲಿ ಕಾಂಬ್ಳೆ, ರಾಮಚಂದ್ರ ಕಾಂಬ್ಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನಂತರ ವಿವಿಧ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಸಮಾಜ ಸೇವಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದ್ಯಾಮಣ್ಣ ಹರಿಜನ, ಹನುಮಂತ ಹರಿಜನ ಸುನೀಲ ಕಾಂಬ್ಳೆ, ಲಕ್ಷ್ಮೀ ಕೆದರಿ, ನಾಗಮ್ಮಾ ಮೈತ್ರಿ, ಸಂಗೀತಾ ಹರಿಜನ, ಪ್ರಸಾದ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.