ಮಹಾದೇವರ ನೂತನ ಮಹಾ ರಥ ಲೋಕಾರೆ್ಣ
ಬ್ಯಾಡಗಿ 31: ತಾಲೂಕಿನ ಅಗಸನಹಳ್ಳಿ ಗ್ರಾಮದಲ್ಲಿ ಇಂದು ಮಹಾದೇವರ ನೂತನ ಮಹಾರತ ಲೋಕಾರೆ್ಣ. ಆಂಜನೇಯ ಸ್ವಾಮಿ ಹಾಗೂ ಗುದ್ದಮ್ಮ ದೇವಿ ದೇವಸ್ಥಾನದ ಕಳಸಾರೋಹಣ ಮತ್ತು ನವಗ್ರಹ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಭವ್ಯ ಮೆರವಣಿಗೆಯೊಂದಿಗೆ ಬ್ಯಾಡಗಿ ಚಂದ್ರಗುತ್ತಿಮ್ಮ ದೇವಸ್ಥಾನದಿಂದ ವಿವಿಧ ವಾದ್ಯ ವೈಭವಗಳೊಂದಿಗೆ ಹಾಗೂ ತುಂಬಾ ಕುಂಭೋತ್ಸವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವದೊಂದಿಗೆ ಸಂಚರಿಸುತ್ತಾ ಆಂಜನೇಯ ದೇವಸ್ಥಾನ ತಲುಪಿತು.ವಿಶೇಷ ಭವ್ಯ ಮೆರವಣಿಗೆಯಲ್ಲಿ ನಂದಿಕೋಲು ಮಹಿಳೆಯರು ಡೊಳ್ಳು ಹಾಗೂ ನೂರಾರು ಮಹಿಳೆಯರು ಕುಂಭ ಹೊತ್ತು ಸಾಗಿದ್ದು ವಿಶೇಷತೆ ಇತ್ತು.ನಾಳೆ 30 ರಂದು ಬೆಳಿಗ್ಗೆ 10, ಗಂಟೆಗೆ ಸಭಾ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಬ್ಬಿಣ ಕಂತಿ ಮಠ ರಟ್ಟಹಳ್ಳಿ ಹಾಗೂ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುಪ್ಪಿನ ಮಠ ಬ್ಯಾಡಗಿ ಹಾಗೂ ರಾಚಯ್ಯ ಶಾಸ್ತ್ರಿಗಳು ಗುರು ಕುಮಾರೇಶ್ವರ ಧಾರ್ಮಿಕ ಪಾಠಶಾಲೆ, ಸಂಚಾಲಕರು ಹಾಗೂ ಅಧ್ಯಕ್ಷತೆಯನ್ನು ಬಸವರಾಜ್ ಶಿವಣ್ಣನವರ್ ಶಾಸಕರು ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಬ್ಯಾಡಗಿ ಮತ್ತು ಮಾಜಿ ಶಾಸಕರಾದ ಸುರೇಶ್ ಗೌಡ ಪಾಟೀಲ್.
ಮಾಜಿ ವಿರುಪಾಕ್ಷಪ್ಪ ಬಳ್ಳಾರಿ ಎಸ್‌ಆರ್ ಪಾಟೀಲ್ ಹಾಗೂ ಬಾಲಚಂದ್ರ ಗೌಡ ಪಾಟೀಲ್ ಬಸವರಾಜ ಚತ್ರದ ಕುಮಾರ್ ಗೌಡ ಪಾಟೀಲ ಪಾಲ್ಗೊಳ್ಳಲಿದ್ದಾರೆ ಈ ಸಂದರ್ಭದಲ್ಲಿ ಬೀರ್ಪ ಬಣಕಾರ.ಭರಮಪ್ಪ ಗಾಜೇರ.ಗಂಗಣ್ಣ ಚೌಡಪ್ಪನವರ.ಸುಭಾಶ ಡಾವಣಗೇರಿ ಗುಡ್ಡಪ್ಪ ಕನವಳ್ಳಿ.ಗುಡ್ಡಪ್ಪ ಹಳ್ಹಳಿ.ದೆವೆಂದ್ರ ಚೌಡಪ್ಪನವರ.ಮಾದೇವಪ್ಪ ಓಲೇಕಾರ.ಪ್ರಕಾಶ ತಾವರಗಿ.ಸಿದ್ದಣ್ಣ ಮಾತನವರ.ನಾಗರಾಜ ಗುತ್ತಲ.ಊರಿನ ಗಣ್ಯ ವ್ಯಕ್ತಿಗಳು ಹಾಗೂ ಊರು ನಾಗರೀಕರು ಉಪಸ್ಥಿತರಿದ್ದರು.