ಉಪ್ಪುಣಸಿ-ಗುಡ್ಡದಮುಳಥಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭಾನುವಾರ ಭೂಮಿಪೂಜೆ

MLA Srinivasa Mane performed Bhumi Puja for Uppanasi-Guddadamulathalli road development work on Sun

ಉಪ್ಪುಣಸಿ-ಗುಡ್ಡದಮುಳಥಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭಾನುವಾರ ಭೂಮಿಪೂಜೆ

ಹಾವೇರಿ 22 :ಜಿಲ್ಲೆಯ ಹಾನಗಲ್ ಕ್ಷೇತ್ರದ ಉಪ್ಪುಣಸಿ ಗ್ರಾಮದಲ್ಲಿ 2023-24 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮ ಲೆಕ್ಕ ಶೀರ್ಷಿಕೆ 5054 ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ 33 ಲಕ್ಷ ರೂ. ವೆಚ್ಚದಲ್ಲಿ ಉಪ್ಪುಣಸಿ-ಗುಡ್ಡದಮುಳಥಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭಾನುವಾರ ಭೂಮಿಪೂಜೆ ನೆರವೇರಿಸಿದರು.         ಬಳಿಕ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 20 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಹಂತ, ಹಂತವಾಗಿ ಅನುದಾನ ಲಭ್ಯತೆ ಆಧರಿಸಿ ಬಹುವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಗಮನ ನೀಡಲಾಗಿದೆ.ಹಂತ ಹಂತವಾಗಿ ಬಹುಬೇಡಿಕೆ ಇರುವ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದರು. 

  ಇದೇ ಸಂದರ್ಭದಲ್ಲಿ ಶಾಸಕ ಮಾನೆ, ಸಾರ್ವಜನಿಕರ ಕುಂದು, ಕೊರತೆ ಆಲಿಸಿ ಪರಿಹಾರ ದೊರಕಿಸಿದರು. ನಾನಾ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿ, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಕಾಳಜಿ ವಹಿಸುವ ಭರವಸೆ ನೀಡಿದರು.     ಈ ಸಂದರ್ಭದಲ್ಲಿ  ಗ್ರಾಪಂ ಅಧ್ಯಕ್ಷ ಬಾಬಾಜಾಬ ಬಂಕಾಪೂರ,ಉಪಾಧ್ಯಕ್ಷೆ ಅಕ್ಕಮ್ಮ ಗಂಟೇರ,ಸದಸ್ಯರಾದ ಫಕ್ಕೀರ​‍್ಪ ಮುಂಡರಗಿ,ನಾಗಪ್ಪ ವಡ್ಡರ,ಹರೀಶ ಕೊಪ್ಪದ, ಸಾವಕ್ಕ ಪರದಳ್ಳಿ,ಮುಖಂಡರಾದ ಸಿ.ಎಂ.ದೊಡ್ಡಚಿಕ್ಕಣ್ಣನವರ,ಮಂಜು ಗೊರಣ್ಣನವರ, ಶಿವು ತಳವಾರ,ಫಕ್ಕೀರ​‍್ಪ ಹುರುಳಿಕುಪ್ಪಿ,ಗುಡ್ಡಪ್ಪ ಬ್ಯಾಗವಾದಿ,ಕರಿಯಪ್ಪ ಗಂಟೇರ,ಶಿವಯೋಗೆಪ್ಪ ಮಲ್ಲಿಗಾರ,ಲಕ್ಕಪ್ಪ ಗಂಟೇರ,ಯಲ್ಲಪ್ಪ ದೊಡ್ಡಚಿಕ್ಕಣ್ಣನವರ, ಕುಮಾರ ಗೂರನವರ, ಕೊಟ್ರೇಶ ಕಲಕೇರಿ, ರಮೇಶ ಹುರುಳಿಕುಪ್ಪಿ, ಶರತ್ ಸೂರ್ಯವಂಶಿ,ಮೈಲಾರೆಪ್ಪ ಹೆಬ್ಬಾಳ,ರಾಮಪ್ಪ ದೊಡ್ಡಮನಿ,ಶಂಕ್ರ​‍್ಪ ಮರಡೆಪ್ಪನವರ, ಅಜ್ಜಪ್ಪ ಗೊಡ್ಡೇರ ಸೇರಿದಂತೆ ಅನೇಕರಿದ್ದರು.