ಸಿಸಿಎಲ್ ಐದನೇ ಆವೃತ್ತಿಯಲ್ಲಿ ಎಮ್.ಜೆ ಕಿಂಗ್ಸ್ ತಂಡವು ಚಾಂಪಿಯನ್
ಮುಂಡಗೋಡ 23: ತಾಲೂಕು ಕ್ರೀಡಾಂಗಣದಲ್ಲಿ ಕೆಲವು ದಿನಗಳಿಂದ ನಡೆದ ಸಿಸಿಎಲ್ ಕಿಕ್ರೆಟ ಪಂದ್ಯಾವಳಿಯ ಐದನೇ ಆವೃತ್ತಿಯಲ್ಲಿ ಎಮ್.ಜೆ ಕಿಂಗ್ಸ್ ತಂಡವು ವಿಜೇತರಾಗಿದ್ದಾರೆ. ಮುಂಡಗೋಡ ತಾಲೂಕು ಕ್ರೀಡಾಂಗಣದಲ್ಲಿ ಸಿಸಿಎಲ್ ಕ್ರಿಕೆಟ್ ಪಂದ್ಯದಲ್ಲಿ ನಡೆದ ಗಂಬರ್ ಬಾಯ್ಸ್ ಹಾಗೂ ಎಮ್.ಜೆ ಕಿಂಗ್ಸ್ ತಂಡದ ನಡುವೆ ಫೈನಲ್ ಪಂದ್ಯ ನಡೆಯಿತು.
ಎಮ್ ಜೆ ಕಿಂಗ್ಸ್ ತಂಡವು 33 ರನ್ನಗಳಿಂದ ಅಂತರದಿಂದ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಪ.ಪಂ ಸದಸ್ಯರು ಫಣಿರಾಜ ಹದಳಗಿ ಮತ್ತು ಜಮೀರ ಅಹಮ್ಮದ್ ದರ್ಗಾವಲೆ ಪ್ರಶಸ್ತಿ ವಿತರಿಸಿದರು. ತುಕಾರಾಮ ತಟ್ಟಹಳ್ಳಿ ನಿರೂಪಿಸಿದರು. ಮಂಜುನಾಥ ಕ್ಯಾಲಕೋತಿ ಕ್ರೀಡಾಕೂಟ ಆಯೋಜಿಸಿದ್ದರು.