ಆಯುಷ್ಮಾನ ಭಾರತ-ಆರೋಗ್ಯ ಕರ್ನಾ ಟಕ: ಪಾಕ್ಷಿಕ ಆಚರಣೆ

ಬೆಳಗಾವಿ, 19: ಆಯುಷ್ಮಾನ ಭಾರತ-ಆರೋಗ್ಯ ಕನರ್ಾಟಕ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾ ರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಸದರಿ ಯೋಜನೆಯ ಮಾಹಿತಿಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಉಪನಿರ್ದೇ ಶಕರಾದ ಡಾ. ಅಪ್ಪಾಸಾಹೇಬ.ಎಂ.ನರಟ್ಟಿ ಅವರು ತಿಳಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ವೈದ್ಯಕೀಯ ವಿಜ್ಞಾನ ಸಂಸ್ಥೆ, ವಾತರ್ಾ ಮತ್ತು ಪ್ರಚಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಇವರ ಸಹಯೋಗದಲ್ಲಿ "ಆಯುಷ್ಮಾನ ಭಾರತ-ಆರೋಗ್ಯ ಕನರ್ಾಟಕ "ಪಾಕ್ಷಿಕ ಆಚರಣೆ ಅಂಗವಾಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮಾಹಿತಿ ಕಾರ್ಯಾ ಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ಯೋಜನೆಯಡಿಯಲ್ಲಿ ಬಿಪಿಎಲ್ ಕುಟುಂಬಗಳಿಗೆ ಒಂದು ವರ್ಷಕ್ಕೆ ರೂ. 5.00 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಎಪಿಎಲ್ ಕುಟುಂಬಗಳಿಗೆ ಸಕರ್ಾರಿ ಪ್ಯಾಕೇಜ ದರದ ಶೇ.30 ರಷ್ಟು ವೆಚ್ಚ ಲಭ್ಯವಿದ್ದು ವಾಷರ್ಿಕಮಿತಿ ಪ್ರತಿ ಕುಟುಂಬಕ್ಕೆ ರೂ.1.50 ಲಕ್ಷ ಇರುತ್ತದೆ ಎಂದು ತಿಳಿಸಿದರು. 

ಬಿಮ್ಸ ಆಸ್ಪತ್ರೆ ಪ್ರಭಾರಿ ವೈದ್ಯಕೀಯ ಅಧೀಕ್ಷಕರಾದ ಡಾ.ದಂಡಗಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಆಯುಷ್ಮಾನ ಭಾರತ-ಆರೋಗ್ಯ ಕನರ್ಾಟಕ ಯೋಜನೆ ಜಿಲ್ಲಾ ಆಸ್ಪತ್ರೆಯಲ್ಲಿಯೂ ಲಭ್ಯವಿದ್ದು ಅರ್ಹ ಫಲಾನುಭವಿಗಳು ಇದರ ಲಾಭ ಪಡೆದುಕೊಳ್ಳಬಹುದಾಗಿದೆ ಎಂದು ಸಭೆಗೆ ತಿಳಿಸಿ ಯೋಜನೆಯ ಕುರಿತು ಸವಿಸ್ತಾರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಡಾ.ಹುಸೇನಸಾಬ ಖಾಜಿ ಜಿಲ್ಲಾ ಶಸ್ತ್ರಚಿಕಿತ್ಸಕರು ಜಿಲ್ಲಾ ಆಸ್ಪತ್ರೆ ಬೆಳಗಾವಿ, ಡಾ.ಚಾಂದನಿ ದೇವಡಿ ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿಗಳು ಹಾಗೂ ಆಯುಷ್ಮಾನ ಭಾರತ-ಆರೋಗ್ಯ ಕನರ್ಾಟಕ ಜಿಲ್ಲಾ ನೋಡಲ್ ಅಧಿಕಾರಿಗಳು. ಡಾ.ಅನಿಲ ಕೊರಬು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು, ಡಾ: ಸಂಜಯ ಢುಮ್ಮಗೋಳ ತಾಲೂಕಾ ಆರೋಗ್ಯಾಧಿಕಾರಿಗಳು ಬೆಳಗಾವಿ ಬಿ.ಪಿ ಯಲೀಗಾರ ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ನಾಗರಾಜ ಹೊನ್ನಪ್ಪಗೌಡ ಜಿಲ್ಲಾ ಸಂಯೋಜಕರು ಬೆಳಗಾವಿ ಹಾಗೂ ಅಜೀತ ಕಾಂಬ್ಳೆ ಜಿಲ್ಲಾ ಸಂಯೋಜಕರು ಚಿಕ್ಕೋಡಿ  ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ.ಎಸ್.ಟಿ.ಕಳಸದ ನಿದರ್ೇಶಕರು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳಗಾವಿ ಇವರು ಮಾತನಾಡಿ ಆಯುಷ್ಮಾನ ಭಾರತ-ಆರೋಗ್ಯ ಕರ್ನಾ ಟಕ ಯೋಜನೆಯಲ್ಲಿ ಒಟ್ಟು 1650 ವಿಧಾನಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ರೋಗಿಗಳು ತಮ್ಮ ಪಡಿತರ ಚೀಟಿ ಮತ್ತು ಆಧಾರ ಕಾರ್ಡನೊಂದಿಗೆ ಹತ್ತಿರದ ಸಕರ್ಾರಿ ಆಸ್ಪತ್ರೆಗೆ ಹೋಗಬೇಕು. ಯೋಜನೆಯಲ್ಲಿ ನೋಂದಣಿ ಮಾಡಿ ಎವಿ-ಎಆರ್ಕೆ ಆರೋಗ್ಯ ಕಾರ್ಡ ಪಡೆಯಬಹುದು, ಸದರಿ ಸಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.

