ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ20: ಗ್ರಂಥಾಲಯಗಳು ಸಾಧಕರಿಗೆ ಪೂರಕವಾಗಿದ್ದು, ವಿದ್ಯಾಥರ್ಿಗಳು ಹೆಚ್ಚೆಚ್ಚು ಗ್ರಂಥಾಲಯದೊಂದಿಗಿನ ಸಂಬಂಧವನ್ನು ಹೊಂದಿರಬೇಕು ಎಂದು ಜಿ.ಪಂ.ಮಾಜಿ ಸದಸ್ಯ ಅಕ್ಕಿತೋಟೇಶ್ ಅಭಿಪ್ರಾಯ ವ್ಯೆಕ್ತಪಡಿಸಿದರು.
ತಾಲೂಕಿನ ತಂಬ್ರಹಳ್ಳಿಯ ಗ್ರಾ.ಪಂ.ಗ್ರಂಥಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಗ್ರಂಥಾಲಯಗಳ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಂಥಾಲಯಗಳು ಈಗಿನ ಸಮಯ ಸಾಕಾಗುವುದಿಲ್ಲ, ಇನ್ನೂ ಹೆಚ್ಚಿನ ಸಮಯದಲ್ಲಿ ಕಾರ್ಯನಿರ್ವಹಿಸಿದರೆ, ಸಾರ್ವಜನಿಕರಿಗೆ ಅನುಕೂಲವಾಗುತ್ತೆ ಎಂದರಲ್ಲದೆ.
ಗ್ರಂಥಾಲಯಕ್ಕೆ ಸುಸಜ್ಜಿತವಾದ ಕಟ್ಟಡ ಸೇರಿದಂತೆ ಇತರೆ ಸೌಲಭ್ಯಗಳನ್ನು ಹೊಂದಲು, ಬೇರೆಬೇರೆ ಸಂಪನ್ಮೂಲಗಳ ಕೃಢಿಕರಿಸುವ ಜೊತೆಗೆ ಯಾವ ಅನುಧಾನದಲ್ಲಿ ಸೌಕರ್ಯ ವಿದೆಯೋ ಅದನ್ನು ಬಳಸಿಕೊಳ್ಳುವಲ್ಲಿ ಪ್ರಯತ್ನಿಸಿ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಜಿ.ಪಂ.ಮಾಜಿ ಸದಸ್ಯರಾದ ಎಚ್.ಬಿ.ನಾಗನಗೌಡ್ರು ಮಾತನಾಡಿ, ಗ್ರಂಥಾಲಯದಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗುತ್ತೆ. ಇಲ್ಲಿಯ ಸಂಪರ್ಕದಿಂದ ಸಾಹಿತ್ಯ ಬೆಳೆಯುತ್ತೆ. ಅಕ್ಷರಜ್ಞಾನ ತಿಳಿಯುತ್ತೆ. ಪ್ರಪಂಚದ ವಿಷಯಕೂಡ ಗಮನಕ್ಕೆ ಬರುತ್ತೆ. ಒಟ್ಟಾರೆ ಇದೊಂದು ಜ್ಞಾನಭಂಡಾರವೆಂದರು. ಅಲ್ಲದೆ, ಸ್ಪಧರ್ಾತ್ಮಕ ಪರಿಕ್ಷೆಗಳಿಗೆ ವಿದ್ಯಾಥರ್ಿಗಳಿಗೆ ಸಹಕಾರಿಯಾಗಿರುತ್ತೆ. ಮಹಿಳೆಯರು ಕೂಡ ಈ ಗ್ರಂಥಾಲಯದ ಬಳಕೆಗೆ ಮುಂದಾಗಿ ಎಂದರು.
