ಮಡಿವಾಳ ಮಾಚಿದೇವ ಭಾವಚಿತ್ರ ಮೆರವಣಿಗೆ

Madiwala Machideva portrait procession

ಮಡಿವಾಳ ಮಾಚಿದೇವ ಭಾವಚಿತ್ರ ಮೆರವಣಿಗೆ 

ಕಂಪ್ಲಿ 01: ತಾಲೂಕಿನ ಸಣಾಪುರ ಗ್ರಾಮದಲ್ಲಿ ಮಡಿವಾಳ ಮಾಚಿದೇವ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ಶನಿವಾರ ಜರುಗಿತು. ಇಲ್ಲಿನ ತುಂಗಭದ್ರ ನದಿ ತಟದಲ್ಲಿ ಗಂಗೆಪೂಜೆ ಸಲ್ಲಿಸಿದ ನಂತರ ಗಾಮದ ಪ್ರಮುಖ ಬೀದಿಗಳಲ್ಲಿ ಭಾವಚಿತ ಮೆರವಣಿಗೆ ನಡೆಸಿ, ತದನಂತರ ಮಾರಮ್ಮ ದೇವಸ್ಥಾನ ಬಳಿ ಸಮಾವೇಶಗೊಂಡಿತು. ಈ ಮೆರವಣಿಗೆಯಲ್ಲಿ ಸುಮಂಗಲಿಯರ ಕುಂಭ, ಕಳಸ, ತಾಷಾರಾಂಡೋಲ್ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪಾಲ್ಗೊಂಡಿದ್ದವು. ಈ ಜಯಂತ್ಯೋತ್ಸವದಲ್ಲಿ ಭಾಗವಹಿಸಿ ವೀರಶೈವ ಸಂಘದ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಮಾತನಾಡಿ, ಸಣಾಪುರ ಗ್ರಾಮದಲ್ಲಿ ಮಡಿವಾಳ ಸಮಾಜದವರ ಸಭೆ, ಮದುವೆ, ಸಮಾರಂಭಗಳಿಗಾಗಿ ಸಮುದಾಯ ಭವನದ ಅವಶ್ಯಕತೆ ಇದ್ದು, ಶಾಸಕ ಗಣೇಶ್ ಅವರ ಗಮನಕ್ಕೆ ತಂದು ಸುಮಾರು 5ಲಕ್ಷ ಅನುದಾನ ಹಾಕಿಸಿಕೊಡುವ ಭರವಸೆ ನೀಡಿದರು. ತದನಂತರ ವೀರಗಂಟಿ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ವೆಂಕಟಸ್ವಾಮಿ ಮಡಿವಾಳ ಮಾತನಾಡಿ, ಮಡಿವಾಳ ಸಮುದಾಯವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದ್ದು, ಜನಪ್ರತಿನಿಧಿಗಳು ಗಮನ ಹರಿಸಿ, ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಜತೆಗೆ ಸರ್ಕಾರದ ವಿಶೇಷ ಯೋಜನೆಗಳನ್ನು ಕಲ್ಪಿಸಬೇಕು. ಮತ್ತು ಈ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಂ.ವಿರೇಶ, ಕಾರ್ಯದರ್ಶಿ ಎಂ.ವೆಂಕಟೇಶ, ಖಜಾಂಚೆ ಯಲ್ಲಪ್ಪ, ಮುಖಂಡರಾದ ಯಲ್ಲಪ್ಪ, ಈರಣ್ಣ, ಲೋಕಪ್ಪ, ವೆಂಕೋಬಣ್ಣ, ಪಕ್ಕೀರ​‍್ಪ, ನಾಗೇಂದ್ರ, ಯಂಕಪ್ಪ, ಶಿವಕುಮಾರ, ಚನ್ನವೀರ, ಶೇಖರಿ, ರವಿಕುಮಾರ, ವಿನೋದ, ಮಂಜುನಾಥ, ತಿಮ್ಮಪ್ಪ, ಲಕ್ಷ್ಮಿ, ಪದ್ಮಾವತಿ, ನೀಲಮ್ಮ ಶಾರದಮ್ಮ, ಎಂ.ದೇವಿ, ಈರಮ್ಮ, ಶೋಭಾ ಸೇರಿದಂತೆ ಇತರರು ಭಾಗವಹಿಸಿದ್ದರು. 

ತಾಲೂಕು ಆಡಳಿತ : ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಈ ವೇಳೆ ಕಲ್ಮಠದ ಅಭಿನವ ಪಭುಸ್ವಾಮಿ, ತಹಶೀಲ್ದಾರ್ ಶಿವರಾಜ ಶಿವಪುರ, ಪುರಸಭೆ ಸದಸ್ಯರಾದ ರಾಮಾಂಜನೇಯಲು, ಪಾರ್ವತಿ, ಕಂಪ್ಲಿ ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಎಂ.ಹುಲುಗಪ್ಪ, ಉಪಾಧ್ಯಕ್ಷ ರಮೇಶ, ಕಾರ್ಯದರ್ಶಿ ಹುಲಿಗೇಶ, ಖಜಾಂಚಿ ರಾಜೇಶ, ಮುಖಂಡರಾದ ಎಂ.ಸುಧೀರ್, ವಿರೂಪಾಕ್ಷಿ, ಎ.ಹನುಮಂತ, ಎಲ್‌ಐಸಿ ಈರಣ್ಣ, ವಿರೇಶ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು. ಫೆ.002: ತಾಲೂಕಿನ ಸಣಾಪುರ ಗ್ರಾಮದಲ್ಲಿ ವಿಜೃಂಭಣೆಯಿಂದ ಮಡಿವಾಳ ಮಾಚಿದೇವ ಭಾವಚಿತ ಮೆರವಣಿಗೆ ಮಾಡಲಾಯಿತು.