ಮಹಾಮಂಡಲ ಪೂಜೆ : ರಥೋತ್ಸವ ಹಾಗೂ ಆರಟ್ಟು ಪೂಜೆ, ಪಡಿ ಪೂಜೆ

ಲೋಕದರ್ಶನ ವರದಿ

ವಿಜಯಪುರ-ಡಿ 22,  ನಗರದ  ಟಕ್ಕೆ  ರಸ್ತೆ  ಶ್ರೀ ಧರ್ಮಶಾಸ್ತ ಟ್ರಸ್ಟ್  ಕಮೀಟಿ  ಆಶ್ರಯದಲ್ಲಿ  ಶ್ರೀ ಅಯ್ಯಪ್ಪಸ್ವಾಮಿ  ದೇವಸ್ಥಾನದಲ್ಲಿ  ಡಿಸೆಂಬರ್ 25 ರಿಂದ 27-12-2018ರವರೆಗೆ  ಮಹಾಮಂಡಲ ಪೂಜೆ, ರಥೋತ್ಸವ, ಆರಟ್ಟು ಪೂಜೆ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ಜರುಗಲಿವೆ.

ಮೂರು ದಿನಗಳವರೆಗೆ  ಕೇರಳ ರಾಜ್ಯದ ಶಬರಿ ಮಲೈ ಶ್ರೀ ಅಯ್ಯಪ್ಪ ಸ್ವಾಮಿ ಅರ್ಚಕರಾದ  ಶ್ರೀ ಅಜಿತ ಭಟ್ಟರು, ಮತ್ತು ಶ್ರೀ ಕಿರಣ ಭಟ್ಟರು, ಹೊನ್ನಾವರ, ಕಕರ್ಿ ಉತ್ತರ ಕನ್ನಡ ಜಿಲ್ಲೆ ಇವರಿಂದ ಉತ್ಸವದ ವಿಶೇಷ ಪೂಜಾ ಕಾರ್ಯಕ್ರಮಗಳು ಅವ್ಯಾಹತವಾಗಿ ನಗರದ ಟಕ್ಕೆ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರುಗುವುದು.

ದಿ. 25ರಂದು ಮಂಗಳವಾರ  ಬೆಳಿಗ್ಗೆ 5-30 ಗಂಟೆಗೆ ಕಾಕಡಾರತಿ, 6-30 ಗಂ. ಗಣ ಹೋಮ ಅಭಿಷೇಕ ಅಲಂಕಾರ ಪೂಜೆ, ನೈವದ್ಯ, ಧ್ವಜಾರೋಹಣ, ಮಕ್ಕಳಿಗಾಗಿ ಮಹಿಳೆಯರಿಗಾಗಿ ರಂಗೋಲಿ ಸ್ಪಧರ್ೆ ಸಾಯಂಕಾಲ .3-30ಕ್ಕೆ , ಮಧ್ಯಾನ್ಹ 4 ಗಂಟೆಗೆ ನಾಗದೇವತಾ ಪ್ರಿತ್ಯರ್ಥವಾಗಿ ಆಶ್ಲೇಷ ಬಲಿ (ನಾಗದೋಷ, ಸರ್ಪದೋಷ, ಸಂತಾನದೋಷ ನಿವಾರಣೆಗಾಗಿ) 

ಸಾಯಂಕಾಲ 5-30 ಗಂಟೆಗೆ ರುದ್ರಪಾರಾಯಣ ಮತ್ತು ಲಲಿತಾ ಸಹಸ್ರನಾಮ ಪಾರಾಯಣ ಶ್ರೀ ವಿಷ್ಣುಯಾಗ, ಸುಮಂಗಲಿಯರಿಂದ ಶ್ರೀದೇವಿಗೆ ಕುಂಕುಮಾರ್ಚನೆ ಮತ್ತು ಸುಹಾಸಿನಿಯರಿಗೆ ಉಡಿತುಂಬುವ ಕಾರ್ಯಕ್ರಮ.

ಸಾಯಂಕಾಲ 6.30 ಗಂ. ಕುಮಾರಿ ಐಶ್ವಯರ್ಾ ಬಡಿಗೇರ ಇವರಿಂದ ಶಿವತಾಂಡವ ನೃತ್ಯ ಭರತನಾಟ್ಯಂ ಮತ್ತು ನಾಟ್ಯಕಲಾ ನೃತ್ಯ ಶಾಲೆಯ ತಂಡದಿಂದ 'ಮಹಿಷಿ ಮರ್ದನ' ಸಮೂಹ ನೃತ್ಯ ಮತ್ತು ಮೋಹಿನಿ ನೃತ್ಯ ಹಾಗೂ ನಗರದ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಣ್ಯಕೋಟಿ ರೂಪಕ ಹಾಗೂ ಭಜನೆ ಕಾರ್ಯಕ್ರಮಗಳು ಜರುಗುವವು.

