ಬೀಳಗಿ - ಉಜ್ಜಿನಿ ಬಸ್ ಪ್ರಯಾಣಕ್ಕೆ ಶಾಸಕ ಜೆ ಟಿ ಪಾಟೀಲ ಚಾಲನೆ.
ಬೀಳಗಿ 15: ಪಟ್ಟಣ ದಿಂದ ಉಜ್ಜಿನಿಗೆ ತೆರಳಲು ಎರಡು ನೂತನ ಬಸ್”ಗಳಿಗೆ ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷರು,ಶಾಸಕ ಜೆ.ಟಿ.ಪಾಟೀಲ ಚಾಲನೆ ನೀಡಿದರು. ಮತಕ್ಷೇತ್ರದ ಜನರು ವಿವಿಧ ಪುಣ್ಯಕ್ಷೇತ್ರಗಳಿಗೆ ತೆರಳೋದಕ್ಕೆ ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಗಿತ್ತು, ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯಶ್ರೀಗಳು ಹಾಗೂ ಶ್ರೀ ಕಲ್ಮಠದ ಗುರುಪಾದ ಶಿವಾಚಾರ್ಯ ಶ್ರೀಗಳು ನೂತನ ಬಸ್ ಗೆ ಪೂಜೆ ಸಲ್ಲಿಸಿದ ಬಳಿಕ ಬಸ್’ ಚಲಾಯಿಸಿ ಪ್ರಯಾಣಿಕರ ಪ್ರಯಾಣಕ್ಕೆ ಚಾಲನೆ ನೀಡಿದರು.ನಿತ್ಯ ಬೆಳಿಗ್ಗೆ 9 ಗಂಟೆಯಿಂದ ಬೀಳಗಿಯಿಂದ ಬಾಗಲಕೋಟೆ ಗದಗ ಮಾರ್ಗವಾಗಿ ಉಜ್ಜಿನಿಗೆ ಈ ಬಸ್’ಗಳು ಪ್ರಯಾಣ ಬೆಳೆಸಲಿವೆ.
ಈಗಾಗಲೇ ಸಿಂದಗಿ,ಗದಗ,ಸೇರಿ ಎರಡು ಮೂರು ಘಟಕದ ಬಸ್ ಉಜ್ಜನಿಗೆ ಹೋಗುತ್ತಿವೆ,ಬೀಳಗಿಯಿಂದ ಬಸ್ ಸಂಚಾರ ಆರಂಭ ಮಾಡಿದ್ದು ಒಳ್ಳೆಯ ವಿಚಾರ,ಪೂಜೆ ಸಲ್ಲಿಸಿ ಪೂಜ್ಯರಿಗೆ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡು ಬನ್ನಿ ಎಂದು ಚಾಲಕರಿಗೆ ರುದ್ರಮುನಿ ಶಿವಾಚಾರ ಶ್ರೀಗಳು ಹೇಳಿದರು. ಈ ಸಂದರ್ಭದಲ್ಲಿ ಡಾ:ಎಸ್ ಎಚ್ ತೆಕ್ಕೆನ್ನವರ ಅಣವೀರಯ್ಯ ಪ್ಯಾಟಿಮಠ, ಪಡೆಯಪ್ಪ ಕರಿಗಾರಿ್ಡಪೋ ಮ್ಯಾನೇಜರ್ ಐ ಎಸ್ ನಾಯ್ಕರ, ಗುರುನಾಥ ಗಾಣಿಗೇರ,ಪಿ ಎಸ್ ಮೋದಿ,ಹಣಮಂತ ಜಲ್ಲಿ,ಚಿದಾನಂದ ನಂದ್ಯಾಳ,ಇಸ್ಮಾಯಿಲ್ ಬೀಳಗಿ ಹಾಗೂ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ,ವಿವಿಧ ಇಲಾಖೆಗಳ ಅಧಿಕಾರಿಗಳು,ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.