ಭಾಷಾಭಿಮಾನ ಕೇವಲ ಪುಸ್ತಕ ಅಥವಾ ಭಾಷಣದ ಸರಕಾಗಬಾರದು

Linguistics should not be a mere matter of books or speeches

ಭಾಷಾಭಿಮಾನ ಕೇವಲ ಪುಸ್ತಕ ಅಥವಾ ಭಾಷಣದ ಸರಕಾಗಬಾರದು  

ರಾಣೇಬೆನ್ನೂರ  28 : ದಿನಗಳೆದಂತೆ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ, ನೆಲ, ಜಲ, ಗಡಿ ಮತ್ತಿತರ ಸಮಸ್ಯೆಗಳಿಂದಾಗಿ  ಮುಂದಿನ ದಿನಮಾನಗಳಲ್ಲಿ ಕನ್ನಡಕ್ಕೆ ಗಂಡಾಂತರ ಬರಬಹುದು, ಈ ನಿಟ್ಟಿನಲ್ಲಿ ಈಗಿನಿಂದಲೇ ಕನ್ನಡಾಭಿಮಾನಿಗಳು ಜಾಗ್ರತೆ ವಹಿಸಬೇಕು ಎಂದುಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ ಮಂಜುನಾಥ ದೇವ ಹೇಳಿದರು.    ಇಲ್ಲಿನ ಮಾರುತಿ ನಗರದಲ್ಲಿ ಕನ್ನಡ ಜಾಗೃತಿ ವೇದಿಕೆ ಹಾಗೂ ಕಾಕಿ ಜನಸೇವಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ  69ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಜೋಗತಿ ನೃತ್ಯ ಹಾಗೂ ಜಾನಪದ ಸಂಗೀತ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಭಾಷೆ ಎಂಬುದು ಬದುಕಿಗೆ ಪೂರಕ ಮತ್ತು ಪ್ರೇರಕವಾಗಿದೆ. ಭಾಷೆಯು ನಮ್ಮ ಬುದ್ಧಿಶಕ್ತಿ ಮತ್ತು ವಿವೇಕವನ್ನು ವಿಸ್ತರಿಸುತ್ತದೆ. ಕೇವಲ ಕನ್ನಡ ರಾಜ್ಯೋತ್ಸವದಂದು ಉತ್ತಮ ಬಟ್ಟೆಯುಟ್ಟು ಬಾವುಟದೊಂದಿಗೆ ಸಾಗಿದರೆ ಭಾಷಾಭಿಮಾನ ಮೂಡದು. ಭಾಷಾಭಿಮಾನ ಕೇವಲ ಪುಸ್ತಕ ಅಥವಾ ಭಾಷಣದ ಸರಕಾಗಬಾರದು ಎಂದರು.   

 ಬದಲಾಗಿ ಕನ್ನಡವೇ ಉಸಿರಾಗಿಸಿಕೊಂಡು ಪ್ರತಿಯೊಬ್ಬರಲ್ಲಿ ಮೇಳೈಸಬೇಕು. ಅಲ್ಲದೇ ಹೊಸ ತಲೆಮಾರಿನವರಲ್ಲಿ ಕನ್ನಡದ ಬಗ್ಗೆ ಅಭಿಮಾನ, ಭಕ್ತಿ ಮೂಡಿಸುವಂತ ಕಾರ್ಯ ನಿರಂತರವಾಗಿ ನಡೆಯಬೇಕು. ಇಲ್ಲದಿದ್ದರೆ. ಪ್ರಮುಖ ನಗರಗಳಿಂದ ಕನ್ನಡವು ಕಾಣದಂತೆ ಮಾಯವಾಗಿ ಕೈಲಾಸ ಸೇರಿಕೊಳ್ಳುವ ಅಪಾಯವಿದೆ.  ಕನ್ನಡ ಚಿತ್ರರಂಗದ ಉದಯೋನ್ಮುಖ ನಾಯಕ ನಟ ಅಂಕುಶ ಏಕಲವ್ಯ,  ಕನ್ನಡ ಜಾಗೃತಿ ವೇದಿಕೆ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ದುಗ್ಗತ್ತಿ  ಮಾತನಾಡಿದರು. ಇದೇ ಸಂದರ್ಭದಲ್ಲಿ  ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.  

ಜಾನಪದ ಕಲಾವಿದ ಶಿವಕುಮಾರ ಜಾಧವ್, ಹನುಮಂತಪ್ಪ ಚಳಗೇರಿ. ಓಂಕಾರ​‍್ಪ ಅರ್ಕಾಚಾರಿ . ಪ್ರಭಾಕರ ಶಿಗ್ಲಿ. ಕೊಟ್ರೇಶಪ್ಪ ಎಮ್ಮಿ. ಕವಿತಾ ಪೇಟೆಮಠ. ಮಂಜುನಾಥ ಕೋಲಕಾರ, ಎಚ್ ಆರ್ ಶಿವಕುಮಾರ್, ರೇಣುಕಾ ಲಮಾಣಿ, ದಿವ್ಯಾ ಬೆಂಗಳೂರು ಮತ್ತಿತರರು ಇದ್ದರು. ಕಲಾವಿರಾದ ಪರಶುರಾಮ ಬಣಕಾರ, ಶಿವಕುಮಾರ ಜಾಧವ್, ಚಂದ್ರ​‍್ಪ ದೊಡ್ಡಮನಿ, ರಾಜು ಸೂರ್ವೆ, ಉದಯರಾಜ್ ಕೊಳಜಿ, ಮಣಿಕಂಠ ಬಣಕಾರ, ರೇಣುಕಾ ಮರಾಠೆ, ವಿಜಯ ಬಣಕಾರ, ಗಂಗಾ ಮೊಟೇಬೆನ್ನೂರು ರವರಿಂದ ಜೋಗತಿ ನೃತ್ಯ ಹಾಗೂ ಜಾನಪದ ಸಂಗೀತ ಸೇವೆ   "ಸಂಕ್ರಾಂತಿ ಸುಗ್ಗಿ ಹೊಡೆಯೋಣ ಹುಗ್ಗಿ" ಪ್ರೇಕ್ಷಕರ ಗಮನ ಸೆಳೆದವು.