ಪ್ರತಿಯೊಬ್ಬರು ಭಾವೈಕ್ಯತೆಯಿಂದ ಜೀವನ ನಡೆಸಿ : ಸಿ.ಆರ್.ಹನುಮಂತ
ಕಂಪಿ 21: ಪಟ್ಟಣದ ಸಂತೆ ಮಾರುಕಟ್ಟೆ ಬಳಿಯಲ್ಲಿರುವ ಬೆಳಗೋಡ್ ಅಗಸಿ ಮಸೀದಿ ಆವರಣದಲ್ಲಿ ಚಲುವಾದಿ ಮಹಾಸಭಾದ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಅಂಜುಮನ್-ಎ-ಖಿದ್ಮತ್-ಎ-ಇಸ್ಮಾಂ ಕಾರ್ಯಕಾರಿ ಸಮಿತಿಗೆ ಆಯ್ಕೆಗೊಂಡ ನೂತನ ಸದಸ್ಯರಿಗೆ ಗುರುವಾರ ಸಂಜೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಜಿಲ್ಲಾಧ್ಯಕ್ಷ ಸಿ.ಆರ್.ಹನುಮಂತ ಮಾತನಾಡಿ, ಹಿಂದೂ ಮತ್ತು ಮುಸ್ಲಿಂ ಸಮಾಜವರು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಜೀವನ ನಡೆಸಿಕೊಂಡು ಬಂದಿದ್ದು, ಇದೇ ತರನಾಗಿ ಪ್ರತಿಯೊಬ್ಬರು ಸಹಭಾಳ್ವೆ, ಸಹಕಾರದಿಂದ ಜೀವನ ನಡೆಸಬೇಕು.
ಇತ್ತೀಚೆಗೆ ಅಂಜುಮನ್-ಎ-ಖಿದ್ಮತ್-ಎ-ಇಸ್ಮಾಂ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ 11 ಜನ ಮುಸ್ಲಿಂ ಸಮಾಜದವರು ನೂತನ ಸದಸ್ಯರಾಗಿ ಆಯ್ಕೆಗೊಂಡಿರುವುದು ಸಂತಸದ ವಿಷಯವಾಗಿದೆ. ನೂತನ ಸದಸ್ಯರು ಸಮಾಜದ ಮುಖಂಡರ ಮಾರ್ಗದರ್ಶನದಲ್ಲಿ ಸಾಗಿಸುವ ಮೂಲಕ ಕಮಿಟಿ ಅಭಿವೃದ್ಧಿಗೆ ಮುಂದಾಗಬೇಕು ಎಂದರು. ನಂತರ ಅಂಜುಮನ್-ಎ-ಖಿದ್ಮತ್-ಎ-ಇಸ್ಮಾಂ ಕಾರ್ಯಕಾರಿ ಸಮಿತಿಯ ನೂತನ ಸದಸ್ಯ ಮೆಹಬೂಬ್ ಮಾತನಾಡಿ, ಹಿಂದೂ-ಮುಸ್ಲಿಂ ಬಾಂಧವರು ಒಮ್ಮತದಿಂದ ಹಬ್ಬ ಹರಿದಿನಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಚಲುವಾದಿ ಮಹಾಸಭಾದಿಂದ ಸನ್ಮಾನಿಸಿರುವುದಕ್ಕೆ ಆಭಾರಿಯಾಗಿದ್ದೇವೆ ಎಂದರು. ಅಂಜುಮನ್-ಎ-ಖಿದ್ಮತ್-ಎ-ಇಸ್ಮಾಂ ಕಾರ್ಯಕಾರಿ ಸಮಿತಿಯ ನೂತನ ಸದಸ್ಯರಾದ ಕೆ.ಮೆಹಬೂಬ್, ಕೆ.ಮಸ್ತಾನ್ ವಲಿ, ಎನ್.ಯುನೂಸ್, ಅತ್ತಾವುಲ್ಲಾ ರೆಹಮಾನ್, ಎ.ಮೌಲಾ ಹುಸೇನ್, ಬಿ.ತೌಸಿಫ್, ಬಿ.ರಿಯಾಜ್, ಅಬ್ದುಲ್ ಕರೀಮ್, ಸೈಯದ್ ಮಹಮ್ಮದ್ ಖಾದ್ರಿ, ಸೈಯದ್ ರಾಜಸಾಬ್, ಯು.ಜಹಿರುದ್ದೀನ್ ಇವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ದೇವೇಂದ್ರ, ತಾಲೂಕು ಅಧ್ಯಕ್ಷ ಬಿ.ನಾಗೇಂದ್ರ, ಗೌರವಾಧ್ಯಕ್ಷ ಎಂ.ಸಿ.ಮಾಯಪ್ಪ, ಮುಖಂಡರಾದ ಕೆ.ರಮೇಶ, ರಾಮಸ್ವಾಮಿ, ಶಂಕ್ರ್ಪ, ನಿಂಗಪ್ಪ, ಚನ್ನಬಸಪ್ಪ, ಯಾಳ್ಪಿ ಅಬ್ದುಲ್ ಮುನಾಫ್, ಅಬ್ದುಲ್ ವಾಹೀದ್, ಬೂದಗುಂಪಿ ಹುಸೇನಸಾಬ್ ಸೇರಿದಂತೆ ಅನೇಕರಿದ್ದರು.
ಡಿ.002: ಪಟ್ಟಣದ ಸಂತೆ ಮಾರುಕಟ್ಟೆ ಬಳಿಯಲ್ಲಿರುವ ಬೆಳಗೋಡ್ ಅಗಸಿ ಮಸೀದಿ ಆವರಣದಲ್ಲಿ ಚಲುವಾದಿ ಮಹಾಸಭಾದಿಂದ ಅಂಜುಮನ್-ಎ-ಖಿದ್ಮತ್-ಎ-ಇಸ್ಮಾಂ ಕಾರ್ಯಕಾರಿ ಸಮಿತಿಗೆ ಆಯ್ಕೆಗೊಂಡ ನೂತನ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.