ಸಂಬರಗಿ 17: ಕೇವಲ ಜಯಂತಿ ಆಚರಿಸಿದರೆ ಸಾಲದು, ಮಹಾತ್ಮರ ಆಚಾರ ವಿಚಾರಗಳನ್ನು ಯುವಪೀಳಿಗೆ ರೂಢಿಸಿಕೊಳ್ಳಬೇಕು. ಏಪ್ರಿಲ್ ತಿಂಗಳಲ್ಲಿ ಪ್ರತಿ ಗ್ರಾಮಗಳಲ್ಲಿ ಅಂಬೇಡ್ಕರ ಜಯಂತಿ ಆಚರಣೆ ಮಾಡುತ್ತಾರೆ. ಅವರ ಆಚಾರ ವಿಚಾರಗಳನ್ನು ಸಾಮಾನ್ಯ ಜನರಿಗೆ ತಲುಪಿ ಸುಧಾರಣಾ ಆಗಬೇಕೆಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಧ್ಯಮ ಪ್ರತಿನಿಧಿ ರಾವಸಾಹೇಬ್ ಐಹೊಳೆ ಅವರು ಮನವಿ ಮಾಡಿದರು.
ಅವರು ಅಗ್ರಣೀ ಇಂಗಳಗಾಂವ ಗ್ರಾಮದಲ್ಲಿ ಭಾರತ ರತ್ನ ಹಾಗು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುರಸಭೆ ಸದಸ್ಯರಾದ ರಾವಸಾಬ ಐಹೊಳೆ, ಸಂಘಟನೆಗಳ ಮುಖ್ಯಸ್ಥರಾದ ಕುಮಾರ ಗಸ್ತಿ, ಹನಮಂತ ಅರ್ದಾವುರ ಇವರಿಂದ ಪೂಜೆ ನಿರ್ವಹಿಸಲಾಯಿತು.
ಈ ವೇಳೆ ರಾಜು ರಾಜಾಂಗಲೇ, ಗ್ರಾಮದ ಹಿರಿಯರಾದ ಕುಪೇಂದ್ರ ತೆಳಗಡೆ, ಸುರೇಶ್ ಶಿನಾಳ, ಮಾರುತಿ ಸಂಗಮ, ಸಂಜೀವ ತೆಳಗಡೆ, ಮಾದೇವ ಐಹೊಳೆ, ಲಕ್ಷ್ಮಣ್ ಸಂಗಂ,ಇರಬದ್ರ ಲೋನಾರೆ, ರಾವಸಾಬ ಬಿರಾದಾರ್, ಅರುಣ್ ಬಿರಾದಾರ್ ಸಂತೋಷ್ ಗಡದೆ, ಮುರಗೆಪ್ಪ ಖೋತ್, ರಾಜು ಸಂಗಂ, ಶಿವಪ್ಪ ಮಾಂಗ , ಗೋಪಾಲ ಮಾಂಗ, ರಾವಸಾಬ ಸಂಗಮ, ಮುರಗೆಪ್ಪ ಮಾಂಗ ಯಲ್ಲಪ್ಪ ಮಾಂಗ, ಉಮೇಶ್ ಸಂಗಮ, ಹಾಗು ಗ್ರಾಮದ ಪಂಚಾಯತ ಸದಸ್ಯರು, ಹಿರಿಯರು, ತಾಯಂದಿರು, ಯುವಕರು ಹಾಜರಿದ್ದರು.