ಸಾಯಂಕಾಲ 9.00 ಘಂ. ಮಹಾ ಮಂಗಳಾರತಿ ತೀರ್ಥ ಪ್ರಸಾದ.

ದಿ. 26ರಂದು ಬೆಳಿಗ್ಗೆ : 5-30 ಘಂ. ಕಾಕಡಾರತಿಯೊಂದಿಗೆ  ಸ್ವಾಮಿಗೆ ಅಭಿಷೇಕ ಅಲಂಕಾರ ಮತ್ತು ಉಷೆ ಪೂಜೆ, 

ಬೆಳಿಗ್ಗೆ 6-30 ಘಂ.ರುದ್ರಹೋಮ, ದುಗರ್ಾಹೋಮ, ಲಲಿತಾ ಸಹಸ್ರನಾಮ ಹೋಮ, 

ಬೆಳಿಗ್ಗೆ 8 ಘಂ. ಕೂಡಲ ಸಂಗಮದಲ್ಲಿ ಆರಟ್ಟು ಪೂಜೆಗಾಗಿ ಕೂಡಲ ಸಂಗಮಕ್ಕೆ ತೆರಳುವುದು ಹಾಗೂ ಸ್ವಾಮಿಗೆ ತ್ರಿವೇಣಿ ಸಂಗಮ ಸ್ನಾನ, ಪೂಜೆ, ಅಲಂಕಾರ ನೇವೇದ್ಯ.

(ಬೆಳಿಗ್ಗೆ 7 ಘಂ.ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಕೂಡಲಸಂಗಮಕ್ಕೆ ಹೋಗಲು ಉಚಿತ ವಾಹನ ಸೌಕರ್ಯ ಇರುವುದು)

ಸಾಯಂಕಾಲ: 5:00 ಘಂ. ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಶ್ರೀವಿಷ್ಣುಯಾಗ,

ಸಾಯಂಕಾಲ :7.00 ಘಂ. ಅರುಣೋದಯ, ಕಲಾತಂಡ , ಸಾ|| ಖೋತಬಾಳ, ತಾ|| ರೋಣ, ಜಿ|| ಗದಗದವರಿಂದ 'ಜನಪದ ಉತ್ಸವ'

ರಾತ್ರಿ : 9.00 ಘಂ. ಅತಾಳ ಪೂಜೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ.

ದಿ. 27ರಂದು ಬೆಳಿಗ್ಗೆ  5-30 ಗಂ. ಕಾಕಡಾರತಿಯೊಂದಿಗೆ  ಗಣಪತಿ ಮೂಲಮಂತ್ರ ಹೋಮ. ಶ್ರೀ ಅಯ್ಯಪ್ಪಸ್ವಾಮಿ ಮೂಲಮಂತ್ರ ಹೋಮ, ಶ್ರೀ ಸುಬ್ರಮಣ್ಯಂಸ್ವಾಮಿ ಮೂಲಮಂತ್ರ ಹೋಮ, ನವಗ್ರಹ ಶಾಂತಿ, ಅಭಿಷೇಕ, ಮಹಾಪೂಣರ್ಾಹುತಿ

ಬೆಳಿಗ್ಗೆ : 8 ಘಂ. ಕುಂಬಾಭಿಷೇಕ, ಅಲಂಕಾರ ಪೂಜೆ ಬೆಳಿಗ್ಗೆ : 10 ಘಂ. ಮೆರವಣಿಗೆ ಶ್ರೀ ಅಯ್ಯಪ್ಪಸ್ವಾಮಿ ದಿವ್ಯಜ್ಯೋತಿ ಪಲ್ಲಕ್ಕಿ, ರಥೋತ್ಸವ, ಆಭರಣ ಪೆಟ್ಟಿಗೆ ಮೆರವಣಿಗೆಯು ಶ್ರೀಸಿದ್ಧೇಶ್ವರ ದೇವಸ್ಥಾನದಿಂದ ಹೊರಟು ಗಾಂಧಿ ಸರ್ಕಲ್, ಶಿವಾಜಿ ಸರ್ಕಲ್, ಶ್ರೀ ಶಂಕರಲಿಂಗ ದೇವಸ್ಥಾನ ಮಾರ್ಗವಾಗಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ತಲುಪುವುದು.

ಮಧ್ಯಾಹ್ನ 1 ಘಂ. ಮಹಾಪ್ರಸಾದ, ಮಧ್ಯಾಹ್ನ : 4.00 ಘಂ. "ಧರ್ಮಸಭೆ"

ದಿವ್ಯ ಸಾನಿಧ್ಯ : ಗುರುಶಾಂತಲಿಂಗದೇವ ದೇಶಿಕೇಂದ್ರ ಶಿವಾಚಾರ್ಯರು, ಕಾಡಸಿದ್ಧೇಶ್ವರ ಮಠ, ಮಾಂಜರಿ-ಬೆಳಗಾವಿ ಜಿಲ್ಲೆ, ಸಾಮುಖ್ಯ : ಪ.ಪೂ. ಶ್ರೀ ಮ.ಘ.ಚ. ಚನ್ನಮಲ್ಲಿಕಾಜರ್ುನ ಶಿವಾಚಾರ್ಯರು, ಉದಯಲಿಂಗೇಶ್ವರ ಹಿರೇಮಠ, ಸಾ. ನಾಗಠಾಣ,  ವಿಜಯಪುರ.ರೇಣುಕಾ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ, ಸಾ|| ಜೈನಾಪೂರ, ತಾ|| ಬ.ಬಾಗೇವಾಡಿ, ಶಂಕರಾನಂದ ಮಹಾಸ್ವಾಮಿಗಳು, ಸಿದ್ಧರೂಢ ಮಠ, ವಿಜಯಪುರ, ಅತಿಥಿಗಳಾಗಿ ಬಾಬುಗೌಡ ಬಿರಾದಾರ, ಉದ್ದಿಮೆದಾರರು, ವಿಜಯಪುರ. ಬಸವರಾಜ ಎಲಿಗಾರ, ಡಿ.ಎಸ್.ಪಿ. ಲೋಕಾಯುಕ್ತ, ವಿಜಯಪುರ, ಬಿ.ಆರ್.ಚೌಕಿಮಠ, ವಿಶ್ರಾಂತ ಪೋಲೀಸ್ ಅಧಿಕಾರಿಗಳು, ವಿಜಯಪುರ, ಬಿ.ಆರ್. ಚೌಕಿಮಠ, ವಿಶ್ರಾಂತ ಪೋಲೀಸ್ ಅಧಿಕಾರಿಗಳು, ವಿಜಯಪುರ. ಸಾಯಂಕಾಲ : 6 ಘಂ. ದೀಪಾರಾಧನೆ,  ಪುಷ್ಪಾರ್ಚನೆ, ಅಲಂಕಾರ ಹಾಗೂ ಕಪರ್ೂರ ಸೇವೆ, ಆರತಿಯೊಂದಿಗೆ  ಪಲ್ಲಕ್ಕಿ ಉತ್ಸವ.

ರಾತ್ರಿ :8.00 ಘಂ. ಶ್ರೀ ಅಯ್ಯಪ್ಪಸ್ವಾಮಿಯ ಮಹಾಮಂಡಲ ಪೂಜೆಯೊಂದಿಗೆ ಪವಿತ್ರವಾದ 18 ಮೆಟ್ಟಿಲುಗಳ ಮಹಾಪೂಜೆ ಕಾರ್ಯಕ್ರಮ ನಂತರ ರಂಗುರಂಗಿನ ಮದ್ದಿನ ಕಾರ್ಯಕ್ರಮ.

ರಾತ್ರಿ : 9.00 ಘಂ. ಮಹಾ ಮಂಗಳಾರತಿ, ಈ ರೀತಿಯಾಗಿ ಎಲ್ಲ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿಸಲ್ಪಡುವುದು

ಈ ಎಲ್ಲ ಕಾರ್ಯಕ್ರಮದಲ್ಲಿ  ಸರ್ವರೂ ಭಾಗವಹಿಸಿ  ತನು,ಮನ, ಧನದಿಂದ  ಸೇವೆ ಸಲ್ಲಿಸಿ  ಸ್ವಾಮಿಯ ಕೃಪೆಗೆ  ಪಾತ್ರರಾಗ ಬೇಕೆಂದು  ರಾಮ ಗುರುಸ್ವಾಮಿ, , ಶಿವು.ಬ.ಅಣೆಪ್ಪನವರ ಸ್ವಾಮಿ, ಎಸ್.ಜಿ.ಲಕ್ಕುಂಡಿಮಠ, ಎಸ್.ಎಸ್.ಸೋಮಪುರ, ಚಂದ್ರಶೇಖರ ನಾಗರೆಡ್ಡಿ, ಭೀಮಶೀ ಕುಮಸಗಿಸ್ವಾಮಿ, ಧರುಸ್ವಾಮಿ, ಬಿ.ಬಿ.ತಳೇವಾಡ,  ಜಿ.ಬಿ. ಗಳವೆ, ರಾಜಶೇಖರ ಬಿರಾದಾರ ಮತ್ತು  ಶ್ರೀ ಧರ್ಮ ಶಾಸ್ತ ್ರಟ್ರಸ್ಟ  ಕಮೀಟಿ  ಭಕ್ತ ವೃಂದ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.