ಲೋಕದರ್ಶನ
ವರದಿ
ಕಂಪ್ಲಿ 11:
ತಾಲೂಕಿನ ಕಂಪ್ಲಿ-ಕೋಟೆಯ ತುಂಗಭದ್ರ ನದಿ ತಟದಲ್ಲಿ ಮಂತ್ರಾಲಯ
ಮಠದ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಬೃಂದಾವನಸ್ಥರಾದ ಮಾಧವ ತೀರ್ಥರ ಮಧ್ಯಾರಾಧನೆ
ಮಂಗಳವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ಮಂತ್ರಾಲಯದ ಗುರಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಪ್ರಾಚಾರ್ಯ ಎನ್.ವಾದಿರಾಜಾಚಾರ್ ಮಾತನಾಡಿ,
ಮಂತ್ರಾಲಯ ಮಠಕ್ಕೆ ಸಂಬಂಧಿಸಿದ ಪೂವರ್ಿಕ ಗುರು ಮಾಧವತೀರ್ಥರ ಆರಾಧನ
ಮಹೋತ್ಸವ ನದಿ ತಟದಲ್ಲಿನ ಮೂಲ
ವೃಂದಾವನದಲ್ಲಿ ನೆರವೇರಿಸಲಾಗಿದೆ.
ಮೂಲ ವೃಂದಾವನ ಮೇಲೆ
ಮಾಧವತೀರ್ಥರು ಪೂಜಿಸುತ್ತಿದ್ದ ಪ್ರತಿಮೆಗಳ ಪೆಟ್ಟಿಗೆಯನ್ನಿರಿಸಿ ನಾಣ್ಯಗಳ ಮೂಲಕ ಕನಕಾಭಿಷೇಕ
ಮಾಡಲಾಯಿತು. ಪಂಚಾಮೃತಾಭಿಷೇಕ ಸೇರಿ ಮಧ್ಯ ಆರಾಧನೆಯ
ನಾನಾ ಕಾರ್ಯಕ್ರಮಗಳು ಜರುಗಿಸಲಾಗಿದೆ. ನಂತರ ಹೊಳೆ ಆಂಜನೇಯ
ದೇವಸ್ಥಾನದಲ್ಲಿ ಮಂತ್ರಾಲಯ ಸಂಸ್ಥಾನ ಮಠದ ಮೂಲರಾಮ ದೇವರ
ಪ್ರತಿಮೆಗಳ ಪೂಜೆಯನ್ನು ಮಂತ್ರಾಲಯ ಮಠದ ಸುಬುಧೇಂದ್ರ ತೀರ್ಥರು
ನೆರವೇರಿಸಿದರು ಎಂದು ಹೇಳಿದರು.
ಮಠದ ಸುಬುಧೇಂದ್ರ ತೀರ್ಥರ
ಪೂವರ್ಾಶ್ರಮದ ತಂದೆಯವರಾದ ಗಿರಿರಾಜ ಆಚಾರ್ಯರ ನೇತೃತ್ವದಲ್ಲಿ ಮಧ್ವಾಚಾರ್ಯರ ಶಿಷ್ಯರಾದ ಮಾಧವತೀರ್ಥರ ಚರಮ ಶ್ಲೋಕದ ಮೇಲೆ
ಶಾಸ್ತ್ರೀಯ ಚಚರ್ೆ, ಸಂವಾದಗಳು ಜರುಗಿದವು. ಮಾಧವತೀರ್ಥರ ಗ್ರಂಥಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳು ಜರುಗಿದವು.
ಕೋಟೆಯ ಡಾ.ಧೀರಣ್ಣ ವೈದ್ಯರು,
ಬಂಡಿ ಶ್ಯಾಮಾಚಾರ್, ಉಡುಪಿ ಕೃಷ್ಣಾಚಾರ್ಯರು, ಶಿರುಗುಪ್ಪದ ಕೃಷ್ಣಾಚಾರ್ಯರು, ಪವನ್ ಆಚಾರಿ ಕುರುಡಿ,
ವೇಣುಗೋಪಾಲಚಾರ್ ಸೇರಿ ಗುರುರಾಜ ಸೇವಾಮಂಡಳಿಯವರು
ಸೇರಿ ಸರ್ವ ಸಮುದಾಯಗಳ ಸದ್ಭಕ್ತರು
ಶ್ರದ್ಧಾಭಕ್ತಿಗಳಿಂದ ಆರಾಧನೆಯಲ್ಲಿ ಪಾಲ್ಗೊಂಡಿದ್ದರು. ಸದ್ಭಕ್ತರಿಗೆ ತೀರ್ಥ ಪ್ರಸಾದ, ಅನ್ನಸಂತರ್ಪಣೆ ವಿನಿಯೋಗಗೊಂಡಿತು.