ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಎಂ ಎ ನಾಯ್ಕರ ನಾಮಪತ್ರ ಸಲ್ಲಿಕೆ

M.A. Nayak files nomination for Sangh office bearer elections

ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಎಂ ಎ ನಾಯ್ಕರ ನಾಮಪತ್ರ ಸಲ್ಲಿಕೆ

ಗದಗ  10 : ಇದೇ ದಿನಾಂಕ 26 ರಂದು ಜರುಗುವ ಗದಗ ಜಿಲ್ಲಾ ವಕೀಲರ ಸಂಘದ ಸನ್ 2025-27 ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಗಾಗಿ ಖ್ಯಾತ ಹಿರಿಯ ನ್ಯಾಯವಾದಿ ಮಹಾಂತೇಶ ಅಯ್ಯಪ್ಪ ನಾಯ್ಕರ (ಎಮ್ ಎ ನಾಯ್ಕರ ) ವಕೀಲರು ತಮ್ಮ ಅಪಾರ ಬೆಂಬಲಿಗರೊಂದಿಗೆ ಚುನಾವಣಾ ನಾಮಪತ್ರವನ್ನು ಇದೇ ದಿನಾಂಕ 09/04/2025 ರಂದು ಸಹಾಯಕ ಚುನಾವಣಾ ಅಧಿಕಾರಿಗಳಾದ ಎಮ್ ಎಸ್ ಹಾಳಕೇರಿ ಯವರಿಗೆ ಸಲ್ಲಿಸಿದರು.                    ಈ ಸಂಧರ್ಭದಲ್ಲಿ ಗದಗ ಜಿಲ್ಲಾ ವಕೀಲರ ಸಂಘದ ನ್ಯಾಯವಾದಿಗಳಾದ ಸುರೇಶ ಬಿಸನಳ್ಳಿ,  ರಾಘವೇಂದ್ರ ಶಿಸ್ತೇಗಾರ,ಮಹೇಶ್ ಬೋಜೇದಾರ,ರಾಜೇಂದ್ರ ಕಣಕಿಕೊಪ್ಪ, ವಿನಾಯಕ ಕೌಜಗೇರಿ, ಪಿ ಬಿ ಗಾಳಿ, ಎಸ್ ಎಸ್ ಹೂಗಾರ ಎಸ್ ಸಿ ಮಾಕಾಪೂರ, ಕೆ ಎಫ್ ದೊಡ್ಡಮನಿ, ಶ್ರೀಕಾಂತ್ ಮದ್ಲಿ, ಎಮ್ ಏನ್ ಅರವಟಗಿ, ವೆಂಕಟೇಶ್ ಕನ್ಯಾಳ ಸ್ವಾತಿ ಬಾತಾಖಾನಿ, ವಿದ್ಯಾ ಬೇವಿನಕಟ್ಟಿ, ದೀಪಾ ಹದ್ಲಿ, ಎಮ್ ಏನ್ ಗೋಡಿ, ಅನಿಲ ಶಿಂಗಟಾಲಕೇರಿ ಹಾಗೂ ಸಮಸ್ತ ವಕೀಲ ಭಾಂದವರು ಉಪಸ್ಥಿತರಿದ್ದರು.