ಕನಕದಾಸರ ನೂತನ ಮೂರ್ತಿಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ

MLA Vishwas Vaidya inaugurates new statue of Kanakadasa

ಕನಕದಾಸರ ನೂತನ ಮೂರ್ತಿಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ 

ಯರಗಟ್ಟಿ, 08 : ಸಮಾಜದಲ್ಲಿದ್ದಂತಹ ಜಾತಿ, ಮತ, ಕುಲ ತಾರತಮ್ಯವೆಂಬ ಅಜ್ಞಾನದ ಕತ್ತಲೆಯ ದೂರಸರಿಸಿ ಸಾಮರಸ್ಯ ಸಮಾನತೆಯ ಮೂಲಕ ಜ್ಞಾನವೆಂಬ ಬೆಳಕನ್ನು ಚೆಲ್ಲಿದ ಸಂತ ಶ್ರೆಷ್ಠ ಕನಕದಾಸರು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು. 

ಸಮೀಪದ ಮದ್ಲೂರ ಗ್ರಾಮದ ಬೀರಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ರವಿವಾರ ಹಮ್ಮಿಕೊಂಡಿದ್ದ ಕನಕದಾಸರ ನೂತನ ಮೂರ್ತಿ ಅನಾವರಣ ಗೊಳಿಸಿ ಮಾತನಾಡಿದ ಅವರು, ಕನಕದಾಸರು ಸಮಾಜ ಸುಧಾರಕರು ಮಾತ್ರವಲ್ಲ. ಒಬ್ಬ ದಾರ್ಶನಿಕರಾಗಿ ಕನ್ನಡ ಭಾಷೆಯಲ್ಲಿ ಹರಿಭಕ್ತಸಾರ, ರಾಮಧ್ಯಾನ, ನಳ ಚರಿತ್ರೆ, ಮೋಹನ ತರಂಗಿಣಿ ಎಂಬ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. 

ಯರಗಟ್ಟಿ ಎಪಿಎಂಸಿ ನಿರ್ದೇಶಕ ಸಿದ್ಧಾರೂಢ ಬಿಲಕಂಚಿ ಮಾತನಾಡಿ, ವಿಶ್ವಕ್ಕೆ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸಿದವರು ಸಂತ ಶ್ರೆಷ್ಠ ಕನಕದಾಸರು, ಕಿರ್ತನೆಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದಿದರು ಎಂದು ಹೇಳಿದರು.  

ಸವದತ್ತಿ ಬ್ರಹ್ಮಾನಂದ ಆಶ್ರಮದ ಶಿವಾನಂದ ಸ್ವಾಮೀಜಿ ದಿವ್ಯ ಸಾನ್ನಿದ್ಯ ವಹಿಸಿದ್ದರು. ಬಸಯ್ಯ ಪೂಜೇರ ಸಾನ್ನಿದ್ಯ ವಹಿಸಿದ್ದರು, ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಹೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಫಕೀರ​‍್ಪ ಹದ್ದನ್ನವರ, ಮುಖಂಡ ಮಾರುತಿ ಕುರಿ, ನಾಗಪ್ಪ ಸಾಲಿ, ನ್ಯಾಯವಾದಿ ಗುಡುಸಾಬ ದೊಡಮನಿ, ಮಲ್ಲೇಶ ಕಲಕುಟ್ರಿ, ಸುಭಾನಿ ದೊಡಮನಿ, ಬಸವರಾಜ ಸುಣಗಾರ, ಆರ್‌.ಕೆ.ಪಟಾತ, ಗೊಪಾಲ ಮೇಟಿ, ವಿಠ್ಠಲ ಅಗಸಿಮನಿ, ಮಹಾದೇವ ಮುರಗೋಡ, ಸುರೇಶ ಹೊಟ್ಟಿ, ಬಸವರಾಜ ಮನಿಕಟ್ಟಿ, ಯಲ್ಲಪ್ಪ ನರಿ, ಸಿದ್ದಪ್ಪ ಕುರಿ ಸೇರಿದಂತೆ ಇತರರು ಇದ್ದರು. ವಿಠ್ಠಲ ಪಚ್ಚಿನವರ ನಿರೂಪಿಸಿ ವಂದಿಸಿದರು.