ಲೋಕದರ್ಶನ ವರದಿ
ತಾಳಿಕೋಟೆ 22: ಜಮ್ಮು ಕಾಸ್ಮೀರದ ಪುಲ್ವಾಮಾದದಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ಯೋಧರಿಗೆ ತಾಳಿಕೋಟೆ ಪಟ್ಟಣದ ನಾಗರಿಕರ ವತಿಯಿಂದ ಜ್ಯೋತಿಯಾತ್ರೆಯ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಜ್ಯೋತಿಯಾತ್ರೆಯ ನಂತರ ವಿಜಯಪುರ ವೃತ್ತದಲ್ಲಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಎಸ್.ಎಸ್.ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ ಮಾತನಾಡಿ ಉಗ್ರರ ಗುಂಪೂಂದು ಪುಲ್ವಾಮಾದ ಗೋರಿಪುರ ಪ್ರದೇಶದಲ್ಲಿ ಸಾಗುತ್ತಿದ್ದ ಸಿಆರ್ಪಿಎಫ್ ಯೋಧರ ವಾಹನಗಳ ಮೇಲೆ ಆತ್ಮಾಹುತಿ ಬಾಂಬ್ದಾಳಿ ನಡೆಸಿ 42 ಜನ ಭಾರತೀಯ ವೀರ ಯೋಧರನ್ನು ಹತ್ಯೆನಡೆಸಿರುವದು ಅತ್ಯಂತ ಖಂಡನಿಯವಾಗಿದೆ ತಮ್ಮ ಹೇಡಿತನದ ಕೃತ್ಯದಿಂದ ದಾಳಿಮಾಡಿದ ಉಗ್ರರಿಗೆ ಹೆರೆಮುಡಿ ಕಟ್ಟುವಂತಹ ಕಾರ್ಯ ಕೂಡಲೇಆಗಬೇಕಿದೆ ಅತ್ಯಂತ ಅಮಾನವೀಯ ರೀತಿಯಲ್ಲಿ ನಡೆದ ಈ ಆತ್ಮಾಹುತಿ ದಾಳಿಯು ಇಡೀ ಮಾನವ ಸಮಾಜದ ಮೇಲೆ ನಡೆದ ದಾಳಿಯಾಗಿದೆ. ಯಾವ ಧರ್ಮವು ಹಿಂಸೆಯನ್ನು ಭೋಧಿಸುವದಿಲ್ಲ. ಎಲ್ಲ ಧರ್ಮಗಳು ಶಾಂತಿಯ ಸಂದೇಶ ನೀಡುತ್ತವೆ. ಆದರೆ ಪಾಕಿಸ್ತಾನ ದೇಶ ಹಿಂಸೆಯ ಪ್ರತಿರೂಪ ಎಂಬುದನ್ನು ಮತ್ತೇ ತೋರಿಸಿಕೊಟ್ಟಿದೆ ಅಂತಹ ದೇಶವನ್ನು ನಿನರ್ಾಮ ಮಾಡುವದು ಮತ್ತು ಆದೇಶದ ಮೇಲೆ ಯುದ್ದ ಸಾರುವದು ಅತ್ಯವಶ್ಯಕವಾಗಿದೆ ಹುತಾತ್ಮರ ಯೋಧರ ಕುಟುಂಬದ ಸದಸ್ಯರ ಆಕ್ರಂದನಕ್ಕೆ ಸಾಂತ್ವನ ಸಿಗಬೇಕಾದರೆ ಇಂಥಹ ಹೇಡಿಗಳನ್ನು ಹತ್ತಿಕ್ಕುವ ಕೆಲಸ ಆಗಬೇಕಾದರೆ ಭಯೋತ್ಪಾದನೆ ಎಂಬುದೇ ಜೀವಂತವಾಗಿ ಇರಬಾರದೆಂದು ಹೇಳಿದ ನಮ್ಮ ಸಹನೆಯ ಕಟ್ಟೆ ಒಡೆದು ಹೋಗಿದೆ. ಇನ್ನೇನಿದ್ದರೂ ಯುದ್ದ ಒಂದೇ ದಾರಿಯಾಗಿದೆ ಹುತಾತ್ಮರಾದ ಯೋಧರ ಕುಟುಂಭಕ್ಕೆ ಇಡೀ ದೇಶದ ಜನರು ಎಲ್ಲ ರೀತಿಯಿಂದಲೂ ಬೆಂಬಲಕ್ಕೆ ನಿಲ್ಲುತ್ತೇವೆ ಈ ಉಗ್ರರ ದಮನ ಕಾರ್ಯಕ್ಕೆ ಎಲ್ಲರೂ ಪಕ್ಷ ಬೇದವನ್ನು ಮರೆತು ಪ್ರಧಾನಿಯವರನ್ನು ಬೆಂಬಲಿಸಿದ್ದಾರೆ ಕೂಡಲೇ ಉಗ್ರರ ದಮನ ಕಾರ್ಯಕ್ಕೆ ಮುಂದಾಗಬೇಕೆಂದರು.
ಈ ಸಮಯದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ, ಪುರಸಭಾ ಅಧ್ಯಕ್ಷೆ ಅಕ್ಕಮಹಾದೇವಿ ಕಟ್ಟಿಮನಿ, ವೀರುಪಾಕ್ಷಯ್ಯ ಹಿರೇಮಠ, ಕಾಶಿನಾಥ ಮುರಾಳ, ನಿಸಾರ ಬೇಪಾರಿ, ಫಯಾಜ್ ಉತ್ನಾಳ, ಮುರುಗೆಪ್ಪ ಸರಶೆಟ್ಟಿ, ಕಾತರ್ಿಕ ಕಟ್ಟಿಮನಿ, ಲಾಹೋರಿ, ಜೂಲಿ ವಕೀಲರು, ಪವಾಡೆಪ್ಪ ಯಾಳವಾರ, ಒಳಗೊಂಡು ನೂರಾರು ಜನರು ಪಾಲ್ಗೊಂಡು ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿದರು.