ಮಕ್ಕಳಿಗೆ ಕೃಷಿ ಕೆಲಸವನ್ನು ಕಲಿಸೋಣ: ಹೆಗಡೆ

ಲೋಕದರ್ಶನ ವರದಿ

ಸಿದ್ದಾಪುರ: ಕಲಿತವರು ಕೃಷಿ ಕೆಲಸ ಮಾಡಬಾರದಾ? ಸಕರ್ಾರ ಕಲಿತವರಿಗೇಷ್ಟು ಜನರಿಗೆ ನೌಕರಿ ಕೊಡುತ್ತದೆ. ಮಕ್ಕಳಿಗೆ ಒಂದು ಸಣ್ಣ ಕೆಲಸವನ್ನು ಮಾಡಿಸದೆ ನಮ್ಮ ಕಾಲಮೇಲೆ ನಾವೇ ಕಲ್ಲು ಹಾಕಿಕೊಳ್ಳುತ್ತಿದ್ದೇವೆ. ಮಕ್ಕಳಿಗೆ ಕೃಷಿ ಕೆಲಸವನ್ನು ಕಲಿಸೋಣ ಎಂದು ಜಿಲ್ಲಾ ಪಂಚಾಯತ ಸದಸ್ಯ ಎಂ.ಜಿ.ಹೆಗಡೆ ಗೆಜ್ಜೆ ಅಭಿಪ್ರಾಯಪಟ್ಟರು.

ಅವರು ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಉತ್ತರ ಕನ್ನಡ, ತಾಲೂಕು ಆಡಳಿತ ಸಿದ್ದಾಪುರ, ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜೂನ 19 ರಿಂದ 27 ರ ವರೆಗೆ ನಡೆಯುವ  ಸಮಗ್ರ ಕೃಷಿ ಅಭಿಯಾನ 2019-20 ರ ಚಾಲನೆ ನೀಡಿ  ಮಾತನಾಡುತ್ತಿದ್ದರು.

ಆನರು ಜನಪ್ರತಿನಿಧಿಗಳನ್ನು ದೂರುವುದನ್ನು ಬಿಟ್ಟು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಯಶಸ್ಸು ಸಾಧ್ಯ. ಹಾಗೇನೆ ಇಲಾಖೆಗಳಲ್ಲಿ ಸಿಗುವ ಸವಲತ್ತುಗಳನ್ನು ಪಡೆಯಲು ಸಾಧ್ಯ. ಕೃಷಿಯಲ್ಲಿ ನಾವು ತೊಡಗಿಕೊಳ್ಳದಿದ್ದರೆ ಅಧೋಗತಿಗೆ ಹೋಗುತ್ತೇವೆ. ಆದ್ದರಿಂದ ಎಲ್ಲರೂ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ನೀಡಿದರು.್ನು ಕಲಿಸೋಣ.? ಸಕರ್ಾರ ಕಲಿತವರಿಗೆಷ್ಟು ಜನರಿಗೆ ನೌಕರಿ ಕೊಡುತ್ತದೆ.  ಕೃಷಿಯನ್ನು ಮಾಡಬೇಕು ಎಂದರು.ುಗಳಿವೆಗೆ ತ

ಜಿಲ್ಲಾ ಪಂಚಾಯತ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ ಮಾತನಾಡಿ ಸಮಾಜದಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಹೆಚ್ಚಿನ ಗೌರವ ಇದೆ ಎಂಬ ಭಾವನೆಯಿಂದ ಯುವ ಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇದರಿಂದ ಮುಂದಿನ ಜೀವನದಲ್ಲಿ ಬಹು ದೊಡ್ಡ ತೊಂದರೆ ಅನುಭವಿಸಬೇಕಾಗುತ್ತದೆಇಲಾಖೆಗಳ ನಡಿಗೆ  ರೈತರ ಬಾಗಿಲಿಗೆ ಇನ್ನುವ ಧ್ಯೇಯದಡಿ ಎಲ್ಲಾ ಇಲಾಖೆಗಳು ರೈತ ಬಾಗಿಲಿಗೆ ಬರುತ್ತಿವೆ. ಇದರಿಂದ ನೀವು ಹತ್ತಾರು ಬಾರಿ ತಾಲೂಕಿಗೆ ತಿರುಗಾಡುವುದು ತಪ್ಪುತ್ತದೆ. ನೀವು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ಸಬ್ಸಿಡಿಗಳನ್ನು ನಮ್ಮ, ಹಾಗೂ ದೇಶದ ಅಭಿವೃಧ್ಧಿ ಬಳಸಬೇಕು.  ಕೃಷಿಯಲ್ಲಿ ಹತ್ತಾರು ಸವಾಲುಗಳಿವೆ. ಆದರೂ ಕೃಷಿ ಬಿಟ್ಟರೆ ಜೀವನ ಕಷ್ಠ. ಯುವ ಪಿಳಿಗೆಯು ಕೃಷಿಯೇತರ ಚಟುವಟಿಕೆಯಂತೆ  ಕೃಷಿಯನ್ನು ಮಾಡಬೇಕು ಎಂದರು. 

ತಾಲೂಕ ಪಂಚಾಯತ ಅಧ್ಯಕ್ಷ ಸುಧೀರ್ ಗೌಡರ್  ಅಧ್ಯಕ್ಷತೆ ವಹಿಸಿದ್ದರು.  ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಸುಮಂಗಲಾ ವಸಂತ ನಾಯ್ಕ., ತಾ.ಪಂ ಸದಸ್ಯ ವಿವೇಕ ಭಟ್, ತಹಶೀಲ್ದಾರ ಗೀತಾ .ಸಿ.ಜೆ, ಸಹಾಯಕ ಕೃಷಿ ನಿದರ್ೇಶಕ ದೇವರಾಜ ಆರ್, ಪಶುಸಂಗೋಪನಾ ಇಲಾಖೆಯ ನಂದಕುಮಾರ ಪೈ, ಹಿರಿಯ ತೋಟಗಾರಿಕಾ  ನಿದರ್ೇಶಕ ಮಹಾಬಲೇಶ್ವರ ಹೆಗಡೆ, ಕೃಷಿ ಮಾರುಕಟ್ಟೆಯ ಕಾರ್ಯದಶರ್ಿ ಮಂಗೇಶ ನಾಯ್ಕ, ಆತ್ಮ ಯೋಜನೆಯ ಉಪ ನಿದರ್ೇಶಕ ಎಸ್.ಕೆ.ಬೀರಾದಾರ ಉಪಸ್ಥತರಿದ್ದರು. ಕೃಷಿ ಅಧಿಕಾರಿ ಪ್ರಶಾಂತ ನಿರೂಪಿಸಿ ಸ್ವಾಗತಿಸಿದರು.