ಪೌರಕಾರ್ಮಿಕರನ್ನು ಪ್ರೀತಿಯಿಂದ ಕಾಣಿರಿ: ಶಾಸಕ ಚರಂತಿಮಠ

ಬಾಗಲಕೋಟೆ: ನಗರ ಹಾಗೂ ಮನೆಗಳ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡುವುದು ಹಾಗೂ ಗಲೀಜನ್ನು ನಿತ್ಯ ಶುಚಿಗೊಳಿಸುವ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರನ್ನು  ಪ್ರೀತಿಯಿಂದ ಕಾಣಬೇಕು ಎಂದು ಶಾಸಕರಾದ ವೀರಣ್ಣ ಚರಂತಿಮಠ ಹೇಳಿದರು.

ನಗರದ ದುಗರ್ಾ ನಗರದ ವಾರ್ಡ ನಂ.15ರಲ್ಲಿ ಕಾರ್ಮಿಕರ ದಿನಾಚರಣೆ ನಿಮಿತ್ತ ನಗರದ ಪೌರ ಕಾಮರ್ಿಕರಿಗೆ ನಗರಸಭೆ ಸದಸ್ಯ ಅಯ್ಯಪ್ಪ ವಾಲ್ಮೀಕಿಯವರು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕರು ಮಾತನಾಡಿದರು.

ನಗರದಲ್ಲಿ ಸ್ವಚ್ಛ ಪರಿಸರ ಕಾಪಾಡಿಕೊಳ್ಳಲು ಪೌರ ಕಾರ್ಮಿಕರ ಪಾತ್ರವೂ ಮುಖ್ಯ ಇದೆ.ಯಾವುದೇ ಅಸೂಹೆಪಟ್ಟುಕೊಳ್ಳದೇ ಕಾರ್ಮಿಕರು  ನಗರದಲ್ಲಿ ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡುತ್ತಾರೆ ಹೀಗಾಗಿ ಕಾರ್ಮಿಕರನ್ನು  ಗೌರವಿಸಬೇಕು ಎಂದು ಸಲಹೆ ನೀಡಿದರು.

ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಹ ಪೌರ ಕಾರ್ಮಿಕರ ಪಾದಪೂಜೆ ಮಾಡಿದ್ದನ್ನು ಉದಾಹರಣೆ ನೀಡಿದ ಶಾಸಕರು ಪೌರ ಕಾಮರ್ಿಕರು ಸ್ವಾಭಿಮಾನದ ಬದುಕು ಸಾಗಿಸುವರು.ಅವರನ್ನು ನಗರದ ಜನತೆಯನ್ನು ಪ್ರೀತಿಯಿಂದ ಕಾಣಬೇಕು ಎಂದು ಹೇಳುವ ಮೂಲಕ ಪ್ರತಿಯೊಬ್ಬ ಕಾಮರ್ಿಕರಿಗೆ ಕಾಮರ್ಿಕ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.

ದುಗರ್ಾ ನಗರದ ವಾರ್ಡ ನಂ.15ರ ನಗರಸಭೆ ಸದಸ್ಯ ಅಯ್ಯಪ್ಪ ವಾಲ್ಮೀಕಿಯವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ರಾಜು ನಾಯ್ಕರ,ಶಾಂತಪ್ಪ ಬಾಡದ,ರಾಜು ಕೋಟಿಕಲ್,ನಾಗರಾಜ್ ಕಟ್ಟಿಮನಿ,ಮಂಜುನಾಥ ಭಜನ್ನವರ,ನಾಗಪ್ಪ ದಳವಾಯಿ,ರವಿ ಅಂಬಿಗೇರ, ಪರಶುರಾಮ ಬಾದಾಮಿ,ಮಂಜು ವಾಲ್ಮೀಕಿ,ಶಂಕರ ಗಣೇಕಲ್,ಹಣಮಂತ ಬಿಚ್ಚೇಲಿ,ಸುರೇಶ ಕುದರಿಕಾರ ವಾಡರ್ಿನ ಪ್ರಮುಖರು ಉಪಸ್ಥಿತರಿದ್ದರು.