ಅದೇ ಸಕರ್ಾರಿ ಆಸ್ಪತ್ರೆಯು ಚಿಕಿತ್ಸೆ ನೀಡುವ ಸಾಮಥ್ರ್ಯ ಹೊಂದಿದ್ದಲ್ಲಿ ಅಲ್ಲಿಯೇ ರೋಗಿಗೆ ಚಿಕಿತ್ಸೆ ನೀಡಲಾಗುತ್ತದೆ. ಸದರಿ ಸಕರ್ಾರಿ ಆಸ್ಪತ್ರೆಯ ಚಿಕಿತ್ಸೆ ನೀಡುವ ಸಾಮಥ್ರ್ಯವನ್ನು ಹೊಂದಿಲ್ಲದಿದ್ದರೆ ರೆಫರಲ್ ನೀಡಲಾಗುತ್ತದೆ.ರೇಪರಲ್ ಪಡೆದುಕೊಂಡು ರೋಗಿಯು ತಾನು ಇಚ್ಚಿಸುವ ಯಾವದೇ ನೊಂದಾಯಿತ ಖಾಸಗಿ ಅಥವಾ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ತುತರ್ುಚಿಕಿತ್ಸೆಗೆ ಯಾವದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಖಾಸಗಿ ಅಥವಾ ಸಕರ್ಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು. ರೋಗಿಯ ಆರೋಗ್ಯ ಸ್ಥಿತಿ  ಸ್ಥಿರಗೊಂಡ ಕೂಡಲೇ ಚಿಕಿತ್ಸೆ ನೀಡಿದ ಆಸ್ಪತ್ರೆಗೆ ಪಡಿತರ ಚೀಟಿಯನ್ನು ಸಲ್ಲಿಸಬೇಕೆಂದು ತಿಳಿಸಿದರು.

ಪ್ರಾರಂಭದಲ್ಲಿ ಶ್ರೀಮತಿ ನೇತ್ರಾವತಿ ಹಾಗೂ ನಾಗಲಕ್ಷ್ಮಿ  ಪ್ರಾಥರ್ಿಸಿದರು, ಕಿರಿಯ ಮಹಿಳಾ ಆರೋಗ್ಯ ಸಹಾಕೀಯರ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿ ಗಳು  ನಾಡಗೀತೆ ಹಾಡಿದರು, ಡಾ: ಶೈಲಜಾ ತಮ್ಮಣ್ಣವರ ಅಪರ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು ಚಿಕ್ಕೋಡಿ  ಇವರು ಸ್ವಾಗತಿಸಿದರು.    ಆಯುಷ್ಮಾನ  ಭಾರತ-ಆರೋಗ್ಯ ಕನರ್ಾಟಕ ಯೋಜನೆ ಕುರಿತು ಡಾ.ವ್ಹಿ.ಡಿ ಡಾಂಗೆ ಪ್ರಾದೇಶಿಕ ಸಮಾಲೋಚಕರು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ ಬೆಳಗಾವಿ ಇವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಆಯುಷ್ಮಾನ ಭಾರತ ಆರೋಗ್ಯ ಕನರ್ಾಟಕ ಯೋಜನೆಯು ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯಾಗಿದ್ದು ಈ ಯೋಜನೆಯಡಿ ಎಲ್ಲ ಬಿಪಿಎಲ್ ಕಾರ್ಡ ಹೊಂದಿರುವ ಬಡವರಿಗೆ ಉಚಿತವಾಗಿ ಹಾಗೂ ಎಪಿಎಲ್ ಕಾರ್ಡ ಹೊಂದಿದವರಿಗೆ ಶೇಕಡಾ 30% ರಷ್ಟು ಚಿಕಿತ್ಸಾ ವೆಚ್ಚವನ್ನು ಭರಿಸಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ ವತಿಯಿಂದ  ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. 

