ಮಹಾಲಿಂಗಪುರ ಪಂಚಮಸಾಲಿಗಳ ಆಕ್ರೋಶ ಇಂದು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ
ಮಹಾಲಿಂಗಪುರ 11: ವಿಕಾಸ ಸೌಧ ಮುಂದೆ 2ಎ ಮೀಸಲಾತಿಗಾಗಿ ಹೋರಾಟ ನಿರತ ಪಂಚಮಸಾಲಿ ಸಮಾಜದ ಪ್ರತಿಭಟನಾಕಾರರ ಮೇಲೆ ಮನಸೋ ಇಚ್ಚೆ ಲಾಠಿ ಬೀಸುವ ಮೂಲಕ ದಬ್ಬಾಳಿಕೆ ಮೆರೆದ ಸರಕಾರದ ಕ್ರಮ ಖಂಡನೀಯವಾದುದು. ಈ ಗೂಂಡಾ ವರ್ತನೆಯನ್ನು ವಿರೋಧಿಸಿ ಡಿ.12ರಂದು ಮಹಾಲಿಂಗಪುರದಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪಂಚಮಸಾಲಿ ಸಮಾಜದ ಮುಖಂಡರು ತಿಳಿಸಿದ್ದಾರೆ.
ಪಟ್ಟಣದ ಅಸರ್ ಗ್ರ್ಯಾಂಡ್ ಹೊಟೇಲ್‌ನಲ್ಲಿ ಪತ್ರಿಕಾ ಗೋಷ್ಠಿ ಕರೆದು ತಿಳಿಸಿದರು. ನ್ಯಾಯಕ್ಕಾಗಿ ಆಗ್ರಹಿಸಿ ಮುಖ್ಯ ಮಂತ್ರಿಗೆ ಭೇಟಿಯಾಗಲು ತೆರಳುತ್ತಿದ್ದ ಪ್ರತಿಭಟನಾಕಾರರನ್ನು ತಡೆದು ನಿರ್ದಾಕ್ಷಿಣ್ಯವಾಗಿ ಥಳಿಸಿದ್ದಲ್ಲದೇ ಪೂಜ್ಯ ಜಗದ್ಗುರುಗಳಾದ ಬಸವಜಯ ಮೃತ್ಯುಂಜಯ ಶ್ರೀಗಳನ್ನು, ಮುಂಖಡರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಈರಣ್ಣ ಕಡಾಡಿ, ಎಚ್.ಎಸ್.ಶಿವಶಂಕರ ಅವರನ್ನು ಬಂಧಿಸಿ ಸಮಾಜಕ್ಕೆ ಅಮಾನವೀಯ ದೌರ್ಜನ್ಯ ಎಸಗಿದ್ದಾರೆ. ಈ ವರ್ತನೆಯನ್ನು ಖಂಡಿಸುತ್ತೇವೆ. ಖ.12ರಂದು ಗುರುವಾರ ಬೆಳಗ್ಗೆ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಮಹಾಲಿಂಗಪುರ ಹಾಗೂ ಸುತ್ತಲಿನ ಹತ್ತಾರು ಗ್ರಾಮಗಳಿಂದ ಬೃಹತ್ ಸಂಖ್ಯೆಯ ಪಂಚಮಸಾಲಿಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು. 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡಲಾಗುವುದು. ಹೆದ್ದಾರಿ ಬಂದ್ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ಸಮಾಜದ ಮುಖಂಡರು ತಿಳಿಸಿದ್ದಾರೆ.
ಸಭೆಯಲ್ಲಿ ಶ್ರೀಶೈಲಪ್ಪ ಉಳ್ಳಾಗಡ್ಡಿ, ಶ್ರೀಶೈಲಪ್ಪ ವಜ್ಜರಮಟ್ಟಿ, ಹಣಮಂತ ಶಿರೋಳ, ಸಿದ್ದುಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ಬಸಪ್ಪ ಕೊಪ್ಪದ, ಬಸು ದಲಾಲ, ಮಹಾಲಿಂಗಪ್ಪ ಕಂಠಿ, ಹಣಮಂತ ಕೊಣ್ಣೂರ, ಮಹಾದೇವ ಮೇಟಿ, ಡಾ.ಅಶೋಕ ದಿನ್ನಿಮನಿ, ಚನ್ನಬಸು ಯರಗಟ್ಟಿ, ಬಸವರಾಜ ನಾಗನೂರ, ಹಣಮಂತ ಯರಗಟ್ಟಿ, ಗೀರೀಶ ಖೋತ, ಯಲ್ಲಪ್ಪ ಬಾಗೋಜಿ, ಮಹಾದೇವ ಬೆಣಚಿನಮರಡಿ, ಎಂ.ಎ.ಪಾಟೀಲ, ಸಂದೀಪ ಸೂರಗೊಂಡ, ಚನ್ನಬಸು ಹುರಕಡ್ಲಿ ಇದ್ದರು.