ಲೋಕಸಭಾ ಚುನಾವಣೆ: ಮತದಾರರ ಪರಿಷ್ಕರಣೆ ಸಭೆ

ಲೋಕದರ್ಶನ ವರದಿ

ಕಂಪ್ಲಿ 19:ತಾಲ್ಲೂಕಿನ ಪುರಸಭೆ ಸಭಾಂಗಣದಲ್ಲಿ 2019ರ ಲೋಕಸಭಾ ಚುನಾವಣೆ ಹಿನ್ನಲೆ ಹಮ್ಮಿಕೊಂಡ ಕಂಪ್ಲಿ ಕ್ಷೇತ್ರದ ಮತದಾರರ ಪರಿಷ್ಕರಣೆ ಸಭೆ ಶನಿವಾರ ನಡೆಯಿತು.

ತಹಶೀಲ್ದಾರ್ ಎಂ.ರೇಣುಕಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ, ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ 239 ಮತಗಟ್ಟೆಗಳಿವೆ. ಪ್ರಸ್ತುತ 1.07.029 ಪುರುಷರು, 1.08.387 ಮಹಿಳೆಯರು ಸೇರಿ 2.15.416 ಮತದಾರರು ಪರಿಷ್ಕರಣೆಯ ಸೇರ್ಪಡೆಯಲ್ಲಿದ್ದಾರೆ. ಈ ಹಿಂದೆ ಇದ್ದ ನಂ.10 ಮುದ್ದಾಪುರದ 23ಎ ಈಗ 19 ಆಗಿದೆ. ರಾಮಸಾಗರ 23ಎಎಯಿಂದ 25ಗೆ, ಮೆಟ್ರಿ 30ಎ-33ಗೆ, ಉಪ್ಪಾರಹಳ್ಳಿ 33ಎ-37, ಶ್ರೀರಾಮರಂಗಾಪುರ 48ಎ-53, ಕಂಪ್ಲಿ 64ಎ-70 ಹಾಗೂ 72ಎ-79 ಆಗಿದೆ. ಅಲ್ಲದೆ, ಇನ್ನೂ ಹಲವು ಮತಗಟ್ಟೆ ಸಂಖ್ಯೆಗಳು ಬದಲಾವಣೆಗೊಂಡಿವೆ. ಮತದಾರರ ಪಟ್ಟಿಯಲ್ಲಿ 2019ರ ಜನವರಿ-1ಕ್ಕೆ 18 ವರ್ಷ ತುಂಬಿದ ಯುವಕ-ಯವತಿಯರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಬಹುದು. ಮತದಾರರ ಪಟ್ಟಿಯಲ್ಲಿ ಹೊಸ ಹೆಸರು, ತಿದ್ದುಪಡಿ, ವಗರ್ಾವಣೆ ಸೇರಿ ಇತರೆ ಅಜರ್ಿಗಳೊಂದಿಗೆ ಸರಿಪಡಿಸಿಕೊಳ್ಳಲು ಜನರು ಜಾಗೃತಿವಹಿಸಬೇಕಾಗಿದೆ. ಆ.25ರಂದು ಮತದಾರರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ದಿನಾಚರಣೆ ಸಂದರ್ಭದಲ್ಲಿ ಅಂಗನವಾಡಿ ಬಿಎಲ್ಒಗಳು ಕಡ್ಡಾಯವಾಗಿ ಕರ್ತವ್ಯದಲ್ಲಿ ನಿರತರಾಗಿರಬೇಕು. ಹೊಸ ಮತದಾರರ ಹೆಸರು ನೊಂಧಣಿ, ತಿದ್ದುಪಡಿಯ ಅಜರ್ಿಗಳನ್ನು ಸಲ್ಲಿಸಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಕುರುಗೋಡು ತಹಶೀಲ್ದಾರ್ ಎಂ.ಬಸವರಾಜ, ಉಪ ತಹಶೀಲ್ದಾರ್ಗಳಾದ ಬಿ.ರವೀಂದ್ರಕುಮಾರ್, ಶೇಕ್ಷಾವಲಿ, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಅಧ್ಯಕ್ಷ ಎಂ.ಸುಧೀರ್, ಸದಸ್ಯರಾದ ಸಿ.ಆರ್.ಹನುಮಂತ, ಗೆಜ್ಜಳ್ಳಿ ಬಾಷಾ, ಶಿರಸ್ತೇದಾರ ಎಸ್.ಶ್ರೀಧರ್, ಕಂದಾಯ ಅಧಿಕಾರಿ ಎಸ್.ಎಸ್.ತಂಗಡಗಿ, ಎಫ್ಡಿಎ ಪ್ರಸನ್ನ, ಮಾಲತೇಶ್ ದೇಶಪಾಂಡೆ, ಎಸ್ಡಿಎ ರಾಘವೇಂದ್ರ, ಗ್ರಾಪಂಲೆಕ್ಕಾಧಿಕಾರಿ ಆತೀಫ್, ಪುರಸಭೆ ಸಿಬ್ಬಂದಿ ಚಿದಾನಂದ, ಉಪನ್ಯಾಸಕರಾದ ರುದ್ರೇಶ್, ಟಿಎಂಆರ್ ರಾಜ್ಮಾ, ತಾವರ್ಯ ನಾಯ್ಕ, ಮುಖಂಡರಾದ ಪಿ.ಮೂಕಯ್ಯಸ್ವಾಮಿ, ಬೇರ್ಗಿ ಮಹೇಶಗೌಡ, ಬಿ.ಸಿದ್ದಪ್ಪ, ಜಿ.ಸುಧಾಕರ, ನಾಗೇಶ್ವರರಾವ್, ಪಾಂಡುರಂಗ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.