ಶ್ರೀನಿವಾಸ್ ಕಾಕಿ ಅವರಿಗೆ ಲಂಡನ್ ಪಾರ್ಲಿಮೆಂಟರಿ ಲೀಡರ್ಶಿಫ್ ಅವಾರ್ಡ
ರಾಣೇಬೆನ್ನೂರು 03: ಮನುಷ್ಯನ ಸಾಧನೆಗೆ ಯಾವುದೇ ಮಿತಿ ಇಲ್ಲ. ಸಾಧನೆ ಎನ್ನುವುದು ನಮ್ಮ ಸುತ್ತಮುತ್ತಲ ಸಮಾಜ ಮತ್ತು ಪರಿಸರದಿಂದಲೇ ಬರಬೇಕು, ಅಂತಹ ಸೇವೆ ಮಾಡುವ ಗುಣ ನಮ್ಮ ಕಾಕಿ ಕುಟುಂಬದವರಿಗೆ ಮೊದಲಿನಿಂದಲೂ ಬಂದಿದೆ. ಎಂದು ಸಾಮಾಜಿಕ ಚಿಂತಕ, ಕಾಕಿ ಜನ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕಾಕಿ, ಹೇಳಿದರು.
ಅವರು, ತಮ್ಮ ಗ್ರಹ ಸಭಾ ಕಚೇರಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ, ಲಂಡನ್ ಪಾರ್ಲಿಮೆಂಟರಿ ಲೀಡರ್ಷಿಪ್ ಅವಾರ್ಡ, ತಮಗೆ ಸಂದ ಸಂದರ್ಭವನ್ನು ವಿವರಿಸಿ ಮಾತನಾಡಿದರು. ತಮ್ಮ ಜೀವನದಲ್ಲಿ ಎಂದೆಂದಿಗೂ, ಪ್ರಶಸ್ತಿ, ಬಿರುದು, ಬಾವಲಿಗಳನ್ನು ಬಯಸಿದವರಲ್ಲ. ಕಾಕಿ ಕುಟುಂಬ, ಮತ್ತು, ತಂದೆಯವರು ಹಾಕಿಕೊಟ್ಟ ಕಾಯಕವನ್ನು ಮುನ್ನಡೆಸಿಕೊಂಡು ಬಂದಿದ್ದೇವೆ.ಅದರಲ್ಲಿ ಮತ್ತು ಜನರ ಸೇವೆಯಲ್ಲಿ ಸಂತೃಪ್ತಿಯನ್ನು ಕಾಣುತ್ತಿದ್ದೇವೆ ಎಂದರು.
ರಾಣೆಬೆನ್ನೂರು ಸೇರಿದಂತೆ ತಾಲೂಕು, ಜಿಲ್ಲೆ, ಮತ್ತು ನಾಡಿನ ಜನತೆಗೆ, ತಮ್ಮ ತಂದೆಯವರ ಕಾಲದಿಂದಲೂ ಅತೀ ಕಡಿಮೆ ಬೆಲೆಯಲ್ಲಿ ಲಕ್ಷಾಂತರ ನಿವೇಶನಗಳನ್ನು ಒದಗಿಸಿದ ಕೀರ್ತಿ ನಮ್ಮ ಕಾಕಿ ಕುಟುಂಬಕ್ಕೆ ಇದೆ, ಇದು ನಮಗೆ ಅತ್ಯಂತ ಹೆಮ್ಮೆಯ ಸಂಗತಿ.
ಲಂಡನ್ ಪಾರ್ಲಿಮೆಂಟರಿ ಲೀಡರ್ ಶಿಪ್ ಅವಾರ್ಡ್ ಸಿಕ್ಕಿರುವುದಕ್ಕೆ, ವ್ಯಕ್ತಿತ್ವ ನಿರೂಪಿಸುವಂತಹ ಜೆಸಿ ಸಂಸ್ಥೆಯು, ಕೊಟ್ಟ ಮಾಹಿತಿ, ಮಾರ್ಗದರ್ಶನ ಮತ್ತು ಸಂಘಟನೆ ಇದು ಬಹು ಪ್ರಮುಖ ಕಾರಣವಾಗಿದೆ. ಎಂದು ಶ್ರೀನಿವಾಸ್ ಅವರು ಹರ್ಷ ವ್ಯಕ್ತಪಡಿಸಿದರು.
ಧನ, ಕನಕ,ಅಧಿಕಾರ, ಆಸ್ತಿ ಯಾವುದು ಶಾಶ್ವತವಲ್ಲ ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟುಕೊಂಡವರು ನಾವು. ನಾವು ಮತ್ತು ನಮ್ಮ ಕುಟುಂಬ ಮಾಡಿದ, ಸೇವೆಗಾಗಿ ಲೀಡರ್ ಶಿಫ್ ಪಾರ್ಲಿಮೆಂಟರಿ ಪದವಿ ದೊರಕಿರುವುದು ಜೀವನದಲ್ಲಿ ಮರೆಯಲಾರದ ಕ್ಷಣವಾಗಿದೆ ಎಂದರು. ಪತ್ನಿ ಶ್ರೀಮತಿ ರೂಪಾ ಕಾಕಿ ಅವರು ಮಾತನಾಡಿ. ಸಮಾಜಮುಖಿ ಕಾರ್ಯಗಳಲ್ಲಿ ನಾವೆಲ್ಲರೂ ದಿನನಿತ್ಯವೂ ಸಂತೋಷ ಪಡುತ್ತೇವೆ. ಜನಸೇವೆಯೇ ಜನಾರ್ದನ ಸೇವೆ ಎನ್ನುವ ತಾತ್ವಿಕ ಸಂದೇಶದ ವಾಣಿ ನಮ್ಮ ಕುಟುಂಬದ ಬದುಕಿನಲ್ಲಿ ಧೇಯ ವಾಕ್ಯವಾಗಿದೆ ಎಂದರು.
ಪತಿ, ಶ್ರೀನಿವಾಸ್ ಅವರಿಗೆ ಒದಗಿ ಬಂದ ಈ ಪದವಿ ಪ್ರಶಸ್ತಿಯು ನಮಗೆಲ್ಲರಿಗೂ ತುಂಬಾ ಸಂತೋಷ ನೀಡಿದೆ. ಇದೆಲ್ಲವೂ ಕುಟುಂಬದ ಹಿರಿಯರ ಆಶೀರ್ವಾದ ಮತ್ತು ಭಗವಂತನ ಕೃಪೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮಾಧ್ಯಮಗೋಷ್ಠಿಯಲ್ಲಿ,ಪ್ರೊ,ಶಿವಾನಂದ ಬಗಾದಿ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಶಿವಣ್ಣ ಬಣಕಾರ, ಅಮಿತ್, ಅಂಕಿತ, ಪಾಂಡಪ್ಪ ಸುರಹೊನ್ನಿ, ರಾಜು ಬೂದೂರ ಮತ್ತಿತರರು ಉಪಸ್ಥಿತರಿದ್ದರು.