ರಂಜಾನ್ ಹಬ್ಬದ ಪ್ರಯುಕ್ತ ಶಾಸಕ ಪಠಾಣ ಪ್ರಾರ್ಥನೆ

MLA Pathan prayer on the occasion of Ramadan

ರಂಜಾನ್ ಹಬ್ಬದ ಪ್ರಯುಕ್ತ ಶಾಸಕ ಪಠಾಣ ಪ್ರಾರ್ಥನೆ  

 ಶಿಗ್ಗಾವಿ  31: ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಶಾಸಕ ಯಾಸೀರಖಾನ ಪಠಾಣ ಪ್ರಾರ್ಥನೆ ಸಲ್ಲಿಸಿದರು. ನಂತರ ಹಬ್ಬದ ಶುಭಾಶಯಗಳನ್ನು ಕೋರಿ ಮಾತನಾಡಿದ ಅವರು ಅಲ್ಲಾ ನಮಗೆ ಜನರ ಸೇವೆಯನ್ನು ಮಾಡಲು ಒಂದು ಒಳ್ಳೆಯ ಅವಕಾಶ ನೀಡಿದ್ದಾನೆ ಅದರ ಸದುಪಯೋಗವನ್ನು ತಾವು ಪಡೆದುಕೊಳ್ಳಬೇಕು ಹಾಗೂ ಏನೇ ಕೆಲಸವಿದ್ದರೂ ಬಂದು ನನಗೆ ತಿಳಿಸಿರಿ ಎಂದರು.    ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಗೌಸಖಾನ ಮುನಶಿ, ಜಾಫರಖಾನ ಪಠಾಣ, ಮುಕ್ತಾರಾಹ್ಮದ ತಹಶಿಲ್ದಾರ, ಮಾಜಿ ಪುರಸಭೆ ಅದ್ಯಕ್ಷ ಅಬ್ದುಲ್ ಕರೀಂ ಮೊಗಲಲ್ಲಿ, ಮಜೀದ ಮಾಳಗಿಮನಿ, ಮುನ್ನಾ ಲಕ್ಷೇಶ್ವರ, ಮುಕ್ತಾರ ತಿಮ್ಮಾಪೂರ, ರಶೀದ ಗೋಟಗೋಡಿ, ಮುನ್ನಾ ಮಾಲ್ದಾರ, ಸಾಧಿಕ ಸವಣೂರ, ಅತ್ತಾವುಲ್ಲಾಖಾಜೇಖಾನವರ,ಹೆಚ್‌.ಎಂ.ಕಳಸ, ಜಾವೀದ ದೊಡ್ಡಮನಿ, ಕಾಶಿಂ ಸವಣೂರ, ಮುಕ್ತಿಯಾರ ಜಮಾದಾರ, ಬೇಫಾರಿ, ಸೇರಿದಂತೆ ಸಮಾಜದ ಗುರು ಹಿರಿಯರು, ಯುವಕರು ಉಪಸ್ಥಿತರಿದ್ದರು.