ಎಮ್. ಆರ್.ಎನ್ ಸೌಹಾರ್ದ ಪತ್ತಿನ ಸಂಘದ ಶಾಖೆ ಉದ್ಘಾಟನೆ
ರಾಯಬಾಗ 27: ಜಮಖಂಡಿಯ ವಿಶಾಲ (ಎಮ್. ಆರ್.ಎನ್) ಸೌಹಾರ್ದ ಪತ್ತಿನ ಸಹಕಾರಿ ಸಂಘದ 7ನೇ ಶಾಖೆಯನ್ನು ಬುಧವಾರ ಉದ್ಘಾಟಿಸಲಾಯಿತು.
ಅಧ್ಯಕ್ಷ ಸಂಗಮೇಶ್ ನಿರಾನಿ ಹಾಗೂ ಉಪಾಧ್ಯಕ್ಷ ಹೊಳಬಸಪ್ಪ ಬಾಳಶೆಟ್ಟಿ ಇವರ ನೇತೃತ್ವದಲ್ಲಿ ಯಶಸ್ಸಿಯಾಗಿ ಮುನ್ನಡೆಯುತ್ತಿರುವ ವಿಶಾಲ (ಎಮ್. ಆರ್.ಎನ್) ಸೌಹಾರ್ದ ಪತ್ತಿನ ಸಹಕಾರಿ ಸಂಘವು, ಇಂದು ರಾಯಬಾಗ ಪಟ್ಟಣದಲ್ಲಿ 7ನೇ ಶಾಖೆಯನ್ನು ಪ್ರಾರಂಭಿಸಲಾಗಿದೆ, ಇದರ ಸದುಪಯೋಗವನ್ನು ಪಟ್ಟಣದ ಜನರು ಪಡೆದುಕೊಳ್ಳಬೇಕೆಂದು ಮುಧೋಳ ಶಾಖೆಯ ಡೆಪ್ಯುಟಿ ಜನರಲ್ ಮ್ಯಾನೆಜರ ಹನುಮಂತ ಬಂಡಗಣಿ ಹೇಳಿದರು.
ಜನರಲ್ ಮ್ಯಾನೇಜರ್ ಬಿ.ಜಿ.ಹಿಪ್ಪರಗಿ ಎಮ್.ಎಚ್.ಪತ್ತೆನ್ನವರ, ಪಿ.ಜಿ.ಮೂಡಲಗಿ, ಬಿ. ಆರ್. ನೇಜಿ, ಶಂಕರ ನಾಯಿಕ, ಸಂಜು ಚೌಗಲಾ, ದೀಪಕ ಪಾಟೀಲ, ಸಂಜು ಮಠಪತಿ ಸೇರಿ ಅನೇಕರು ಇದ್ದರು.