ನಾಳೆಯಿಂದ ಮದಭಾವಿ ರೇಣುಕಾ ಯಲ್ಲಮ್ಮ ದೇವಿ ಜಾತ್ರೆ

Madabavi Renuka Yallamma Devi fair from tomorrow

ನಾಳೆಯಿಂದ ಮದಭಾವಿ ರೇಣುಕಾ ಯಲ್ಲಮ್ಮ ದೇವಿ ಜಾತ್ರೆ 

ಸಂಬರಗಿ 11: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿರುವ ಮದಭಾವಿ ಗ್ರಾಮದಲ್ಲಿ ರೇಣುಕಾ ಯಲ್ಲಮ್ಮ ದೇವಿ ಜಾತ್ರೆ ಜ. 13ರಿಂದ 14ರವರೆಗೆ ನಡೆಯುತ್ತಿದ್ದು, ಆ ನಿಮಿತ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನವರಿ 13ರಂದು ಬೆಳಗ್ಗೆ ದೇವಿಯ ವಿಶೇಷ ಪೂಜೆ ರುದ್ರಾಭಿಷೇಕ ಕಾರ್ಯಕ್ರಮ ನಂತರ ದೇವಿಯ ಉಡಿ ತುಂಬುವ ಕಾರ್ಯಕ್ರಮ ಸಂಜೆ ಚೌಡಕಿ ಪದಗಳು ಹರ್ದೇಶ  ಅಡವಿಸಿದ್ದೇಶ್ವರ ಗಾಯನ ಸಂಘ ಯಡಹಳ್ಳಿ ತಾಲೂಕ ಮುಧೋಳ್ ಜಿಲ್ಲಾ ಬಾಗಲಕೋಟೆ ಹಾಗೂ ನಾಗೇಶ ದುರ್ಗಾದೇವಿ ಚೌಡಕಿ ಮೇಳ ಮುಗಳಖೋಡ ತಾಲೂಕ ಮುಧೋಳ ಜಿಲ್ಲಾ ಬಾಗಲಕೋಟ ಇವರಿಂದ ಕಾರ್ಯಕ್ರಮಗಳು ಇರುತ್ತವೆ ಹಾಗೂ ಮಹಾಪ್ರಸಾದ ಇರುತ್ತದೆ. ಜನವರಿ 14ರಂದು ಬೆಳಿಗ್ಗೆ 10ಗಂಟೆಗೆ ಜೊಡ ಎತ್ತಿನ ಗಾಡಿ ಮತ್ತು ಕುದುರೆ ಗಾಡಿ ಶರ್ಯತ್ತು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾಗಿರುವ ಸ್ಪರ್ಧಕರಿಗೆ ಬಹುಮಾನ ನೀಡಲಾಗುವುದು ಎಂದು ಜಾತ್ರಾ ಕಮೀಟಿ ಮುಖ್ಯಸ್ಥರು ತಿಳಿಸಿದ್ದಾರೆ.