ಈ ಯೋಜನೆಯಡಿ ಆರೋಗ್ಯ ಸೇವೆ ಪಡೆಯಲು ಆಯುಷ್ಮಾನ ಭಾರತ ಆರೋಗ್ಯ ಕರ್ನಾ ಟಕ (ಂಃ-ಂಡಿಞ) ಕಾರ್ಡ ಕಡ್ಡಾಯವಿರುವದಿಲ್ಲ. ರೋಗಿಯು ತಮ್ಮ ಪಡಿತರ ಚೀಟಿ ಮತ್ತು ಆಧಾರ ಕಾರ್ಡ ಸಲ್ಲಿಸಿ ಸೇವೆ ಪಡೆಯಬಹುದು.ಆದಾಗ್ಯೂ ಕೂಡಾ ಯೋಜನೆಯ ಸೇವೆಗಳು ಸುಲಲಿತವಾಗಿ ಹಾಗೂ ಸರಳಿಕೃತವಾಗಿ ಪಡೆಯಲು ಂಃ-ಂಡಿಞ ಕಾರ್ಡಗಳನ್ನು ವಿತರಿಸಲಾಗುತ್ತದೆ. ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆ, 9 ತಾಲೂಕಾ ಆಸ್ಪತ್ರೆಗಳು ಹಾಗೂ 16 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೂ.10/- ಶುಲ್ಕದೊಂದಿಗೆ ಬಿಳಿ (ಂ4) ಹಾಳೆಯ ಮೇಲೆ ಮಾಹಿತಿಯನ್ನು ಮುದ್ರಿಸಿ ನೀಡಲಾಗುತ್ತಿದೆ. 

ಸಾರ್ವಜನಿಕರ ಅನೂಕಲಕ್ಕಾಗಿ ಸಕರ್ಾರಿ ಸ್ವಾಮ್ಯದ ಬೆಳಗಾವಿ ಕೆ.ಒನ್-4  ಹಾಗೂ 95 ಸೇವಾಸಿಂದೂ ಕೇಂದ್ರಗಳ ಮುಖಾಂತರ ರೂ.10/- ಶುಲ್ಕದೊಂದಿಗೆ ಬಿಳಿ (ಂ4) ಹಾಳೆಯ ಮೇಲೆ ಅಥವಾ ರೂ.35/- ಶುಲ್ಕದೊಂದಿಗೆ ಂಃ-ಂಡಿಞ  ಕಾರ್ಡಗಳನ್ನು ಪಡೆಯಬಹುದು. ಈ ಯೋಜನೆಯಲ್ಲಿ 1650 ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಲಭ್ಯವಿದೆ. ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸೆಗಳನ್ನು ಸಕರ್ಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತದೆ. ಕ್ಲಿಷ್ಟಕರ ದ್ವಿತೀಯ ಹಂತದ 254 ಮತ್ತು ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುತರ್ು ಚಿಕಿತ್ಸೆಗಳನ್ನು ನೋಂದಾಯಿತ ಸರ್ಕಾ ರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬಹುದು. 169 ತುತರ್ು ಚಿಕಿತ್ಸೆಗಳಿಗೆ ಯಾವದೇ ರೆಫರಲ್ ಇಲ್ಲದೇ ನೇರವಾಗಿ ನೋಂದಾಯಿತ ಆಸ್ಪತ್ರೆಗೆ  ಹೋಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಡಾ.ಐ.ಪಿ ಗಡಾದ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ವಂದಿಸಿದರು. ಸಿ ಜಿ ಅಗ್ನಿಹೋತ್ರಿ ಕಾರ್ಯಕ್ರಮ ನಿರೂಪಿಸಿದರು.