ಆಧುನಿಕ ತಂತ್ರಜ್ಞಾನ ಬಳಸಿ ಹೂರೆಯಾಗದಂತೆ ಸಾಮಾನ್ಯರಿಗೂ ಸೇವೆ ದೊರೆಯಲಿ- ಕೋಳಿವಾಡ

Let common people get service without being burdened by using modern technology- Koliwada

ಆಧುನಿಕ ತಂತ್ರಜ್ಞಾನ ಬಳಸಿ ಹೂರೆಯಾಗದಂತೆ ಸಾಮಾನ್ಯರಿಗೂ ಸೇವೆ ದೊರೆಯಲಿ- ಕೋಳಿವಾಡ  

 ರಾಣೇಬೆನ್ನೂರು 19:   ಜಾಗತಿಕವಾಗಿ ಇಂದು ಹೊಸ ಹೊಸ, ಆಧುನಿಕ ತಂತ್ರಜ್ಞಾನಗಳು ಲಭ್ಯವಿದೆ  ಅದರ ಮೂಲಕ ಜನಸಾಮಾನ್ಯರಿಗೂ ಹೂರೆಯಾಗದ ರೀತಿಯಲ್ಲಿ, ಇಂಜಿನಿಯರ್ ಗಳು ತಮ್ಮ ಕರ್ತವ್ಯ,, ಮತ್ತು ಕೌಶಲ್ಯ ದಕ್ಷತೆ ಮೆರೆಯಬೇಕಾದ ಇಂದಿನ ಅಗತ್ಯವಿದೆ ಎಂದು ಪ್ರಕಾಶ ಕೋಳಿವಾಡ ಹೇಳಿದರು.  ಅವರು, ಇಲ್ಲಿನ ರಾಜ ರಾಜೇಶ್ವರಿ ನಗರದಲ್ಲಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.  

    ನಿವೇಶನಗಳ ಬೆಲೆಯೂ ಇಂದು ಗಗನಕ್ಕೇರಿವೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರು ಜೀವನಕ್ಕೊಂದು ಸೋರು ನಿರ್ಮಿಸಿಕೊಳ್ಳಬೇಕಾದರೆ, ಹರಸಾಹಪಡುವಂಥಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವ ಶ್ರೀಮಂತ ಎಲ್ಲರೂ ಯೋಜನೆ ರೂಪಿಸಿಕೊಳ್ಳಲು ತಮ್ಮೊಂದಿಗೆ ಚರ್ಚಿಸಲೇಬೇಕು. ಅದಕ್ಕಾಗಿ, ಅವರ ಕನಸಿನ ಮನೆಗಳನ್ನು ನಿರ್ಮಿಸಿಕೊಳ್ಳಲು ಆರ್ಥಿಕ  ಭಾರವಿಲ್ಲದ ರೂಪದಲ್ಲಿ, ಕ್ರಿಯಾಯೋಜನೆ ರೂಪಿಸಲು ಮುಂದಾಗಬೇಕು ಎಂದು ಕರೆ ನೀಡಿದರು.  

          ಅಧ್ಯಕ್ಷತೆ ವಹಿಸಿ, ಮಾತನಾಡಿದ  ಇಂಜಿನಿಯರ್ ಸಂಘದ ಅಧ್ಯಕ್ಷ ಪ್ರಭುದೇವ ಜಿ. ಮುಂಡಾಸದ  ಅವರು, ತಮ್ಮ ಸಂಘದ ಮೂಲಕ, ಹೊಸ ಹೊಸ ಆವಿಷ್ಕಾರಗಳ, ಮತ್ತು ಯೋಜನೆಗಳು ಕುರಿತು ಚಿಂತನೆ ನಡೆಸಿ, ಸಾರ್ವಜನಿಕರಿಗೆ  ಅತ್ಯಂತ ಸರಳ ಮತ್ತು ಆಧುನಿಕ ತಂತ್ರಜ್ಞಾನ ಬಳಕೆಯ ಅತಿ ಕಡಿಮೆ ವೆಚ್ಚದಲ್ಲಿ ಸೇವೆ ನೀಡಲು ಮುಂದಾಗಿದ್ದೇವೆ ಎಂದರು.        ಸರಳ ಪೂಜಾ ಕಾರ್ಯಕ್ರಮದ ಮೂಲಕ ಆರಂಭವಾದ ಸಂಘದ ಸಾರ್ವಜನಿಕ ಸಂಪರ್ಕ ಕಾರ್ಯಾಲಯಕ್ಕೆ ಭೇಟಿ ನೀಡಿದ  ನಗರ,ಜಿಲ್ಲೆಯ ನೂರಾರು ಗಣ್ಯರು, ಹಿರಿಯ ಅಭಿಯಂತರರು ವರ್ತಕರು, ವಿವಿಧ ಇಲಾಖೆಗಳ ಅಧಿಕಾರಿಗಳು  ಶುಭ ಹಾರೈಸಿದರು.  

      ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಪ್ರಕಾಶ್ ಎಸ್ ಗುಡಮಿ, ಕಾರ್ಯದರ್ಶಿ ರಾಕೇಶ ವೈ ರಡ್ಡೇರ, ಖಜಾಂಚಿ, ವಿನಯ್ ಜಿ. ಹರಿಹರ, ಪದಾಧಿಕಾರಿಗಳಾದ, ಎಂ. ಎಂ.ಸೈಕಲಗಾರ, ಭಿಮೇಶ ಬಡಿಗೇರ್, ಅಪ್ರೋಜ್  ಅಲಿ ಮುದೇನೂರ, ನಾಗರಾಜ ಪಾಟೀಲ್, ಇರ್ಷಾದ್ ಅಹ್ಮದ್ ಬಾವಿಕಟ್ಟಿ, ಗೋಪಿ ಕದರಮಂಡಲಗಿ, ಎಸ್‌. ಎಂ. ಬಸವರಾಜ್, ಹಬೀಬ್ ಎನ್‌. ಕೆ., ಸಚಿನ್ ಕೆ. ಎಸ್‌., ವಿನೋದ ಜಂಬಿಗಿ, ಶಶಿಕಾಂತ್ ಕಡೂರ, ಎಸ್‌.ಎಸ್‌.ಬೆಲ್ಲದ, ಸೇರಿದಂತೆ ಮತ್ತಿತರರು ಇದ್ದರು.