ಇದೇ ವೇದಿಕೆಯಲ್ಲಿ ತಾಲೂಕಿನ ಬೆಣಕಲ್ಲು ಗ್ರಾ.ಪಂ.ಗ್ರಂಥಾಲಯ ಪಾಲಕ ರಂಗಣ್ಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಗ್ರಾಮದವರಿಗೂ ಮತ್ತು ಏಳನೇ ತರಗತಿಯಿಂದ ಪಿ.ಯು.ಸಿ.ಯವರೆಗೆ ಅತಿ ಹೆಚ್ಚು ಅಂಕಪಡೆದ ವಿದ್ಯಾಥರ್ಿಗಳಿಗೂ ಸನ್ಮಾನ ಸಮಾರಂಭ ಜರುಗಿತು. ನಂದಿ ಪಿ.ಯು.ಕಾಲೇಜ್ನ ಉಪನ್ಯಾಸಕ ಗದುಗಿನ ಹನುಮಂತಪ್ಪನವರು ಇಂದಿನ ವಿದ್ಯಾಥರ್ಿಗಳು ಮತ್ತು ಗ್ರಂಥಾಲಯಗಳು ಕುರಿತು ಉಪನ್ಯಾಸ ನೀಡಿದರು. ರಾಜ್ಯಮಟ್ಟದ ಉತ್ತಮ ಗ್ರಂಥಾಪಾಲಕರ ಪ್ರಶಸ್ತಿಗೆ ಗ್ರಾಮದ ಗ್ರಂಥಾಪಾಲಕ ಪಾಂಡುರಂಗ ಆಯ್ಕೆಯಾಗಿದ್ದು ಸಾರ್ವಜನಿಕರು ಅಭಿನಂದಿಸಿದರು.
ತಂಬ್ರಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಗೌಸಿಯಾಬೇಗಂ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಬಿ.ರತ್ನಮ್ಮ ಚನ್ನಪ್ಪ, ಸದಸ್ಯರಾದ ಕೊರವರ ದೇವಮ್ಮ, ತಳವಾರ ಹನುಮಂತಮ್ಮ, ಎಸ್.ಬಿ.ಹರೀಶ್, ಖಾಜಾಬನ್ನಿ ಶಬ್ಬೀರ್ಸಾಬ್, ಮೊರಾಜರ್ಿ ವಸತಿ ಶಾಲೆಯ ಪ್ರಾಂಶುಪಾಲರಾದ ಯಮನೂರಸ್ವಾಮಿ, ಗ್ರಾಮದ ಪ.ಪೂ.ಕಾಲೇಜ್ನ ಉಪನ್ಯಾಸಕ ಆನೇಕಲ್ ಕೊಟ್ರೇಶ್, ಸ.ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಎಸ್.ವಿ.ಪಾಟೀಲ್, ಎ.ವಿರುಪಾಕ್ಷಯ್ಯ, ದೇವಿಪ್ರಸಾದ್, ಕೆ.ಕೊಟ್ರೇಶ್, ವಿವಿಧ ಕಡೆಯಿಂದ ಆಗಮಿಸಿದ್ದ ಗ್ರಂಥಾಪಾಲಕರಾದ ತಾಲೂಕಿನ ಹ್ಯಾಳದ ಲೋಕೇಶ್, ಬನ್ನಿಗೋಳದ ಕೆ.ಮಂಜುನಾಥ, ಕಡಲಬಾಳಿನ ಚನ್ನಬಸಪ್ಪ ಇದ್ದರು.
ಸಂಗೀತ ಶಿಕ್ಷಕಿ ಸುರೇಖಾ ಮತ್ತು ಮೊರಾಜರ್ಿ ವಸತಿ ಶಾಲಾ ವಿದ್ಯಾಥರ್ಿಗಳು ಪ್ರಾಥರ್ಿಸಿದರು. ಕೊಟ್ಟೂರಿನ ಶಾಖಾ ಗ್ರಂಥಾಲಯದ ಅಧಿಕಾರಿ ಗುಡ್ಲನೂರು ಮಲ್ಲಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಗೋವಿಂದ ಸುಣಗಾರ್, ಪ್ರದೀಪ, ಹುಸೇನ್ ಭಾಷ ಕಾರ್ಯಕ್ರಮ ನಿರ್ವಹಿಸಿದರು.